ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾದಲ್ಲಿ (Drug Mafia) ನಾನು ಇರುವುದು ಸಾಬೀತಾದರೆ ರಾಜ್ಯದಲ್ಲಿ ಇರುವ ನನ್ನ ಅಷ್ಟೂ‌ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟುಬಿಡುತ್ತೇನೆ. ಬಿಜೆಪಿ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ (Zameer Ahamad) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಡ್ರಗ್ಸ್ ಮಾಫಿಯಾದಲ್ಲಿ (Drug Mafia) ತಮ್ಮ‌ ಹೆಸರನ್ನು ಎಳೆದು ತರಲಾಗುತ್ತಿದೆ. ನನಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಫಾಜಿಲ್ ಎಂಬುವವರಿಗೂ ಸಂಪರ್ಕವೇ ಇಲ್ಲ. ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ ಆಗಿದ್ದರು. ಅಷ್ಟಕ್ಕೆ ನಿಂತಿದೆ. ಸಾರ್ವಜನಿಕ ಜೀವನದಲ್ಲಿರುವವರ ಬಳಿ ಹಲವಾರು ಜನ ಬರುತ್ತಿರುತ್ತಾರೆ. ಅವರೆಲ್ಲರನ್ನೂ ಆಪ್ತರು ಎಂದು ಹೇಳೋಕ್ಕಾಗುತ್ತಾ? ಎಂದು ಪ್ರಶ್ನಿಸಿದರು.


ಇಂದು ನಟಿ ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯ; ಜೈಲಾ ಅಥವಾ ಬೇಲಾ ಇಂದು ನಿರ್ಧಾರ


ನಾನು ಮುಸಲ್ಮಾನ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಬೆಳವಣಿಗೆಯನ್ನು ಸಹಿಸದೆ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ  ಬಿಜೆಪಿ ಸರ್ಕಾರವೇ ಇದೆಯಲ್ಲಾ ಎಲ್ಲವನ್ನೂ ತನಿಖೆ  ಮಾಡಲಿ ಎಂದು ಹೇಳಿದರು.


ಪ್ರಶಾಂತ್ ಸಂಬರಗಿ ಹೇಳಿಕೆ ವಿಚಾರಾಗಿ ಪ್ರತಿಕ್ರಿಯಿಸಿದ ಜಮೀರ್ ಅಹಮದ್, ಯಾರ್ರಿ ಸಂಬರಗಿ? ಅವನು ಕಾಂಜಿಪಿಂಜಿ.  ಅವನು ಹೇಳೋದು ಕೇಳೋದ್ಯಾಕೆ? ಸರ್ಕಾರ ತನಿಖೆ ಮಾಡಲಿ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.


ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ‌ರಾಗಿಣಿ ಸಂಜನಾಗೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸುವ ಸಾಧ್ಯತೆ


ಡ್ರಗ್ಸ್ ಮಾಫಿಯಾದಲ್ಲಿ (Drug Mafia) ಪಾತ್ರವಿದೆ ಎಂದು ಪೊಲೀಸರ ವಶದಲ್ಲಿರುವ ನಟಿ ಸಂಜನಾ ಗುಲ್ರಾನಿ (Sanjana Gulrani) ಜೊತೆ ನಿಮ್ಮ‌ ಸಂಪರ್ಕ ಇದೆಯಂತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹಮದ್, ನಾನು‌ ಸಂಜನಾ ಗುಲ್ರಾನಿ ಅವರನ್ನು ಮುಖಾಮುಖಿಯಾಗಿ ಭೇಟಿನೇ ಆಗಿಲ್ಲ‌. ಏರ್ ಪೋರ್ಟ್ ನಲ್ಲೂ ಭೇಟಿಯಾಗಿಲ್ಲ. ಬಸ್ ಸ್ಟ್ಯಾಂಡಿನಲ್ಲೂ ಭೇಟಿ ಆಗಿಲ್ಲ. ಶ್ರೀಲಂಕಾದ ಮಾತ್ಯಾಕೆ? ಇಲ್ಲೇ ಭೇಟಿ ಆಗಿಲ್ಲ ಅಂದ್ರೆ ಅಲ್ಲಿ ಹೇಗೆ ಭೇಟಿ ಆಗಲಿ? ಎಂದರು.


ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ‌


ಸಂಜನಾ ಗುಲ್ರಾನಿ‌ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ.‌ ಅವರನ್ನು ತನಿಖೆ ಮಾಡಲಿ. ಅವರದೇ ಸರ್ಕಾರ ಇದೆ.‌ ಸಂಜನಾ ಕಸ್ಟಡಿಯಲ್ಲೇ ಇದ್ದಾರೆ‌. ಆದರೂ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅದು ಬಿಟ್ಟು ತನಿಖೆ ಮಾಡಲಿ. ನಾನು ತನಿಖೆಗೆ ಶೇಕಡಾ 200ರಷ್ಟು ಸಹಕಾರ ನೀಡುತ್ತೇನೆ ಎಂದರು.