ಧಾರವಾಡ: ಈಗಿನ ರಾಜಕಾರಣಿಗಳ ಬಗ್ಗೆ ಅಸಹ್ಯ ಎನಿಸುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಷಾಧ ವ್ಯಕ್ತಪಡಿಸಿದ್ದಾರೆ.ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ನೀಡಿರುವ ಹೇಳಿಕೆ ವಿಚಾರವಾಗಿ ಕೋರ್ಟ್ ನೀಡಿರುವ ಎಚ್ಚರಿಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶ್ರೀಸಿದ್ದಿವಿನಾಯಕನ ಸನ್ನಿಧಿಯಲ್ಲಿ ʻಜನʼ ಚಿತ್ರಕ್ಕೆ ಚಾಲನೆ


ನ್ಯಾಯಾಧೀಶರಾದ ದೀಕ್ಷಿತ್ ಅವರು ಸಲಹೆ ಹೇಳಿದ್ದಾರೆ,ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು.ಇದನ್ನು ನಾವು ರಾಜಕಾರಣಿಗಳಾದವರು ತಿಳಿದುಕೊಳ್ಳಬೇಕು. ನ್ಯಾಯಾಧೀಶರು ಉತ್ತಮವಾದ ಸಲಹೆ ಕೊಟ್ಟಿದ್ದಾರೆ.ಆ ಸಲಹೆಯನ್ನು ಎಲ್ಲ ರಾಜಕಾರಣಿಗಳು ಪಾಲಿಸಬೇಕು. ಅವರನ್ನು ಇವರು ಬೈತಾರೆ, ಇವರನ್ನು ಅವರು ಬೈತಾರೆ, ಯಾರಿಗೂ ದೇಶದ ಬಗ್ಗೆ ಚಿಂತನೆ ಇಲ್ಲ. ಈಗಿನ ರಾಜಕಾರಣಿಗಳ ಬಗ್ಗೆ ಅಸಹ್ಯ ಅನಿಸುತ್ತದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ದಕ್ಷಿಣ ಸಿನಿರಂಗಕ್ಕೆ ಎಂಟ್ರಿಕೊಟ್ಟ ಬಾಲಿವುಡ್ ಸ್ಟಾರ್: ಗೂಢಾಚಾರಿ-2 ತಂಡ ಸೇರಿದ ಇಮ್ರಾನ್ ಹಶ್ಮಿ


ಇನ್ನೂ ಮುಂದುವರೆದು ಮಾತನಾಡಿದ ಅವರು '44 ವರ್ಷದಿಂದ ಪರಿಷತ್ ನಲ್ಲಿದ್ದೇನೆ.ಅನೇಕ ಸಲ ಮಂತ್ರಿಯಾಗಿ ನೋಡಿದ್ದೇನೆ. ಆದರೆ ಇವತ್ತಿನ ದಿನ ಮಾನಗಳಲ್ಲಿ ನಡೆದಿರುವುದು ಒಳ್ಳೆಯದಲ್ಲ.ಎಲ್ಲರೂ ತಿಳಿದುಕೊಳ್ಳಬೇಕು ಆತ್ಮವಂಚನೆ ಮಾಡಿಕೊಳ್ಳಬಾರದು.ಬೇಕ ಬೇಕಾದ್ದು ಟೀಕೆ ಟಿಪ್ಪಣಿ ಮಾಡಬಾರದು. ಸಾಮಾನ್ಯ ಜನರಂತೆ ವರ್ತಿಸಿದರೆ ಹೇಗೆ? ಸಾಮಾನ್ಯ ಜನರಿಗೂ ರಾಜಕಾರಣಿಗಳಿಗೂ ವ್ಯತ್ಯಾಸ ಇಲ್ಲದಂತಾಗುತ್ತದೆ. ರಾಜಕಾರಣಿಗಳಿದ್ದವರೂ ಎಲ್ಲರೂ ನ್ಯಾಯಾಧೀಶರ ಸಲಹೆ ಪಾಲಿಸಬೇಕು, ಆಗ ಮಾತ್ರ ಬೇರೆದವರಿಗೆ ಮಾರ್ಗದರ್ಶನ ಮಾಡಲು ಸಾಧ್ಯ" ಎಂದು ಅವರು ತಿಳಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್