ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವ ಚಿಲುಮೆ ಸಂಸ್ಥೆ ವೋಟರ್ ಐಡಿ ಅಕ್ರಮ ಹಗರಣ ದಿನದಿಂದ ದಿನಕ್ಕೆ ಮಹತ್ವ ಪಡೆಯುತ್ತಿದೆ. ದೂರು ನೀಡಿ ವಾಪಸ್‌ ಪಡೆದಿದ್ದ ಸಮನ್ವಯ ಟ್ರಸ್ಟ್‍ನ ಮುಖ್ಯಸ್ಥೆಗೆ ನೋಟಿಸ್ ಜಾರಿ‌ ಮಾಡಲಾಗಿತ್ತು. ಈ ಹಿನ್ನೆಲೆ ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೇಸ್‌ ವಾಪಸ್‌ ಪಡೆಯಲು ಚಿಲುಮೆ ಸಂಸ್ಥೆಯ ಕೆಲವರು ಅವರಿಗೆ ಧಮ್ಕಿ ಹಾಕಿದ್ರಾ ಅನ್ನೋ ಅನುಮಾನ ಮೂಡಿದೆ.     


COMMERCIAL BREAK
SCROLL TO CONTINUE READING

ಚಿಲುಮೆ ಸಂಸ್ಥೆಯ ಹಗರಣದ ಕಥೆ ಈಗಲೇ ಮುಗಿಯುವಂತೆ ಕಾಣುತ್ತಿಲ್ಲ.  ಯಾಕಂದ್ರೆ ಚಿಲುಮೆ ಸಂಸ್ಥೆಯ ವಿರುದ್ಧವಾಗಿ ಸಮನ್ವಯ ಟ್ರಸ್ಟ್‍ನ ಮುಖ್ಯಸ್ಥೆ ಜಿಲ್ಲಾ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು. ಆದರೆ ಅದೇ ದೂರನ್ನು ಮೇಲ್‌ ಮಾಡುವ ಮೂಲಕ ಸುಮಂಗಲಾ ವಾಪಸ್‌ ಪಡೆದುಕೊಂಡಿದ್ದರು. ಆದರೆ ದೂರು ಕೊಡಬೇಕಾದ ವೇಳೆ ಇದ್ದ ಧೈರ್ಯ ಆಮೇಲೆ ಯಾಕೆ ಇರಲಿಲ್ಲ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿವೆ.


ಇದಕ್ಕೆ ಉತ್ತರ ನಾವು ಹೇಳ್ತಿವಿ ಕೇಳಿ. ಸಮನ್ವಯ ಟ್ರಸ್ಟ್‍ನ ದೂರು ನೀಡಿದ ತಕ್ಷಣವೇ ಚಿಲುಮೆ ಸಂಸ್ಥೆಯ ಪ್ರಮುಖ ಆರೋಪಿಗಳಾದ ರವಿಕುಮಾರ್‌, ಧರ್ಮೇಶ್‌ ಹಲವರು ಸುಮಂಗಲರನ್ನು ಭೇಟಿಯಾಗಿದ್ದರು. ನಿಮಗೆಲ್ಲಾ ಇದೆಲ್ಲಾ ಏಕೆ ಬೇಕು. ಇದರ ಹಿಂದೆ ಸಚಿವರು ಹಾಗೂ ಪ್ರಮುಖ ರಾಜಕಾರಗಳಿದ್ದಾರೆ. ಸುಮ್ಮನೆ ರಿಸ್ಕ್‌ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಅಂತಾ ಸ್ವತಃ ಸುಮಂಗಲಾ ಅವರೇ ಹೇಳಿಕೆ ನೀಡಿದ್ದಾರೆ. 


ಇದನ್ನೂ ಓದಿ: ರಾಜಧಾನಿಯ ದಕ್ಷಿಣ ವಲಯದ ಬಹುತೇಕ ರಸ್ತೆಗುಂಡಿ ಕಾಮಗಾರಿ ಕಂಪ್ಲೀಟ್..!


ದೂರು ಕೊಟ್ಟು ವಾಪಸ್‌ ಪಡೆದಿದ್ದ ಸಮನ್ವಯ ಟ್ರಸ್ಟ್ನ ಮುಖ್ಯಸ್ಥೆಗೆ ನೋಟಿಸ್‌ ನೀಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾದ ಸುಮಂಗಲಾ ಇಂದು ಮಧ್ಯಾಹ್ನ(ನ.23) 12 ಗಂಟೆಗೆ ಕಚೇರಿಗೆ ಹಾಜರಾಗಿ ಸುಮಾರು 1 ಗಂಟೆ ಕಾಲ ಆಯುಕ್ತರಿಗಾಗಿ ಕಾಯುವ ಸ್ಥಿತಿ ಎದುರಾಯ್ತು. ಕೊನೆಗೂ 12:45ಕ್ಕೆ ಬಂದ ಆಯುಕ್ತರು ಸುಮಂಗಲಾರನ್ನು 1 ಗಂಟೆ ಕಾಲ ವಿಚಾರಣೆ ನಡೆಸಿದರು.


ವಿಚಾರಣೆ ವೇಳೆ ಪ್ರಾದೇಶಿಕ ಆಯುಕ್ತರು ಸುಮಂಗಲಾರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮಗೆ ಚಿಲುಮೆ ಸಂಸ್ಥೆ ಯಾವಾಗಿಂದ ಗೊತ್ತು?, ಈ ಸಂಸ್ಥೆಗೂ ನಿಮಗೂ ಎಂದಿನಿಂದ ಒಡನಾಟವಿತ್ತು?, ಚಿಲುಮೆ ಸಂಸ್ಥೆ ಮುಖ್ಯಸ್ಥರನ್ನು ಎಷ್ಟು ಬಾರಿ ಭೇಟಿಯಾಗಿದ್ರಿ?, ಚಿಲುಮೆ ಸಂಸ್ಥೆಯ ಜೊತೆ ಹಣಕಾಸು ವ್ಯವಹಾರ ಇತ್ತಾ? ಇತ್ತು ಅಂತಾದ್ರೆ ಅದು ಆನ್‍ಲೈನ್ ಬ್ಯಾಂಕಿಂಗ್ ಅಥವಾ ನಗದು ರೂಪದಲ್ಲೋ?, ಚಿಲುಮೆ ಸಂಸ್ಥೆಯಿಂದ ಈ ಹಿಂದೆ ಯಾವುದು ಸರ್ವೇ ಮಾಡಿದ್ರಿ? ಮಾಡಿದ್ರೆ ಅದು ಯಾವುದು?, ಚಿಲುಮೆ ಸಂಸ್ಥೆ ನಡೆಸಿದ ಸರ್ವೇ ಬಗ್ಗೆ ನಿಮಗೆ ಯಾವಾಗ ಮಾಹಿತಿ ಬಂತು?, ಇನ್ನು ಚಿಲುಮೆ ಸಂಸ್ಥೆ ಬಗ್ಗೆ ನಿಮಗೆ ಯಾವಾಗ ಡೌಟ್ ಬಂತು?, ನೀವು ಯಾವಾಗ ದೂರು ಕೊಟ್ರಿ? ಯಾರ್ಯಾರಿಗೆ ದೂರು ಕೊಟ್ರಿ?, ದೂರು ಬಳಿಕ ನಿಮ್ಮ ಜೊತೆ ಸಂಧಾನಕ್ಕೆ ಯಾರಾದ್ರೂ ಬಂದಿದ್ರಾ? ಅಥವಾ ಬೆದರಿಕೆ ಬಂದಿದ್ವಾ? ಬಂದಿದ್ರೂ ಯಾರಿಂದ? ಮತ್ತು ನಿಮ್ಮ ಸಂಸ್ಥೆಯ ಹಣಕಾಸು ವ್ಯವಹಾರದ ಮಾಹಿತಿ ನೀಡಿ? ಅಂತಾ ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಪ್ರಾದೇಶಿಕ ಆಯುಕ್ತ ಬಿಸ್ವಾನ್ ಕೇಳಿದ್ದಾರೆ.


ಇನ್ನು ಪ್ರಾದೇಶಿಕ ಆಯುಕ್ತರ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ಕೊಟ್ಟ ಸುಮಂಗಲಾ ಅವರು, ಹೌದು ಸರ್ ಚಿಲುಮೆ ಸಂಸ್ಥೆ ಬಗ್ಗೆ ಸೆಪ್ಟೆಂಬರ್ 20ಕ್ಕೆ ಪೊಲೀಸ್ ಆಯುಕ್ತರಿಗೆ, ಬಿಬಿಎಂಪಿ & ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದೆ. ಆದರೆ ಯಾರೂ ಕೂಡ ಕ್ರಮ ಕೈಗೊಳ್ಳಲಿಲ್ಲ. ತದನಂತರ ನವೆಂಬರ್ 3ಕ್ಕೆ ಚಿಲುಮೆ ಸಂಸ್ಥೆ ಮುಖ್ಯಸ್ಥರ ಜೊತೆ ಹತ್ತಕ್ಕೂ ಹೆಚ್ಚು ಜನ ನಮ್ಮ ಕಚೇರಿಗೆ ಬಂದು ದೂರು ವಾಪಸ್ ಪಡೆಯಿರಿ ಅಂತಾ ಧಮ್ಕಿ ಹಾಕಿದ್ರು. ಇದರ ಹಿಂದೆ ದೊಡ್ಡವರ ಕೈವಾಡ ಇದೆ. ದೂರು ವಾಪಸ್ ಪಡೆಯಿರಿ ಅಂತಾ ಬೆದರಿಕೆ  ಹಾಕಿದ್ದರು. ಚುನಾವಣಾ ಆಯೋಗಕ್ಕೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಒತ್ತಾಯಪೂರ್ವವಾಗಿ ನನ್ನ ಕೈಯಿಂದಲೇ ಮೇಲ್ ಮಾಡ್ಸಿದ್ರು ಅಂತಾ ಆರೋಪಿಸಿದ್ದಾರೆ. 


ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಾರದೆಂದು ಜನರು ತೀರ್ಮಾನಿಸಿದ್ದಾರೆ: ಸಿಎಂ ಬೊಮ್ಮಾಯಿ 


ಒಟ್ನಲ್ಲಿ ವಿಚಾರಣೆ ವೇಳೆ ಸುಮಂಗಲಾ ನೀಡಿದ ಹೇಳಿಕೆ ಚಿಲುಮೆ ಸಂಸ್ಥೆ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ? ಅಥವಾ ಪ್ರಭಾವಿಗಳ ಕೈಗೆ ಸಿಲುಕಿ ಈ ಪ್ರರಕಣವೇ ಖುಲಾಸೆಯಾಗುತ್ತದೋ ಅಂತಾ ಕಾದು‌ ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.