ಚಿಕ್ಕಬಳ್ಳಾಪುರ: ನಾನು ಚುನಾವಣೆಯಲ್ಲಿ ಸೋತಿದ್ದೇನೆ.. ಆದರೆ ಇನ್ನೂ ಸತ್ತಿಲ್ಲ. ನಾನಿನ್ನೂ ಬದುಕಿದ್ದೇನೆಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಗ್ಯಾರಂಟಿಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಬರೀ ತನಿಖೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಮಾತನಾಡಲಿ ಎಂದರು.  


COMMERCIAL BREAK
SCROLL TO CONTINUE READING

ನನ್ನ ಮೇಲಿನ ದ್ವೇಷದಿಂದ ಆರೋಗ್ಯ ಇಲಾಖೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಯಾವುದೇ ರೀತಿಯ ಸೇಡಿನ ರಾಜಕಾರಣ ಮಾಡಿಲ್ಲ, ಇದೀಗ ಈಗ ನಿಮ್ಮ ಕೈಯಲ್ಲಿ ಕೀ ಇದೆ, ಬೀಗ ಇದೆ. ನಾವೇನು ನಿಮ್ಮನ್ನು ತಡೆ ಹಿಡಿದಿಲ್ಲ. ಅದೇನು ಮಾಡುತ್ತೀರೋ ಮಾಡಿ ಅಂತಾ ಕಾಂಗ್ರೆಸ್‌ ನಾಯಕರಿಗೆ ಸುಧಾಕರ್ ಸವಾಲು ಹಾಕಿದ್ದಾರೆ.


ಇದನ್ನೂ ಓದಿ: ತಡವಾಗ್ತಿರೋ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ! ಬೈಪಾಸ್ ಮೊರೆಹೋದ ಬಿಬಿಎಂಪಿ


ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ವಸತಿ ಯೋಜನೆಗಳ ಬಗ್ಗೆ ಹೊಸ ಶಾಸಕರು ಅಭಿಯಾನ ಮಾಡ್ತಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲಾದ್ರೂ ಈ ಕ್ಷೇತ್ರದ ಜನರ ಅಭಿವೃದ್ಧಿ ಕಡೆ ಗಮನಹರಿಸ್ತಾರೆ ಅಂತಾ ನಾನು ಭಾವಿಸಿದ್ದೆ. ಆದರೆ ಸುಳ್ಳೇ ತಮ್ಮ ಮನೆ ದೇವರು ಅನ್ನೋ ರೀತಿ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ನಾನು ಯಾವುದೇ ರೀತಿಯ ಸುಳ್ಳು ಯೋಜನೆ ಮಾಡಿಲ್ಲ. ಇಡೀ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಕೊಡಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೆ ತಿಳಿಸಲಿ. ಸುಳ್ಳು ನಿವೇಶನಗಳನ್ನು ಕೊಡ್ತಾರೆ ಎಂದು ಸುಳ್ಳು ಪ್ರಚಾರ ಮಾಡ್ತಾ ಇದ್ದೀರಾ? ಹಕ್ಕುಪತ್ರ ಯಾವುದು? ಮಂಜೂರಾತಿ ಪತ್ರ ಯಾವುದೆಂದು ತಮಗೆ ಗೊತ್ತಿಲ್ಲ‌ವೇ? ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.


ಕೇವಲ ಸಿನಿಮಾ ಡೈಲಾಗ್ ಹೊಡೆದು ಗೆದ್ದಬಿಟ್ಟರೆ ಸಾಕಾ? ಎಂದು ಪ್ರದೀಪ್ ಈಶ್ವರ್‍ ಬಗ್ಗೆ ವ್ಯಂಗ್ಯವಾಡಿದ ಸುಧಾಕರ್, ನಾನು ಹಕ್ಕುಪತ್ರಗಳಲ್ಲಿ ಸುಳ್ಳು ಭರವಸೆ ನೀಡಿದ್ದರೆ ಶ್ರೀ ಭೋಗ ನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ತಾಕತ್ತಿದ್ದರೆ ಅದು ಸುಳ್ಳು ಅಂತಾ ದೀಪ ಹಚ್ಚಿ ನೋಡೋ‌ಣ ಎಂದು ಸವಾಲು ಹಾಕಿದರು. ಮುಂದಿನ 6 ತಿಂಗಳ ಕಾಲ ನಾನು ಸರ್ಕಾರದ ಬಗ್ಗೆ ಏನೂ ಮಾತನಾಡುವುದಿಲ್ಲ. ನನ್ನ ವಿರುದ್ಧ ತನಿಖೆ ಮಾಡಲಿ ಎಂದು ಇದೇ ವೇಳೆ ಅವರು ಹೇಳಿದರು.


ಇದನ್ನೂ ಓದಿ: ವಿಜಯವಾಡ ರೈಲ್ವೇ ಕಾಮಗಾರಿ ಹಿನ್ನೆಲೆ - ಕೆಲ ರೈಲುಗಳ ಮಾರ್ಗ ಬದಲಾವಣೆ


ಇನ್ನು ದ್ವೇಷ ರಾಜಕಾರಣ ಬಿಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಶ್ರಮವಹಿಸಿ ಎಂದು ಶಾಸಕ ಪ್ರದೀಪ್ ಈಶ್ವರ್‍ಗೆ ಸುಧಾಕರ್ ಸಲಹೆ ನೀಡಿದರು. ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾನು ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿಲ್ಲವೆಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.