ನವದೆಹಲಿ: ನಾನು ದೆಹಲಿಗೆ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಲು ಬಂದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನವದೆಹಲಿಯಲ್ಲಿ ಹೇಳಿದರು.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಡಿ, ನಾನು ದೆಹಲಿಗೆ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಲು ಬಂದಿಲ್ಲ, ತೃತೀಯ ರಂಗದ ನಾಯಕರನ್ನೂ ಭೇಟಿಯಾಗಲು ಬಂದಿಲ್ಲ. ರಕ್ಷಣಾ ಇಲಾಖೆಯ ಸಭೆಯಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದು ತಿಳಿಸಿದರು.


ಕುಮಾರಸ್ವಾಮಿ ಬಜೆಟ್ ಮಂಡನೆ ಖಚಿತ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜುಲೈ 5 ರಂದು ಬಜೆಟ್‌ ಮಂಡಿಸುತ್ತಾರೆ, ಈ ಬಗ್ಗೆ ಆತಂಕ ಬೇಡ ಎಂದ ಎಚ್ಡಿಡಿ, ಬಜೆಟ್‌ 12 ರ ಒಳಗೆ ಪಾಸ್‌ ಆಗಲಿದೆ ಎಂದು ತಿಳಿಸಿದರು.