ಕಿಡ್ನ್ಯಾಪ್‌ಗೂ ನನಗೂ ಸಂಬಂಧವಿಲ್ಲ, ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ: ಎಚ್.ಡಿ.ರೇವಣ್ಣ
HD Revanna Arrest: ಮಹಿಳೆ ಕಿಡ್ನ್ಯಾಪ್ ಕೇಸ್ನಲ್ಲಿ ಎಚ್.ಡಿ.ರೇವಣ್ಣರನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಇತ್ತ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆ ಮಹಿಳೆಯನ್ನೂ ವಿಚಾರಣೆ ಮಾಡಲಾಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ. SIT ಅಧಿಕಾರಿಗಳ ಪ್ರಶ್ನೆಗಳಿಗೆ ಆಕೆ ಗೊಂದಲದ ಹೇಳಿಕೆ ನೀಡುತ್ತಿದ್ದಾರಂತೆ.
ಬೆಂಗಳೂರು: ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಪೊಲೀಸರು ಮಾಜಿ ಸಚಿವ ಎಚ್.ಡಿ.ರೇವಣ್ಣರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶನಿವಾರ ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ರೇವಣ್ಣರನ್ನು SIT ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ SIT ಅಧಿಕಾರಿಗಳಿಗೆ ರೇವಣ್ಣ ಒಂದೇ ಸಾಲಿನ ಉತ್ತರ ನೀಡುತ್ತಿದ್ದಾರೆಂದು ತಿಳಿದುಬಂದಿದೆ. ನಿನ್ನೆಯಿಂದಲೂ ವಿಚಾರಣೆ ನಡೆದಿದ್ದು, ಇಂದು ಕೂಡ ಮತ್ತೆ ವಿಚಾರಣೆ ನಡೆಸಿದ್ದಾರೆ. ಆದರೆ SIT ಅಧಿಕಾರಿಗಳ ಹಲವಾರು ಪ್ರಶ್ನೆಗಳಿಗೆ ರೇವಣ್ಣ ಒಂದೇ ಸಾಲಿನ ಉತ್ತರ ನೀಡುತ್ತಿದ್ದಾರಂತೆ. ಈ ಕಿಡ್ನ್ಯಾಪ್‌ಗೂ ನನಗೂ ಸಂಬಂಧವಿಲ್ಲ, ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲವೆಂದು ರೇವಣ್ಣ ಹೇಳಿದ್ದಾರೆ ಅಂತಾ ತಿಳಿದುಬಂದಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಈವತ್ತಲ್ಲ ನಾಳೆ ವಿಚಾರಣೆಗೆ ಬರಲೇಬೇಕು
ಗೊಂದಲದ ಹೇಳಿಕೆ ನೀಡುತ್ತಿರುವ ಸಂತ್ರಸ್ತೆ!
ಮಹಿಳೆ ಕಿಡ್ನ್ಯಾಪ್ ಕೇಸ್ನಲ್ಲಿ ಎಚ್.ಡಿ.ರೇವಣ್ಣರನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಇತ್ತ ಸಾಂತ್ವನ ಕೇಂದ್ರದಲ್ಲಿ ಸಂತ್ರಸ್ತೆ ಮಹಿಳೆಯನ್ನೂ ವಿಚಾರಣೆ ಮಾಡಲಾಗಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ. ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಆಕೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರಂತೆ.
ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ, ನಾನೇ ಹೋಗಿದ್ದು ಅಂತಾ ಒಂದು ಸರಿ ಹೇಳಿದರೆ, ಇನ್ನೊಂದು ಬಾರಿ ಯಾರೋ ಸ್ಥಳೀಯರು ಬಂದು ಕರೆದುಕೊಂಡು ಹೋಗಿದ್ದಾರೆಂದು ಹೇಳುತ್ತಿದ್ದಾರಂತೆ. ಹೀಗಾಗಿ ಸಂತ್ರಸ್ತೆಯ ಉತ್ತರದಿಂದ ಅಧಿಕಾರಗಳಲ್ಲಿ ಗೊಂದಲ ಮೂಡಿದೆ. ವಿಚಾರಣೆ ವೇಳೆ ವಿವಿಧ ರೀತಿಯ ಹೇಳಿಕೆ ನೀಡುತ್ತಿರುವ ಹಿನ್ನೆಲೆ ಸಂತ್ರಸ್ತೆಗೆ ಅಧಿಕಾರಿಗಳು ರೆಸ್ಟ್ ಕೊಟ್ಟು ತೆರಳಿದ್ದಾರಂತೆ. ನೀವು ಇದೀಗ ರೇಸ್ಟ್ ಮಾಡಿ ನಂತರ ಪ್ರಶ್ನೆಗಳನ್ನು ಕೇಳುತ್ತೇವೆಂದು ಆಕೆಗೆ ಅಧಿಕಾರಿಗಳು ತಿಳಿಸಿದ್ದಾರಂತೆ.
ಇದನ್ನೂ ಓದಿ: ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿರುವ SIT
ಲೈಂಗಿಕ ದೌರ್ಜನ್ಯ, ಕಿಡ್ನ್ಯಾಪ್ ಕೇಸ್ನಲ್ಲಿ ಮಹಿಳೆಯ ಹೇಳಿಕೆ ಬಹುಮುಖ್ಯ ಪಾತ್ರ ವಹಿಸಲಿದೆ. ಒಂದು ವೇಳೆ ನನ್ನನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದರು ಅಂತಾ ಸಂತ್ರಸ್ತೆ ಹೇಳಿದರೆ ರೇವಣ್ಣಗೆ ಮತ್ತಷ್ಟು ಸಂಷಕ್ಟ ಎದುರಾಗಲಿದೆ. ತನ್ನ ಮೇಲೆ ರೇಪ್ ಆಗಿದೆ ಅಂತಾ ಸಾಕ್ಷ್ಯ ನೀಡಿದರೆ ರೇವಣ್ಣಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ ಎಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.