ಬೆಂಗಳೂರು: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗೆ ತೆರೆ ಎಳೆದಿದ್ದು, ನಾನೊಬ್ಬ ದೃಢ ಕಾಂಗ್ರೆಸಿಗ, ನಾನು ಬಿಜೆಪಿ ಸೇರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರೀತಿಯ ಜನರೇ, ನಾನು ಸರ್ವಿಕಲ್ ಡಿಸ್ಕ್ ಬಲ್ಜ್ ಇಂದ ಬಾಧೆಗೊಂಡಿದ್ದೇನೆ ಮತ್ತು ಕೆಲವು ದಿನಗಳಿಂದ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವು ಮಾಧ್ಯಮಗಳು ನಾನು ಜನಾರ್ಧನ ರೆಡ್ಡಿಯವರನ್ನು ಭೇಟಿಯಾಗಿ ಬಿಜೆಪಿ ಸೇರುವವನಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಹಾಸ್ಯಾಸ್ಪದ! ಎಂದಿದ್ದಾರೆ.


[[{"fid":"172889","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸುಧಾಕರ್, ಮಾಧ್ಯಮಗಳು ಕೇವಲ ಟಿ.ಆರ್.ಪಿಗಾಗಿ ವಾಟ್ಯಾಪ್ಪ್ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಬೇಸರ ತಂದಿದೆ. ನಾನೊಬ್ಬ ದೃಢ ಕಾಂಗ್ರೆಸಿಗ. ನನ್ನ ಪಕ್ಷದ ವಿರೋಧಿಗಳೊಂದಿಗೆ  ನಾನೆಂದು ಗುಪ್ತವಾಗಿ ಮಾತನಾಡಿಲ್ಲ ಮತ್ತು ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದವನೊಂದಿಗೆ ಯಾವ ಜನ್ಮದಲ್ಲಿಯೂ ಮಾತನಾಡಲಾರೆ ಎಂದು ತಿಳಿಸಿದ್ದಾರೆ.