WPL 2024 : 1ರನ್ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಯುಪಿ ವಾರಿಯರ್ಸ್

WPL 2024 :   ವುಮೆನ್ಸ್ ಪ್ರೀಮಿಯರ್ ಲೀಗ್ 2024ರ 15ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡದ ನಡುವೆ ನಡೆಯಿತು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಕೇವಲ 1ರನ್ ಅಂತರದಲ್ಲಿ ಡೆಲ್ಲಿ ಲ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದೆ. 

Written by - Zee Kannada News Desk | Last Updated : Mar 9, 2024, 12:31 AM IST
  • ವುಮೆನ್ಸ್ ಪ್ರೀಮಿಯರ್ ಲೀಗ್ 2024ರ 15ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡದ ನಡುವೆ ನಡೆಯಿತು
  • ಕೇವಲ 1ರನ್ ಅಂತರದಲ್ಲಿ ಡೆಲ್ಲಿ ಲ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದೆ.
  • ಯುಪಿ ವಾರಿಯರ್ಸ್ ತಂಡ ದೀಪ್ತಿ ಶರ್ಮ 59 (48), ಅಲಿಸ್ಸಾ ಹೀಲಿ 29(30) ಆಡಿದ ಆಟಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 138ರನ್ ಗಳ ಗೆಲುವಿನ ಗುರಿ ನೀಡಲು ಸಹಕಾರಿಯಾಯಿತು.
WPL 2024 : 1ರನ್ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಯುಪಿ ವಾರಿಯರ್ಸ್  title=

UP Warriors Vs Delhi Capitals  : ಇಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ  ವುಮೆನ್ಸ್ ಪ್ರೀಮಿಯರ್ ಲೀಗ್ 2024ರ 15ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡದ ನಡುವೆ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಕೇವಲ 1ರನ್ ಅಂತರದಲ್ಲಿ ಡೆಲ್ಲಿ ಲ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಪಿ ವಾರಿಯರ್ಸ್ ತಂಡ ದೀಪ್ತಿ ಶರ್ಮ 59 (48), ಅಲಿಸ್ಸಾ ಹೀಲಿ 29(30) ಆಡಿದ ಆಟಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 138ರನ್ ಗಳ ಗೆಲುವಿನ ಗುರಿ ನೀಡಲು ಸಹಕಾರಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಟಿಟಾಸ್ ಸದು ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು. ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಜೆಸ್ ಜೊನಾಸೆನ್ ಮತ್ತುಅಲಿಸ್ ಕ್ಯಾಪ್ಸಿ ತಲಾ ಒಂದು ವಿಕೆಟ್ ಪಡೆದರು.

ಇದನ್ನು ಓದಿ : Tamannah Bhatia : ಬ್ಲ್ಯಾಕ್ ಅಂಡ್ ವೈಟ್ ಕಾಂಬಿನೇಷನ್ ನಲ್ಲಿ ತಮನ್ನಾ, ಫೋಟೋಸ್ ಇಲ್ಲಿವೆ

ಯುಪಿ ವಾರಿಯರ್ಸ್ ತಂಡ ನೀಡಿದ ಸಾಮಾನ್ಯ ಮೊತ್ತವನ್ನು ಸಾಧಿಸಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ತಿಳಿದು  ಶಫಾಲಿ ವರ್ಮಾ (15), ನಾಯಕಿ ಮೆಗ್ ಲ್ಯಾನಿಂಗ್ 46 ಎಸೆತಗಳಲ್ಲಿ 12 ಬೌಂಡರಿ ಸಹಿತ 60 ರನ್ ಗಳಿಸಿದರು.  ಲ್ಯಾನಿಂಗ್ ಅವರ ಆಟದಿಂದ ಸುಲಭ ಗೆಲವನ್ನು ಸಾಧಿಸುತ್ತದೆ  ಎನ್ನಬಹುದಾಗಿತ್ತು.  ಆದರೆ ಕೊನೆಯ ಎರಡು ಓವರ್ ಪಂದ್ಯದ ಚೆಹರೆಯೇ ಬದಲಾಯಿತು. 

14 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಗೆ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಕೊನೆಯ ಎರಡು ಓವರ್ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಕೇವಲ 15 ರನ್ ಬೇಕಿತ್ತು,  ಇನ್ನೂ ಆರು ವಿಕೆಟ್‌ಗಳು ಕೈಯಲ್ಲಿದ್ದ ಕಾರಣ ಗೆಲುವಿನ ವಿಶ್ವಾಸದಲ್ಲಿದ್ದ ಡೆಲ್ಲಿ ತಂಡ 19ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ದೀಪ್ತಿ ಶರ್ಮಾ 5 ರನ್ ನೀಡಿ ಮೂರು ವಿಕೆಟ್ ಪಡೆದು ಆಘಾತ ನೀಡಿದರು. ಕೊನೆಯ ಓವರ್ ನಲ್ಲಿ ಡೆಲ್ಲಿ ಗೆಲುವಿಗೆ 10 ರನ್ ಬೇಕಿತ್ತು.

ಇದನ್ನು ಓದಿ : Maidaan : ಫುಟ್ಬಾಲ್ ತರಬೇತುದಾರನಾಗಿ ಅಜಯ್ ದೇವಗನ್ : ಮೈದಾನ್ ಟ್ರೈಲರ್ ರಿಲೀಸ್

ಗ್ರೇಸ್ ಹ್ಯಾರಿಸ್ ಬೌಲಿಂಗ್ ಮಾಡಲು ಬಂದ ಮೊದಲ ಎಸೆತದಲ್ಲೇ ರಾಧಾ ಯಾದವ್ ಸಿಕ್ಸರ್ ಬಾರಿಸುವ ಮೂಲಕ ಮತ್ತೆ ಡೆಲ್ಲಿ ಮೇಲುಗೈ ಸಾಧಿಸಿತು. ಬಳಿಕ ಎರಡನೇ ಎಸೆತದಲ್ಲಿ 2 ರನ್ ಗಳಿಸಿದರು. 4 ಎಸೆತಗಳಲ್ಲಿ ಡೆಲ್ಲಿ ಗೆಲುವಿಗೆ ಮೂರು ರನ್ ಬೇಕಿತ್ತು. ಮೂರನೇ ಎಸೆತದಲ್ಲಿ ರಾಧಾ ಯಾದವ್ ಬೌಲ್ಡ್ ಆದರು. ನಾಲ್ಕನೇ ಎಸೆತದಲ್ಲಿ ಜೊನಾಸೆನ್ ರನೌಟ್‌ಗೆ ಬಲಿಯಾದರು. ಕೊನೆಯ ಎಸೆತದಲ್ಲಿ ಡೆಲ್ಲಿ ಗೆಲುವಿಗೆ ಎರಡು ರನ್ ಬೇಕಿತ್ತು. ಆದರೆ ಟಿಟಾಸ್ ಸದು ಡೇನಿಯಲ್ ವ್ಯಾಟ್‌ಗೆ ಕ್ಯಾಚ್ ನೀಡಿ ಔಟಾದರು. ಯುಪಿ ವಾರಿಯರ್ಸ್ ಒಂದು ರನ್‌ಗಳ ರೋಚಕ ಗೆಲುವು ಸಾಧಿಸಿ ಬೀಗಿತು . ದೀಪ್ತಿ ಶರ್ಮಾ 4 ವಿಕೆಟ್ ಪಡೆದರು. ಗ್ರೇಸ್ ಹ್ಯಾರಿಸ್, ಸೈಮಾ ಠಾಕೂರ್ ತಲಾ ಎರಡು ವಿಕೆಟ್ ಪಡೆದುಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News