ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾಕ್ಕೆ (Drugs Mafia) ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಚಿತ್ರನಟಿಯರಾದ ರಾಗಿಣಿ ದ್ವಿವೇದಿ (Ragini Dwivedi) ಮತ್ತು ಸಂಜನಾ ಗುಲ್ರಾನಿ ಅವರು ವಿಚಾರಣೆ ವೇಳೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದ್ದು ಇದೇ ಹಿನ್ನಲೆಯಲ್ಲಿ ಅವರಿಬ್ಬರಿಗೂ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.
ಈಗಾಗಲೇ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುಲ್ರಾನಿ (Sanjana Gulrani) ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದು ಇಬ್ಬರೂ ಯಾವ ವಿಷಯದ ಬಗ್ಗೆಯೂ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಆದ್ದರಿಂದಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೋಲಿಸರು ಇಂದು ಇವರಿಬ್ಬರನ್ನು ಮಡಿವಾಳದ ಎಫ್ ಎಸ್ ಎಲ್ (FSL) ನ ಇಂಟರಗೇಷನ್ ಸೆಂಟರ್ ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಿದ್ದಾರೆ.
ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ
ನಟಿ ರಾಗಿಣಿ ಅವರ ಪೊಲೀಸ್ ಕಸ್ಟಡಿ ಇಂದಿಗೆ ಮುಗಿಯುತ್ತಿದೆ. ಆದರೆ ಈವರೆಗೆ ರಾಗಿಣಿ ಡ್ರಗ್ಸ್ ಸೇವನೆ ಮತ್ತು ಸರಬರಾಜು ಬಗ್ಗೆ ಏನೊಂದು ಮಾಹಿತಿಯನ್ನು ತಿಳಿಸಿಲ್ಲ. ರಾಗಿಣಿಯನ್ನು ವಿಚಾರಣೆ ಮಾಡುವುದು ಸಿಸಿಬಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಏನೇ ಪ್ರಶ್ನೆ ಮಾಡಿದರೂ ರಾಗಿಣಿ 'ನನಗೇನು ಗೊತ್ತಿಲ್ಲ' ಎಂದು ಹೇಳುತ್ತಿದ್ದಾರೆ. ಕೆಲವೊಮ್ಮೆ 'ಮರೆತಿದ್ದೇನೆ' ಎಂಬ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ರಾಗಿಣಿ ತಮ್ಮ ಮೊಬೈಲ್ ನಲ್ಲಿ ಇದ್ದ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದಾರೆ. ಆ ಸಂದೇಶಗಳನ್ನು ಮತ್ತೆ ಸಂಗ್ರಹಿಸಿರುವ ಪೊಲೀಸರು ಅದೇ ಎಸ್ ಎಂಎಸ್ ಗಳನ್ನು ಇಟ್ಟುಕೊಂಡು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಆದರೂ ಏನೂ ಪ್ರಯೋಜನ ಆಗುತ್ತಿಲ್ಲ. ಇನ್ನೊಂದೆಡೆ ಇವತ್ತು ನಟಿ ಸಂಜನಾ ಅವರನ್ನು ಸಿಟಿ ಕ್ರೈಂ ಬ್ರಾಂಚ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರೇ ವಿಚಾರಣೆ ನಡೆಸುತ್ತಾರೆ ಎಂದು ಹೇಳಲಾಗಿದೆ.
ಡ್ರಗ್ಸ್ ಧಂಧೆ ಪ್ರಕರಣ: ರಾತ್ರಿಯಿಡೀ ಊಟ, ನಿದ್ದೆ ಮಾಡದೇ ಕಣ್ಣೀರಿಡುತ್ತಿದ್ದ ಸಂಜನಾ ಗಲ್ರಾನಿ
ನಿನ್ನೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಂಜನಾ ಹಾಗೂ ರಾಗಿಣಿ ಅವರಿಗೆ ಡೋಪಿಂಗ್ ಟೆಸ್ಟ್ ಕೂಡ ಮಾಡಲಾಗಿದೆ. 9 ದಿನಗಳಲ್ಲಿ ಡೋಪಿಂಗ್ ಟೆಸ್ಟ್ ನ ವರದಿ ಸಿಸಿಬಿ ಪೊಲೀಸರ ಕೈಸೇರಲಿದೆ. ಅದರ ವರದಿ ನೋಡಿಕೊಂಡು ಹೇರ್ ಪಾಲಿಕಲ್ ಟೆಸ್ಟ್ ಮಾಡುವ ಬಗ್ಗೆ ಸಿಸಿಬಿ ಪೊಲೀಸರು ನಿರ್ಧರಿಸಲಿದ್ದಾರೆ.
ಹೇರ್ ಪಾಲಿಕಲ್ ಟೆಸ್ಟ್ ಅಂದ್ರೆ ಕೂದಲು ಸಂಗ್ರಹ ಮಾಡಿ ಅದರ ಮೂಲಕ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುವುದು. ಸಾಮಾನ್ಯವಾಗಿ ಕ್ರೀಡಾ ಕ್ಷೇತ್ರದಲ್ಲಿ ಈ ಟೆಸ್ಟ್ ಅನ್ನು ಹೆಚ್ಚಾಗಿ ಮಾಡಲಾಗುತ್ತದೆ. ಕ್ರೀಡಾಪಟುಗಳು ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪ ಬಂದಾಗ ಹೇರ್ ಪೋಲಿಕ್ ಟೆಸ್ಟ್ ಮಾಡಲಾಗುತ್ತದೆ. ಈ ಚೆಕಪ್ ಮಾಡುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ.
ರಾಗಿಣಿಗಿಲ್ಲ ವಿಐಪಿ ಟ್ರೀಟ್ಮೆಂಟ್, ಸಾಮಾನ್ಯ ಆರೋಪಿಯಂತೆ ರಾತ್ರಿ ಕಳೆದ ಮಾದಕ ನಟಿ ರಾಗಿಣಿ
ಅಲ್ಲದೆ ಯಾವ FSL ಕೇಂದ್ರದಲ್ಲಿ ಟೆಸ್ಟ್ ಮಾಡಲಾಗುತ್ತೆ ಅಂತಾನೂ ನ್ಯಾಯಾಲಯದ ಗಮನಕ್ಕೆ ತರಬೇಕಾಗುತ್ತದೆ. ಈ ಪರೀಕ್ಷೆಯಿಂದ ಒಂದು ವರ್ಷದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದರೂ ಪತ್ತೆಹಚ್ಚಬಹುದಾಗಿದೆ. ಆದರೆ ಹೇರ್ ಪೋಲಿಕ್ ಟೆಸ್ಟ್ ಮಾಡುವ ತಂತ್ರಜ್ಞಾನ ನಮ್ಮ ರಾಜ್ಯದಲ್ಲಿ ಇಲ್ಲ. ಹೈದ್ರಾಬಾದ್ ನಲ್ಲಿ ಮಾಡಿಸಬೇಕಾಗುತ್ತದೆ. ಡೋಪಿಂಗ್ ವರದಿಯ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತದೆ.