ಧಾರವಾಡ: ಪ್ರಸಕ್ತ ಸಾಲಿನ ಡಿಸೆಂಬರದಿಂದ ಜನವರಿವರೆಗೆ ಉತ್ತಮ ಮಾವು ಬೆಳೆ ಕಂಡುಬಂದಿದ್ದು, ಆದರೆ ಜನವರಿ ಮತ್ತು ಫೆಬ್ರವರಿಯಲ್ಲಿ ಬಿಟ್ಟಿರುವ ಮಾವಿನ ಹೂವು, ಮಿಡಿಕಾಯಿಗಳು ಅನಿರೀಕ್ಷಿತ ಹವಮಾನ ವೈಫರೀತ್ಯದಿಂದ ಉದುರುತ್ತಿವೆ. ಈ ಕುರಿತು ರೈತರು ಸಾಂಪ್ರದಾಯಕ ಮತ್ತು ತಾಂತ್ರಿಕ ಕ್ರಮಗಳನ್ನು ಅನುಸರಿಸುವ ಮೂಲಕ ಮುಂಜಾಗ್ರತೆ ವಹಿಸಬೇಕೆಂದು ತೋಟಗಾರಿಕೆ ಇಲಾಖೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಪ್ರಕಟಣೆ ನೀಡಿರುವ ತೋಟಗಾರಿಕೆ ಇಲಾಖೆ ಧಾರವಾಡ ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖವಾದ ಬೆಳೆಯಾಗಿದೆ. ಪ್ರಸಕ್ತ ವರ್ಷ 8270 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಮಳೆ ಕಡಿಮೆಯಾಗಿರುವುದರಿಂದ ಡಿಸೆಂಬರ್ ನಲ್ಲಿ ಶೇ 30 ರಷ್ಟು ಮಾತ್ರ ಮಾವು ಹೂ ಬಿಟ್ಟಿದ್ದು ಉತ್ತಮ ಫಸಲು ಆಗಿದೆ. ಆದರೆ ಹವಮಾನ ವೈಪರೀತ್ಯದಿಂದ ಮಾವ ಬೆಳೆಯ ಹೂವು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿಯು ಹಂತ ಹಂತವಾಗಿ ಮುಂದುವರೆದಿದೆ. ಇದಕ್ಕೆ ಮುಖ್ಯವಾಗಿ ಹವಾಮಾನ ವೈಪರಿತ್ಯ,  ಕಡಿಮೆ ಮತ್ತು ಅನಿರೀಕ್ಷಿತ ಮಳೆ, ವಾತಾವರಣದಲ್ಲಿ ತೇವಾಂಶ, ತಾಪಮಾನ ಏರುಪೇರು ಆಗಿರುವುದರಿಂದ, ವಿಳಂಬವಾದ ಚಳಿಗಾಲ ಮುಖ್ಯ ಕಾರಣವೆಂದು ಎನ್ನಲಾಗಿದೆ.


ಈ ವರ್ಷ ಜಿಲ್ಲೆಯಲ್ಲಿ ಶೇ 30 ರಷ್ಟು  ಫಸಲು ಮಾತ್ರ ಸರಿಯಾದ ಸಮಯಕ್ಕೆ ಕಟಾವಿಗೆ ಬರುತ್ತದೆ ಮತ್ತು ಇನ್ನುಳಿದ ಶೇ. 70 ರಷ್ಟು ಮಾವು ಬೆಳೆಯ ಹೂವು ತಡವಾಗಿದ್ದರಿಂದ ಕೀಟ, ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಫೆಬ್ರವರಿ ಅಂತ್ಯದವರೆಗೂ ಹೂವು ಬಿಟ್ಟಿದ್ದರಿಂದ ಮಾವಿನ ಹೂವು ಮತ್ತು ಮಿಡಿಕಾಯಿಗಳಿಗೆ ಜಿಗಿ ಹುಳದ ಸಮಸ್ಯೆ ಕಂಡು ಬಂದಿದೆ ಮತ್ತು ಫೆಬ್ರವರಿ ನಂತರವೂ ಹೂವು ಬಿಟ್ಟಿರುವ ಗಿಡಗಳಲ್ಲಿ ಬಿಸಿಲಿನ ತಾಪಕ್ಕೆ  ಹೂವುಗಳ ಪರಾಗಸ್ಪರ್ಶ ವಾಗಿರುವುದಿಲ್ಲ ಇದರಿಂದ ಸರಿಯಾಗಿ ಮಾವಿನಮಿಡಿ ಆಗಿರುವುದಿಲ್ಲ ಮತ್ತು ಅತಿಯಾದ ಬಿಸಿಲಿನ ತಾಪದಿಂದದಾಗಿ ಹೂವು ಬಿಟ್ಟಿದ್ದಂತಹ ಗಿಡಗಳಲ್ಲಿ ಮಾವಿನ ಹೂವುಗಳು ಉದುರಿ ಬೀಳುತ್ತಿವೆ ಎಂದು ತಿಳಿಸಿದ್ದಾರೆ.


ಇದನ್ನು ಓದಿ : Ashika rangnath : ವುಮೆನ್ಸ್ ಡೇಗೆ ಹೊಸ ಫೋಟೋಶೂಟ್ ನಲ್ಲಿ ಮದಗಜ ನಾಯಕಿ: ಇಲ್ಲಿವೆ ನೋಡಿ


 ವರ್ಷ ಕೆಲವಂದು ಮಾವಿನ ತೋಟಗಳಲ್ಲಿ ಹೂವು ಬಿಡುವ ಸಮಯದಲ್ಲಿ ಹೊಸ ಚಿಗುರು ಬಂದಿದರಿಂದ ಕೀಟ ಮತ್ತು ರೋಗ ಹೆಚ್ಚಾಗಿ ಹೂವು ಮತ್ತು ಮಿಡಿಕಾಯಿಗಳು ಉದುರುತ್ತಿವೆ. ಮತ್ತು ಮಾವಿಗೆ ಬರುವ ಸಾಂಪ್ರದಾಯಿಕ ಕೀಟ ಜಿಗಿಹುಳು ಅಲ್ಲದೇ ಇತರೆ ಕೀಡಿ ಜಾತಿಗೆ ಸೇರಿದ ಕುಡಿಕೊರಕ, ಸೇಮಿಲೂಪರ್ ಕೀಡಿಗಳು, ಕಾಂಡಕೊರೆಯುವ ಹುಳಗಳ ಹಾವಳೆ ಹೆಚ್ಚಾಗಿ ಕಂಡುಬರುತ್ತಿವೆ ಇದ್ದಕೆ ಪ್ರಮುಖವಾಗಿ ಹವಮಾನ ವೈಪರಿತ್ಯ ಕಾರಣವಾಗಿದೆ. 


ಸಂರಕ್ಷಣಾ ಕ್ರಮಗಳು:


ಮಾವಿನ ಪಸಲು ಮೇ ಅಂತ್ಯದವರೆಗೆ ಇರುವುದರಿಂದ ಈಗ ಬಂದಿರುವ ಕೀಟ ಮತ್ತು ರೋಗ ಬಾದೆಗಳನ್ನು ನಿಯಂತ್ರಿಸಲು ಮತ್ತು ಮುಂದಿನ ದಿನಗಳಲ್ಲಿ ಕೀಟ, ರೋಗ ಮತ್ತು ಸ್ಪೊಂಜಿಟಿಶೂ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳುವುದು ಅನಿವಾರ್ಯವಾಗಿದೆ. 


ಸಾಂಪ್ರದಾಯಿಕ ಮತ್ತು ತಾಂತ್ತಿಕ ಕ್ರಮಗಳನ್ನು ರೈತರು ಅನುಸರಿಸುವುದರಿಂದ ಮಾವಿನ ಫಸಲನ್ನು ಕಾಪಾಡಲು ತಕ್ಕ ಮಟ್ಟಿಗೆ ಸಾಧ್ಯವಾಗುತ್ತದೆ. ಮಾವಿನ ಕಾಯಿಗಳು ಗೊಲಿ ಗಾತ್ರ ಇದ್ದಾಗ ಗಿಡದ ಸುತ್ತಲು ವರ್ತುಲಾ ಆಕಾರವಾಗಿ(2*2 ಅಡಿ) ತೆಗ್ಗು ತೆಗೆದು ಅಥವಾ ಗಿಡದ ಎರಡು ಬದಿಗೆ ಆಳವಾದ ರೆಂಟೆ ಸಾಲು ಮಾಡಿ ವಾರಕ್ಕೊಮ್ಮೆ ಸಾಲಿನ ಮುಖಾಂತರ ನೀರು ಹಾಯಿಸಬೇಕು ಇದರಿಂದ ಹೂವು ಗುಚ್ಚ, ಮಿಡಿಕಾಯಿಗುಚ್ಚ ಉದುರುವುದು ಕಡೆಮೆ ಆಗುತ್ತದೆ.  


ಜಿಗಿ ಹುಳು, ಥ್ರೀಪ್ಸ್ ನುಸಿ ಮತ್ತು ಇತರೆ ರಸ ಹೀರುವ ಕೀಟಗಳು ಕಂಡುಬಂದಲ್ಲಿ, ಥೈಯೋಮೆಥೋಕ್ಸಾಮ್ + ಲಾಬ್ಡಾಸೈಹ್ಯಾಲೋಥ್ರೀನ್ ಇದರ ಜೊತೆಗೆ ಸೋಪಿನ ದ್ರಾವಣ ಬೆರೆಸಿ ಸಿಂಪಡಿಸಬೇಕು


ಬೂದಿ ರೋಗ ಕಂಡುಬಂದಲ್ಲಿ ಮೈಕ್ಲೋಬುಟಾನಿಲ್ ಅಥವಾ ಟಿಬುಕೊನಜೋಲ್ ಮಾವಿನ ಕಾಯಿಗಳು ಲಿಂಬೆ ಹಾಗೂ ಮೋಸಂಬಿ ಗಾತ್ರದಿದ್ದಾಗ ಮಿಥೈಲ್ ಯುಜಿನಾಲ್ ಮೋಹಕ ಬಲೆಗಳನ್ನು ಪ್ರತಿ ಎಕರೆಗೆ 4 ರಿಂದ 5 ರಂತೆ ಗಿಡದ ರಂಬೆಗೆ ಕಟ್ಟಬೇಕು.


ಇದನ್ನು ಓದಿ : WPL 2024 : 1ರನ್ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಯುಪಿ ವಾರಿಯರ್ಸ್ 


ಸ್ಪೊಂಜಿ ಟಿಶೂ ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ ನೀರಿನಲ್ಲಿ ಕರಗುವ 19:19:19 ಎನ್‍ಪಿಕೆ, ಮ್ಯಾಂಗೋ ಸ್ಪೇಷಲ್ ಮತ್ತು ಸೋಪಿನ ದ್ರಾವಣ ಬೆರೆಸಿ 15 ರಿಂದ 20 ದಿನಗಳ ಅಂತರದಲ್ಲಿ  ಎರಡು ಸಲ ಸಿಂಪರಣೆ ಮಾಡಬೇಕು. ಕೃಷಿ ಅಥವಾ ತೋಟಗಾರಿಕೆ ತಜ್ಞರ ಸಲಹೆಯಂತೆ ಸಿಂಪಡಿಸಬೇಕು.


ಇದರಿಂದ ಈಗ ಮಾವು ಬೆಳೆಗೆ ಬಂದಿರುವ ರೋಗ ಮತ್ತು ಕೀಟ ಬಾಧೆಗಳನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎಂದು ಉಪ ನಿರ್ದೇಶಕರು ಕೆ.ಸಿ. ಬಧ್ರನವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.