ಬೆಂಗಳೂರು: ಸಂಪಿಗೆಹಳ್ಳಿ ಹೊಯ್ಸಳ ಪೊಲೀಸರು ದಂಪತಿಯಿಂದ ಹಣ ವಸೂಲಿ ಮಾಡಿದ ಪ್ರಕರಣ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿತ್ತು. ತಪ್ಪಿಗೆ ಪ್ರಾಯಶ್ಚಿತ್ತ ಎನ್ನುವಂತೆ ಇಬ್ಬರು ಸಿಬ್ಬಂದಿಯನ್ನು ಡಿಸಿಪಿ‌ ಅನೂಪ್ ಶೆಟ್ಟಿ ಅಮಾನತು ಮಾಡಿದ್ದರು. ಈಗ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಹೊಸ ಸುತ್ತೊಲೋಯನ್ನ ಹೊರಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ರಾತ್ರಿ ವೇಳೆ ಹೊಯ್ಸಳ ಹಾಗೂ ಚೀತಾ ವಾಹನದಲ್ಲಿ ಗಸ್ತು ನಡೆಸುವ ಅಧಿಕಾರಿ ಮತ್ತು ಸಿಬ್ಬಂದಿ ಫುಟ್ ಬಾತ್ ವ್ಯಾಪರಿಗಳ ಬಳಿ ಹಣ ಪಡೆಯಬಾರದು. ಜೊತೆಗೆ ಸುಖಾ-ಸುಮ್ಮನೆ ವಾಹನ ಸವಾರರನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿ ಹಣ ಪಡೆಯಬಾರದು ಎಂದು ಆದೇಶಿಸಿದ್ದಾರೆ.


ಇದನ್ನೂ ಓದಿ- ಹಣ ಕೊಟ್ಟರೆ ಇಲ್ಲಿ ಸಿಗುತ್ತೆ ಫೇಕ್ ಮಾರ್ಕ್ಸ್ ಕಾರ್ಡ್: ಖಾಸಗಿ ಸಂಸ್ಥೆ‌ಯ ದಂಧೆ ಬಯಲಿಗೆಳೆದ ಸಿಸಿಬಿ


ರಕ್ಷಕರಾಗಿರುವ ಪೊಲೀಸರು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಿ, ಮಹಿಳೆಯರು ಮಕ್ಕಳು ಓಡಾಡುವ ವಾಹನಗಳನ್ನ ಸುಖಾಸುಮ್ಮನೆ ತಡೆಯದಂತೆ ಸೂಚಿಸಿದ್ದಾರೆ. 


ಇದನ್ನೂ ಓದಿ- ಶ್ರೀಮಂತರ ಮನೆಯೇ ಇವರ ಟಾರ್ಗೆಟ್- ಚಾಲಕಿ ಕಳ್ಳರ ಗ್ಯಾಂಗ್ ಅಂದರ್


ಅಧಿಕಾರಿ, ಸಿಬ್ಬಂದಿ ಈ ರೀತಿಯ ವರ್ತನೆಯಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ. ಅಲ್ಲದೆ ಈ ನಿಯಮಗಳನ್ನ ಮೀರಿ ಯಾರಾದರೂ ಹಣ ವಸೂಲಿ ಮಾಡಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹಿರಿಯ‌ ಅಧಿಕಾರಿಗಳು ಎಚ್ಚರಿಕೆ   ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.