ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲಿ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Manjunath N | Last Updated : Jul 3, 2021, 10:46 PM IST
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.
  • ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲಿ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಶನಿವಾರದಂದು ಪ್ರಕಟವಾಗಿರುವ ವರದಿಯಲ್ಲಿ 34 ನಗರಗಳು ಉತ್ತಮ ವರ್ಗದಲ್ಲಿದ್ದರೆ, 56 ನಗರಗಳಲ್ಲಿ ತೃಪ್ತಿಕರ ವರ್ಗದಲ್ಲಿವೆ, ಇನ್ನೂ 36 ನಗರಗಳು ಮಧ್ಯಮ ವಿಭಾಗದಲ್ಲಿವೆ.
 ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..! title=
Photo Courtesy : Manjunath Naragund

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲೇ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶನಿವಾರದಂದು ಪ್ರಕಟವಾಗಿರುವ ವರದಿಯಲ್ಲಿ 34 ನಗರಗಳು 'ಉತ್ತಮ' ವರ್ಗದಲ್ಲಿದ್ದರೆ, 56 ನಗರಗಳು ತೃಪ್ತಿಕರ ವರ್ಗದಲ್ಲಿವೆ, ಇನ್ನೂ 36 ನಗರಗಳು ಮಧ್ಯಮ ವರ್ಗದಲ್ಲಿವೆ.

ಫತೇಬಾದ್ (245), ಕೈತಾಲ್ (215), ಪಾಣಿಪತ್ (227), ಸಿರ್ಸಾ (242) ಮತ್ತು ಸೋನಿಪತ್ (202) 5 ನಗರಗಳಲ್ಲಿ ಎಕ್ಯೂಐ ಕಳಪೆ ವಿಭಾಗದಲ್ಲಿದೆ ಎಂದು ವರದಿಯಾಗಿದೆ.ಈ ಎಲ್ಲಾ ಐದು ನಗರಗಳಲ್ಲಿ, Particulate Matter (PM) Pollution 10 ಪ್ರಮುಖ ಮಾಲಿನ್ಯಕಾರಕವಾಗಿದೆ.ಎಕ್ಯೂಐ (Air Quality Index) ಮೌಲ್ಯ 245 ರೊಂದಿಗೆ ಫತೇಹಾಬಾದ್ ಆ ದಿನದ ಕಳಪೆ ಮಾಲಿನ್ಯವನ್ನು ಹೊಂದಿದ ಕುಖ್ಯಾತಿಗೆ ಒಳಗಾಗಿದ್ದರೆ, ಕರ್ನಾಟಕದ ಗದಗ 15 ಕ್ಕೆ ಇಳಿಯುವ ಮೂಲಕ ಆ ದಿನದ ಸ್ವಚ್ಛ ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.

ನಾಲ್ಕು ಮಹಾನಗರಗಳಲ್ಲಿ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ವಾಯುಗುಣ ಮಟ್ಟ ಉತ್ತಮ ವಿಭಾಗದಲ್ಲಿದೆ, ಅದರಲ್ಲಿ ಚೆನ್ನೈ ಕಡಿಮೆ ಕಲುಷಿತ ಮೆಟ್ರೋ ನಗರವಾಗಿದೆ. ಎಲ್ಲಾ ನಾಲ್ಕು ನಗರಗಳಲ್ಲಿ ಪ್ರಧಾನ ವಾಯು ಮಾಲಿನ್ಯಕಾರಕ Particulate Matter 10 ಆಗಿತ್ತು. ಆದಾಗ್ಯೂ, ಕೋಲ್ಕತ್ತಾದಲ್ಲಿ, ಗಾಳಿಯನ್ನು ಕಲುಷಿತಗೊಳಿಸುವಲ್ಲಿ ಓಜೋನ್ ಕೂಡ ಮಹತ್ವದ ಪಾತ್ರವನ್ನು ವಹಿಸಿದೆ ಎನ್ನಲಾಗಿದೆ.

ದೆಹಲಿಯ ಪಕ್ಕದ ನಗರಗಳಾದ, ಸೋನಿಪತ್ ಮತ್ತು ಪಾಣಿಪತ್‌ನಲ್ಲಿ ವಾಯುಗುಣ ಮಟ್ಟ ಕಳಪೆಯಾಗಿತ್ತು. ಮಾರುತಿ ಸುಜುಕಿ, ಮತ್ತು ಹೋಂಡಾ ಸೇರಿದಂತೆ ಹಲವಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಗುರುಗ್ರಾಮ್ ಜಿಲ್ಲೆಯ ಮಾನೇಸರ್ ಅತ್ಯಂತ ಕಡಿಮೆ ಎಕ್ಯೂಐ ಮೌಲ್ಯವನ್ನು ನೋಂದಾಯಿಸಿದೆ.

ಭಿವಾಡಿ ಮತ್ತು ಮಾನೇಸರ್ ಹೊರತುಪಡಿಸಿ, PM (Particulate Matter) 10 ಪ್ರಮುಖ ಮಾಲಿನ್ಯಕಾರಕವಾಗಿರುವುದರಿಂದ ಇತರ ಎಲ್ಲ ನಗರಗಳಲ್ಲಿನ ಎಕ್ಯೂಐ ಪರಿಣಾಮ ಬೀರಿದೆ. ಆದಾಗ್ಯೂ, ನೋಯ್ಡಾದಲ್ಲಿನ ಎಕ್ಯೂಐ (AQI)ಗೆ ಓಜೋನ್ ಕೂಡ ಕಾರಣವಾಗಿದೆ ಎನ್ನಲಾಗಿದೆ. PM 2.5 ಭಿವಾಡಿ ಮತ್ತು ಮನೇಸರ್ನಲ್ಲಿ ಪ್ರಮುಖ ವಾಯು ಮಾಲಿನ್ಯಕಾರಕವಾಗಿದೆ.

ಶೂನ್ಯ ಮತ್ತು 50 ರ ನಡುವಿನ ವಾಯುಗುಣ ಮಟ್ಟ ಸೂಚ್ಯಂಕವನ್ನು "ಉತ್ತಮ", 51 ಮತ್ತು 100 "ತೃಪ್ತಿದಾಯಕ", 101 ಮತ್ತು 200 "ಮಧ್ಯಮ", 201 ಮತ್ತು 300 " ಕಳಪೆ ", 301 ಮತ್ತು 400 "ತುಂಬಾ ಕಳಪೆ", ಮತ್ತು 401 ಮತ್ತು 500 "ತೀವ್ರ" ಎಂದು ಪರಿಗಣಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News