CP Yogeshwar : `ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದರೆ ಸಿಎಂ ಬದಲಾವಣೆಯಾಗಲೇಬೇಕು`
ಶೀಘ್ರವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತವೆಂದು ಹೇಳಿರುವ ಉಭಯ ನಾಯಕರು
ಬೆಂಗಳೂರು : ಬಿಜೆಪಿ ಮತ್ತು ಕರ್ನಾಟಕ ರಾಜ್ಯ ಉಳಿಯಬೇಕಾದರೆ ಮುಖ್ಯಮಂತ್ರಿ ಬದಲಾವಣೆಯಾಗಲೇಬೇಕೆಂದು ಪ್ರವಾಸ್ಯೋದ್ಯಮ ಸಚಿವ ಸಿ.ಪಿ.ಯೋಗಿಶ್ವರ್ ಆಗ್ರಹಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ವಿರುದ್ಧ ಯೋಗಿಶ್ವರ್ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ. ಕರ್ನಾಟಕ ರಾಜ್ಯ ಮತ್ತು ಬಿಜೆಪಿ ಉಳಿಯಬೇಕಾದರೆ ಮುಖ್ಯಮಂತ್ರಿ ಬದಲಾವಣೆಯಾಗಲೇಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 19 ರಿಂದ 22ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಸುರೇಶ್ ಕುಮಾರ್
ಸಿಎಂ ಗಾದಿಯನ್ನು ಮೈಸೂರು ದಸರಾದ ಚಿನ್ನದ ಅಂಬಾರಿಗೆ ಹೋಲಿಸಿ ಯೋಗಿಶ್ವರ್(CP Yogeshwar) ಟೀಕಿಸಿದ್ದಾರೆ. ದಸರಾ ಆನೆಗಳು ಚಿನ್ನದ ಅಂಬಾರಿ ಹೊತ್ತು ನಿಗದಿತ ಸ್ಥಳವನ್ನು ತಲುಪುತ್ತವೆ. ಇಲ್ಲಿ ಆನೆಗಳು ಹೊರುವ ಚಿನ್ನದ ಅಂಬಾರಿಯ ತೂಕ ಮುಖ್ಯವಾಗುವುದಿಲ್ಲ. ಅದನ್ನು ಹೊತ್ತು ನಿಗದಿತ ಸ್ಥಳಕ್ಕೆ ತಲುಪುವುದು ಬಹುಮುಖ್ಯ. ಪ್ರತಿವರ್ಷವೂ ಒಂದೇ ಆನೆ ಚಿನ್ನದ ಅಂಬಾರಿಯನ್ನು ಹೊರಲು ಸಾಧ್ಯವಿಲ್ಲ. ಸಾಮರ್ಥ್ಯಕ್ಕೆ ತಕ್ಕಂತೆ ಅಂಬಾರಿ ಹೊರುವ ಆನೆಗಳನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆ ಅನಿವಾರ್ಯವೆಂದು ಯೋಗಿಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: Heavy Rainfall : ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ
ಚಿನ್ನದ ಅಂಬಾರಿಯನ್ನು ಆನೆ ಹೊರಬೇಕೇ ಹೊರತು ಅದರ ಮರಿಯಲ್ಲವೆಂದು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ವಿರುದ್ಧ ಯೋಗಿಶ್ವರ್ ಕುಟುಕಿದ್ದಾರೆ. ಕರ್ನಾಟಕವು ಆನೆ ಮತ್ತು ಹುಲಿಗಳಿಗೆ ಪ್ರಖ್ಯಾತಿ ಗಳಿಸಿದೆ. ಚಿನ್ನದ ಅಂಬಾರಿ ಹೊರಲು ಸೂಕ್ತವಾದ ಆನೆಯನ್ನು ಹುಡುಕುವುದು ಕಷ್ಟವೇನಲ್ಲ. ದಸರಾ ಹಬ್ಬ ಬಂದರೆ ಚಿನ್ನದ ಅಂಬಾರಿ ಹೊರಲು ಪಕ್ಷದ ಹೈಕಮಾಂಡ್ ಸೂಕ್ತವಾದ ಆನೆಯನ್ನು ಹುಡುಕಲಿದೆ ಎಂದು ಯೋಗಿಶ್ವರ್ ಹೇಳಿದ್ದಾರೆ.
ಇದನ್ನೂ ಓದಿ:Religious Places: ರಾಜ್ಯದಲ್ಲಿ ಇಂದಿನಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸರ್ಕಾರದ ಗ್ರೀನ್ ಸಿಗ್ನಲ್
ಇನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ್ದು, ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಮೇಕೆ ದಾಟು ಯೋಜನೆಗೆ ಅಡ್ಡಿ ಬೇಡ : ತಮಿಳುನಾಡಿಗೆ ಪತ್ರ ಬರೆದ ಯಡಿಯೂರಪ್ಪ
ಕರ್ನಾಟಕ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೋವಿಡ್-19(Covid-19) ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕೊರೊನಾ ಹೆಸರಿನಲ್ಲಿಯೂ ಲೂಟಿ ಹೊಡೆದಿದೆ. ಹೀಗಾಗಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಬದಲಾಯಿಸಿ ಕರ್ನಾಟಕದಲ್ಲಿ ಬಿಜೆಪಿಯನ್ನು ಉಳಿಸಬೇಕಾಗಿದೆ. ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದೆ. ಶೀಘ್ರವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:Karnataka Unlock 3.O : ರಾಜ್ಯದಲ್ಲಿ ಅನ್ ಲಾಕ್ 3.O : ಏನಿದೆ, ಏನಿಲ್ಲ?
ರಾಜ್ಯದಲ್ಲಿ ಸ್ವತಃ ಸಿಎಂ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಮುಖ್ಯಮಂತ್ರಿಯವರ ಡ್ರಾಯಿಂಗ್ ರೂಮ್ ಮೇಲೆ ಸಿಸಿಬಿ(CCB) ಏಕೆ ದಾಳಿ ನಡೆಸುತ್ತಿಲ್ಲವೆನ್ನುವುದು ಯಕ್ಷ ಪ್ರಶ್ನೆಯಾಗಿದೆ. ಸಿಎಂ ಪುತ್ರ ವಿಜಯೇಂದ್ರ ಅವರೇ ಡೀಲ್ ಮಾಡುತ್ತಿರುವುದು ಗೊತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲ. ಶೀಘ್ರವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ:ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..!
ಸಿಎಂ ಯಡಿಯೂರಪ್ಪ ಅವರನ್ನು ಬೆಂಬಲಿಸಿರುವ ವಿವಿಧ ಮಠಗಳ ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಯತ್ನಾಳ್(Basanagouda Patil Yatnal), ಶ್ರೀಗಳು ರಾಜಕೀಯ ಬಿಟ್ಟು ಹಸುಗಳಿಗೆ ಆಶ್ರಯ ನೀಡುವ ಬಗ್ಗೆ ಹಾಗೂ ಲವ್ ಜಿಹಾದ್ ನಂತಹ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸಬೇಕಾಗಿದೆ. ಮಠಗಳ ಮುಖ್ಯಸ್ಥರಿಗೆ ರಾಜಕೀಯದಲ್ಲಿ ಆಸಕ್ತಿಯಿದ್ದರೆ ಅವರು ತಮ್ಮ ಕೇಸರಿ ನಿಲುವಂಗಿಯನ್ನು ಮತ್ತು ಖಾದಿ ಬಟ್ಟೆಗಳನ್ನು ತ್ಯಜಿಸಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.