ತ್ರಿಶೂರ್: ದೇವಸ್ಥಾನದ ಆನೆಯನ್ನು ಕಟ್ಟಿಹಾಕಿ ಅದಕ್ಕೆ ಚಿತ್ರ ಹಿಂಸೆ ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ತ್ರಿಶೂರ್ ನಲ್ಲಿರುವ ದೇವಸ್ಥನದ ಮಾಜಿ ಆನೆಗೆ ದುಷ್ಕರ್ಮಿಗಳು ಈಟಿಯಿಂದ ತಿವಿದು, ಕೋಲಿನಿಂದ ಹೊಡೆದು ನೋವುಂಟುಮಾಡಿ ಚಿತ್ರ ಹಿಂಸೆ ನೀಡುತ್ತಿದ್ದು, ಅದನ್ನು ತಾಳಲಾರದೆ ಆನೆ ಮುಕರೋಧನೆ ಅನುಭವಿಸುತ್ತಿರುವ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಅದರಲ್ಲಿ ಆನೆಯ ಹೆಸರು ಕರಣ್ ಎಂದು ತಿಳಿಸಲಾಗಿದ್ದು, ದೇವಸ್ಥಾನದ ಆನೆಯಾಗಿದ್ದ ದೈತ್ಯ ಪ್ರಾಣಿಗೆ ಕೇರಳದ ತ್ರಿಶೂರ್ ನಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದಾರೆ" ಎಂದು ಬರೆಯಲಾಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnan the gentle giant,once a temple elephant ,being mercilessly beaten up in thrissur ,kerala pic.twitter.com/hNNGF7VyID
— 𝓹𝓻𝓪𝓶𝓸𝓭 𝓬𝓱𝓪𝓷𝓭𝓻𝓪𝓼𝓮𝓴𝓱𝓪𝓻𝓪𝓷 (@pramodchandrase) March 25, 2019
ಈ ಬಗ್ಗೆ ಏಷಿಯನ್ ಎಲಿಫೆಂಟ್ ಸೊಸೈಟಿಯ ಕಾರ್ಯಕರ್ತರು ಆನೆಯನ್ನು ರಕ್ಷಿಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.