ಸಿದ್ದರಾಮಯ್ಯ ಜೊತೆ ಸೇರಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ- ದೇವೇಗೌಡ
ಉಪಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಈಗ ಪ್ರತಿಪಕ್ಷ ಬಿಜೆಪಿ ಟಾಂಗ್ ಕೊಡಲು ಸಿದ್ದವಾಗಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಬಲಿಷ್ಟವಾಗಿದೆ ಎನ್ನುವ ಸಂದೇಶವನ್ನು ಸಹ ಗೌಡ್ರು ರವಾನಿಸುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಉಪಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಈಗ ಪ್ರತಿಪಕ್ಷ ಬಿಜೆಪಿ ಟಾಂಗ್ ಕೊಡಲು ಸಿದ್ದವಾಗಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಬಲಿಷ್ಟವಾಗಿದೆ ಎನ್ನುವ ಸಂದೇಶವನ್ನು ಸಹ ಗೌಡ್ರು ರವಾನಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿಸರ್ಕಾರ ಮಾಡಿಕೊಂಡು ಸರ್ಕಾರ ನಡೆಸುತ್ತಿರುವ ನಾವು ಈಗ ಉಪಚುನಾವಣೆಯಲ್ಲಿಯೂ ಸಹಿತ ಒಟ್ಟಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದರು,
ಇದೇ ವೇಳೆ ಪ್ರಚಾರ ಕಾರ್ಯದ ಬಗ್ಗೆ ಮಾತನಾಡಿದ ದೇವೇಗೌಡರು ಎಲ್ಲ ಕ್ಷೇತ್ರಗಳಲ್ಲಿ ಒಟ್ಟಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇವೆ. ಈ ಬಾರಿ ತಾವು ಕೂಡ ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಎಲ್ಲರು ಸೇರಿ ಪ್ರಚಾರ ನಡೆಸುತ್ತೇವೆ ಎಂದು ತಿಳಿಸಿದರು.ಉಪ ಚುನಾವಣೆಯಲ್ಲಿ ಮಂಡ್ಯ ರಾಮನಗರ ಮತ್ತು ಶಿವಮೊಗ್ಗ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಜಮಖಂಡಿ ಮತ್ತು ಬಳ್ಳಾರಿಯನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲಾಗಿದೆ.
ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗುತ್ತಿದೆ.ಏಕೆಂದರೆ ಚುನಾವಣೆಯಲ್ಲಿನ ಮೈತ್ರಿಕೂಟದ ಒಗ್ಗಟ್ಟು ಫಲಿಸಿದ್ದೆ ಆದಲ್ಲಿ ಅದು ಬಿಜೆಪಿ ಭಾರಿ ಹೊಡೆತ ಬಿಳಲಿದೆ ಎಂದು ತಿಳಿದುಬಂದಿದೆ.ಆ ಹಿನ್ನಲೆಯಲ್ಲಿ ಈಗ ಉಪ ಚುನಾವಣೆಗೆ ಭಾರಿ ಮಹತ್ವ ಬಂದಿದೆ.