ಬೆಂಗಳೂರು: ಇಂದು ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕೆ  ಟ್ವೀಟ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯನವರು  "ನರೇಂದ್ರ ಮೋದಿಯವರೇ ಇಂದು ನೀವು ತಮ್ಮ ಸಮಯ ಮಿಸಲಿಟ್ಟು  ದೇಶದ ನವೊದ್ಯಮ ಮತ್ತು ಸಂಶೋಧನಾ ಕೇಂದ್ರವಾದ ನಮ್ಮ ಬೆಂಗಳೂರಿಗೆ ಆಗಮಿಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.



ಇದೆ ಸಂದರ್ಭದಲ್ಲಿ  ಸಿದ್ದರಾಮಯ್ಯನವರು ಮಹಾದಾಯಿ ವಿಚಾರವನ್ನು ತಮ್ಮ ಟ್ವೀಟ್ ನಲ್ಲಿ ಪ್ರಸ್ತಾಪಿಸುತ್ತಾ  "ರಾಜ್ಯದ ಜನತೆಯ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ ತಾವು ತಮ್ಮ ಸಮಯವನ್ನು ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾದ ಮಹಾದಾಯಿ ವಿವಾದವನ್ನು ಪರಿಹರಿಸಲು ಸ್ವಲ್ಪ ನೀಡಿ "ಎಂದು ಅವರು ಪ್ರಧಾನಿಗಳನ್ನು ವಿನಂತಿಸಿಕೊಂಡಿದ್ದಾರೆ.