ಬೆಂಗಳೂರು:  ಬೇರೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಾದರೆ, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಏಕೆ ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.


COMMERCIAL BREAK
SCROLL TO CONTINUE READING

ಡಿ. 18 ರ ಸೋಮವಾರ ಸನ್ನಿ ಕಾರ್ಯಕ್ರಮ ಆಯೋಜಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕ ಸದಸ್ಯ ಪೀಠ, ಹೊಸ ವರ್ಷದ ಆಚರಣೆಗಾಗಿ ಸರ್ಕಾರ ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಾದರೆ, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಏಕೆ ಸಾಧ್ಯವಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದೆ? ಸರ್ಕಾರದ ಈ ತಾರತಮ್ಯ ಧೋರಣೆ ಸರಿಯಿಲ್ಲ ಎಂದು ಖಂಡಿಸಿರು ಹೈಕೋರ್ಟ್, ನಗರದಲ್ಲಿ ಹೊಸ ವರ್ಷದ ವೇಳೆ ಇಂತಹ  ಕಾರ್ಯಕ್ರಮಗಳು ನಡೆಯಲು ಅನುಮತಿ ಕೊಟ್ಟಿದ್ದರೆ ಅದಕ್ಕಾಗಿ ಕಾನೂನು ಸುವ್ಯವಸ್ಥೆ ಪಾಲನೆಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂಬ ವಿವರಣೆ ಕೇಳಿದೆ.