Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ

Basavaraj Bommai Clarification: ಅವರು ಇಂದು ಮುರುಘಾ ಮಠದ ಆವರಣದ  ಹೆಲಿಪ್ಯಾಡ್ ನಲ್ಲಿ ಬಂದಿಳಿದು  ಕಾರ್ಯಕ್ರಮಕ್ಕೆ ತೆರಳುವ  ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.  ಪ್ರತಿ ಮನೆಗೆ 10 ಸಾವಿರ ಲೀಟರ್  ಉಚಿತವಾಗಿ ನೀರು ಕೊಡುವ ಬಗ್ಗೆ ಸರ್ಕಾರದ ಆಲೋಚನೆ ಬಗ್ಗೆ ಸುದ್ದಿಗಾರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

Written by - Bhavishya Shetty | Last Updated : Nov 23, 2022, 01:00 PM IST
    • ಚಿತ್ರದುರ್ಗಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ
    • ಬಿಜೆಪಿಯಲ್ಲಿ ಭಿನ್ನಮತವಿಲ್ಲ ಎಂದು ಸ್ಪಷ್ಟನೆ ನೀಡಿದ ಸಿಎಂ
    • ಮುರುಘಾ ಮಠದ ಪ್ರಕರಣ ಸಂಬಂಧಿಸಿ ಶೀಘ್ರ ಕ್ರಮ
Basavaraj Bommai Clarification: “ಬಿಜೆಪಿಯಲ್ಲಿ ಭಿನ್ನಮತವಿಲ್ಲ”.. ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ title=
Basavaraj Bommai

Basavaraj Bommai Clarification: ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರು ಮಂಡಿ ಶಸ್ತ್ರಚಿಕಿತ್ಸೆ ಪಡೆದು  ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ . ಇನ್ನು ಬಿಜೆಪಿಯಲ್ಲಿ ಭಿನ್ನಮತವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮುರುಘಾ ಮಠದ ಆವರಣದ  ಹೆಲಿಪ್ಯಾಡ್ ನಲ್ಲಿ ಬಂದಿಳಿದು  ಕಾರ್ಯಕ್ರಮಕ್ಕೆ ತೆರಳುವ  ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.  

ಇದನ್ನೂ ಓದಿ:  ಶಿವರಾಮ ಕಾರಂತ್ ಬಡಾವಣೆಯ 47 ಕಟ್ಟಡಗಳು ಸಕ್ರಮ: ಸುಪ್ರೀಂ ಕೋರ್ಟ್‌ ಆದೇಶ

ಪ್ರತಿ ಮನೆಗೆ 10 ಸಾವಿರ ಲೀಟರ್  ಉಚಿತವಾಗಿ ನೀರು ಕೊಡುವ ಬಗ್ಗೆ ಸರ್ಕಾರದ ಆಲೋಚನೆ ಬಗ್ಗೆ ಸುದ್ದಿಗಾರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು  ಜೆಡಿಎಸ್ ಗೆ ಬಹುಮತ ಬಂದರೆ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಅದು ಅವರ ಪಕ್ಷದ  ನಿರ್ಣಯ. ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ” ಎಂದರು.

ಶ್ರೀಘ್ರ ಕ್ರಮ:

ಮುರುಘಾ ಮಠದ ಪ್ರಕರಣದ ಬಗ್ಗೆ ಡಿಸಿ ಅವರು ಸರ್ಕಾರಕ್ಕೆ  ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ವರದಿ ಕಾನೂನು ಇಲಾಖೆಯಲ್ಲಿದ್ದು,  ಅತಿ ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ಇದನ್ನೂ ಓದಿ: Transgender Teachers: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿಕ್ಷಕಿಯರಾದ ತೃತೀಯ ಲಿಂಗಿಗಳು

ಮುರುಘಾ ಶ್ರೀ ಅವರ ವಿರುದ್ಧ ಪಿತೂರಿ ನಡೆದಿದೆ ಎಂದು ಪ್ರಕರಣ ದಾಖಲಾಗಿ, ಮಾಜಿ ಶಾಸಕರ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣ ನ್ಯಾಯಾಲಯದಲ್ಲಿದೆ ಪೊಲೀಸ್ ತನಿಖೆ ಮಾಡುತ್ತಿದ್ದಾರೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News