Govt Schools: ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ವಾತಾವರಣ ಇದ್ದರೇ ಮಕ್ಕಳು ಓಡೋಡಿ ಶಾಲೆಗೆ ಬರುತ್ತಾರೆ. ಅದೇ ವಾತಾವರಣ ಅಸ್ವಸ್ಥತೆಯಿಂದ ಕೂಡಿದ್ದರೇ ಮಕ್ಕಳು ಆ ಶಾಲೆ ಕಡೆ ಮನಸ್ಸು ಮಾಡೋಲ್ಲಾ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು.


COMMERCIAL BREAK
SCROLL TO CONTINUE READING

ಕುಂದಗೋಳ ತಾಲೂಕಿನ ಶಿರೂರು ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ ಹಾಗೂ ಗ್ರಾಮದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಅಡಿಗಲ್ಲು ಅನಾವರಣ ಮಾಡಿ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ್, ಒಳ್ಳೆ ವಾಹನ ಇದ್ರೇ ಓಡಾಡ್ತೀರಾ. ವಾಹನ ಹಳೆಯದಾದ್ರೇ ಪ್ರಯಾಣ ಸಾಕು ಎನಿಸುತ್ತದೆ. ಹಾಗೇ ಹೊಸ ಹೊಸ ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇರಬೇಕು ಎಂದರು.


ಇದನ್ನೂ ಓದಿ- ಆಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಸಿಎಂ ಸಚಿವಾಲಯದಲ್ಲೇ ಉದ್ಯೋಗ ನೀಡಿದ ಮುಖ್ಯಮಂತ್ರಿ


ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅಭಿನವ ಕಲ್ಯಾಣಪುರ ಬಸವಣ್ಣನವರು ಆರ್ಶಿವಚನ ನೀಡಿದರು, ವೇದಿಕೆ ಮೇಲೆ ಉಪಸ್ಥಿತರಿದ್ದ ಶಿರೂರು ಗ್ರಾಪಂ ಅಧ್ಯಕ್ಷ ಅಶೋಕ್ ಘೋರ್ಪಡೆ ಸರ್ವರು ಸೇರಿ ವಿಕಲಚೇತನ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ 55 ನಿತ್ಯ ಬಳಕೆಯ ಸ್ಟೀಲ್ ಪಾತ್ರೆ ವಿತರಿಸಿದರು. 


ಇದನ್ನೂ ಓದಿ- ಆಟವಾಡುವ ವಯಸ್ಸಿನಲ್ಲಿ ಬಾಲಕಿ ಅಪ್ರತಿಮ ಸಾಧನೆ...!


ಈ ಸಂದರ್ಭದಲ್ಲಿ ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.