ಊಟವಿಲ್ಲ ಎಂದಿದ್ದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಮನಸೋ ಇಚ್ಚೆ ಹಲ್ಲೆ: ವಿಡಿಯೋ ವೈರಲ್

ಅಂದು ರಾತ್ರಿ 11:30 ರ ಸುಮಾರಿಗೆ ಕುಡಿದು ರೆಸ್ಟೋರೆಂಟ್ ಬಂದ ಸುಮಾರು 20 ಮಂದಿ ಅಪರಿಚಿತರ ಗ್ಯಾಂಗ್ ಊಟ ಆರ್ಡರ್ ಮಾಡಿದೆ. ರೆಸ್ಟೋರೆಂಟ್ ಕ್ಲೋಸಿಂಗ್ ಟೈಮ್ ಆಗಿದ್ದರಿಂದ ಊಟ ಸಿದ್ದಪಡಿಸಲು ಸಾಧ್ಯವಿಲ್ಲ ಸಿಬ್ಬಂದಿ ಹೇಳಿದಕ್ಕೆ ಅಕ್ರೋಶಗೊಂಡ ಗ್ಯಾಂಗ್ ಸಿಬ್ಬಂದಿ ಮೇಲೆ‌ ಮುಗಿಬಿದ್ದು ಮನಸೋ ಇಚ್ಚೆ ಹಲ್ಲೆ‌ ನಡೆಸಿದೆ. 

Written by - VISHWANATH HARIHARA | Edited by - Yashaswini V | Last Updated : Nov 30, 2022, 04:12 PM IST
  • ಅಂದು ರಾತ್ರಿ 11:30 ರ ಸುಮಾರಿಗೆ ಕುಡಿದು ರೆಸ್ಟೋರೆಂಟ್ ಗೆ ಬಂದ ಅಪರಿಚಿತರ ಗ್ಯಾಂಗ್
  • ರೆಸ್ಟೋರೆಂಟ್ ಕ್ಲೋಸಿಂಗ್ ಟೈಮ್ ಆಗಿದ್ದರಿಂದ ಊಟ ಸಿದ್ದಪಡಿಸಲು ಸಾಧ್ಯವಿಲ್ಲ ಎಂದ ಸಿಬ್ಬಂದಿ
  • ಸಿಬ್ಬಂದಿ ಮೇಲೆ‌ ಮುಗಿಬಿದ್ದು ಮನಸೋ ಇಚ್ಚೆ ಹಲ್ಲೆ‌ ನಡೆಸಿದ ಗ್ಯಾಂಗ್
ಊಟವಿಲ್ಲ ಎಂದಿದ್ದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಮನಸೋ ಇಚ್ಚೆ ಹಲ್ಲೆ: ವಿಡಿಯೋ ವೈರಲ್ title=
Bengaluru Crime

ಬೆಂಗಳೂರು: ವಿಲೇಜ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ 15 ರಿಂದ 20 ಮಂದಿ ಅಪರಿಚಿತರು ಹಲ್ಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೀಲಾದ್ರಿ ನಗರದಲ್ಲಿ ಘಟನೆ ನಡೆದಿದ್ದು, ಇದೇ ತಿಂಗಳು 20ರಂದು ರಾತ್ರಿ ಘಟನೆ ನಡೆದಿದೆ. 

ಅಂದು ರಾತ್ರಿ 11:30 ರ ಸುಮಾರಿಗೆ ಕುಡಿದು ರೆಸ್ಟೋರೆಂಟ್ ಗೆ ಬಂದ ಸುಮಾರು 20 ಮಂದಿ ಅಪರಿಚಿತರ ಗ್ಯಾಂಗ್ ಊಟ ಆರ್ಡರ್ ಮಾಡಿದೆ. ರೆಸ್ಟೋರೆಂಟ್ ಕ್ಲೋಸಿಂಗ್ ಟೈಮ್ ಆಗಿದ್ದರಿಂದ ಊಟ ಸಿದ್ದಪಡಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದಕ್ಕೆ ಅಕ್ರೋಶಗೊಂಡ ಗ್ಯಾಂಗ್ ಸಿಬ್ಬಂದಿ ಮೇಲೆ‌ ಮುಗಿಬಿದ್ದು ಮನಸೋ ಇಚ್ಚೆ ಹಲ್ಲೆ‌ ನಡೆಸಿದೆ. 

ಇದನ್ನೂ ಓದಿ- Shocking: ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ & ಗರ್ಭ ನಿರೋಧಕ ಮಾತ್ರೆಗಳು ಪತ್ತೆ!

ಘಟನೆ ದೃಶ್ಯಾವಳಿ ಗ್ರಾಹಕರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ‌. ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿಗಳನ್ನು ಪೊಲೀಸರ ಬಂಧಿಸಿಲ್ಲ. 

ಇದನ್ನೂ ಓದಿ- Crime News: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!

ಅಲ್ಲದೆ ಹಲ್ಲೆ‌ ನಡೆಸಿದ ಆರೋಪಿಗಳ ಪೈಕಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News