ಚಾಮರಾಜನಗರ : ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಪ್ರಸಿದ್ದ ಹಿಮವದ್ ಗೋಪಾಲಸ್ವಾಮಿ (Gopalaswamy Betta) ಬೆಟ್ಟಕ್ಕೆ ಮೂರು  ವರ್ಷಗಳ ಬಳಿಕ ಕಾಡಿನಿಂದ ಗಜರಾಜ ಬಂದಿದ್ದಾನೆ. ಗೋಪಾಲಸ್ವಾಮಿ ದರ್ಶನ ಮಾಡಿದ್ದಾನೆ ಗಜೇಂದ್ರ.  ಕಾಡಿನಿಂದ ಬಂದ  ಈ ಒಂಟಿಸಲಗ (Tusker) ದೇವರ ದರ್ಶನ ಪಡೆದ ಬೆನ್ನಲ್ಲೇ ವಿವಾದವೊಂದು ಸೃಷ್ಟಿಯಾಗಿದೆ. 


COMMERCIAL BREAK
SCROLL TO CONTINUE READING

ಗುಂಡ್ಲುಪೇಟೆಯ ಹಿಮವದ್ ಬೆಟ್ಟದಲ್ಲಿದೆ ಗೋಪಾಲಸ್ವಾಮಿ ದೇಗುಲ. ಭಾರೀ ಕಾಡಿನ ನಡುವೆ, ದಟ್ಟ ಹಿಮದ ನಡುವೆ ಗೋಪಾಲಸ್ವಾಮಿ ದೇಗುಲವಿದೆ(Gopala swamy temple). ಅನಾದಿ ಕಾಲದಿಂದಲೂ ಈ ದೇಗುಲಕ್ಕೆ ವನ್ಯಜೀವಿಗಳು (Wild Animals) ಬರುತ್ತಿರುತ್ತವೆ. ಇದು ಬಂಡೀಪುರ ಮೀಸಲು ಅರಣ್ಯ (Bandipur Reserve) ವ್ಯಾಪ್ತಿಯಲ್ಲಿ ಬರುತ್ತದೆ.  ಆದರೆ, ಈ ಸಲ ಸಂಕ್ರಾಂತಿ (Sankranti) ಹೊತ್ತಿಗೆ ಒಂಟಿ ಸಲಗ ಅಲ್ಲಿ ಕಾಣಿಸಿಕೊಂಡಿದೆ. ಮೂರು ವರ್ಷಗಳ ಬಳಿಕ ಕಾಡಿನ ಗಜರಾಜ ದೇವರ ದರ್ಶನಕ್ಕೆ ಬಂದಿದ್ದು ವಿಶೇಷ.


ಇದನ್ನೂ ಓದಿ ಶಾಕಿಂಗ್: ಪಟಾಕಿ ತುಂಬಿದ ಅನಾನಸ್ ತಿಂದು ಸಾವನ್ನಪ್ಪಿದ ಗರ್ಭವತಿ ಆನೆ


ಗಜರಾಜ (Elephant) ದೇವರ ದರ್ಶನಕ್ಕೆ ಬಂದಿದ್ದು ನೋಡಿ ಅಲ್ಲಿರುವ ಭಕ್ತರು ಪುಳಕಿತರಾಗಿದ್ದಾರೆ. ದೇವಸ್ಥಾನದಲ್ಲೇ ಇದ್ದ ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿಬಿ ಕಾವೇರಿ (BBCauvery) ದೊಡ್ಡ ಎಡವಟ್ಟು ಮಾಡಿದ್ದಾರೆ. ದೇವರ ಪ್ರಸಾದ ಎಂಬ ದೃಷ್ಟಿಯಿಂದ ಗಜರಾಜನಿಗೆ ಸಿಹಿ ಪೊಂಗಲ್ (Ponagal), ಬೆಲ್ಲ ನೀಡಿ ಖುಷಿಪಟ್ಟಿದ್ದಾರೆ. ಐಎಎಸ್ ಅಧಿಕಾರಿಯ (IAS officer)  ಈ ನಡೆ ವನ್ಯ ಜೀವಿ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ವನ್ಯ ಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘಿಸಿದರೇ ಬಿಬಿ ಕಾವೇರಿ?
ಆನೆಗೆ ಬೆಲ್ಲ ಪೊಂಗಲ್ ನೀಡಿದ್ದು ವನ್ಯ ಜೀವಿ ಕಾಯಿದೆ (wild life act)ಯ ಉಲ್ಲಂಘನೆ ಎನ್ನುವುದು ವನ್ಯ ಜೀವಿ ಪ್ರೇಮಿಗಳ ವಾದ. ನೈಸರ್ಗಿಕ ಜೀವಿಯಾದ ಆನೆ ನಿಸರ್ಗದಲ್ಲಿ ಸಿಗುವ ಆಹಾರಗಳನ್ನು ತಿನ್ನಬೇಕೇ ಹೊರತು, ತಯಾರಿಸಿದ ಆಹಾರಗಳನ್ನಲ್ಲ. ಜೊತೆಗೆ ಸಿಹಿ ಪೊಂಗಲ್ ಆಸೆಗೆ ಕಾಡಿನಲ್ಲಿರುವ ಆನೆ ಪದೇ ಪದೇ ನಾಡಿಗೆ ಬರುತ್ತಿರುತ್ತದೆ. ಪೊಂಗಲ್ ಸಿಗದೇ ಹೋದಾಗ ಅದು ಕೃಷಿ ತೋಟಕ್ಕೆ ನುಗ್ಗುವ ಸಾಧ್ಯತೆಗಳಿವೆ. ಇದು ಸಹಜವಾಗಿ ಪ್ರಾಣಿ-ಮಾನವ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು  ವನ್ಯಜೀವಿಗಳಿಗೆ ಕಂಟಕಪ್ರಾಯವಾಗುವ ಬೆಳವಣಿಗೆ ಎನ್ನುವುದು ವನ್ಯಜೀವಿ ಪ್ರೇಮಿಗಳ ವಾದ.


ಇದನ್ನೂ ಓದಿ ದೇವಸ್ಥಾನದ ಆನೆಯನ್ನು ಕಟ್ಟಿ ಹಾಕಿ ಚಿತ್ರ ಹಿಂಸೆ: ವೀಡಿಯೋ ವೈರಲ್!


ಐಎಎಸ್ ಅಧಿಕಾರಿಯಾಗಿರುವ ಕಾವೇರಿ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಏನೂ ಗೊತ್ತಿಲ್ಲದವರು ಅಪರಾಧ ಮಾಡಿದರೆ, ಅಜ್ಞಾನ ಎನ್ನಬಹುದು. ಆದರೇ, ವನ್ಯಜೀವಿಗಳನ್ನು ರಕ್ಷಿಸುವ ಹೊಣೆ ಹೊತ್ತಿರುವ ಐಎಎಸ್ ಅಧಿಕಾರಿಗಳೇ ಪ್ರಮಾದವೆಸಗಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ..


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.