Haveri Latest News: ನಿನ್ನೆ ನಡೆದಿದ್ದ ಘಟನೆಯನ್ನ ಬೆಳಗಾಗುವಷ್ಟರಲ್ಲಿ ಮರೆಯುವ ಕಾಲದಲ್ಲಿ ಇಲ್ಲೊಂದು ಪುಟ್ಟ ಪುಟಾಣಿ ಪ್ರತಿಭೆ ಎಲ್ಲರ ಉಬ್ಬೆರುವಂತೆ ಮಾಡುತ್ತದೆ. ದೇಶದ ಪ್ರಧಾನಿಗಳು, ರಾಜ್ಯಗಳ ಸಿಎಂಗಳು, ರಾಜ್ಯಗಳ ರಾಜಧಾನಿ, ನದಿಗಳ ಹೆಸರು ಸೇರಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಥಟ್ಟನೆ ಉತ್ತರಿಸುವ ಮೂಲಕ ಎಂತಹವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತಿದ್ದಾಳೆ ಈ ಪುಟ್ಟ ಚೋರಿ.
ಹೌದು, ಈ ಬಾಲಕಿ ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಜಾಣ ವಿದ್ಯಾರ್ಥಿನಿ ವರ್ಷಾ. ಹಿರೇಕೆರೂರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ. ಈ ಪುಟಾಣಿಯ ತಂದೆ ಈರಣ್ಣ, ತಾಯಿ ಅಕ್ಷತಾ. ಇನ್ನು ಈ ದಂಪತಿಗಳು ಕಡುಬಡವರಾಗಿದ್ದು, ಪಟ್ಟಣದ ದುರ್ಗಾದೇವಿ ದೇವಸ್ಥಾನದ ಬಳಿ ಹೂವು, ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಷ್ಟು ಬಡತನವಿದ್ದರು ಈ ಪೋಷಕರು, ಬಾಲಕಿಯ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ- ಗೃಹಲಕ್ಷ್ಮೀ ಅರ್ಜಿಗೆ ಯಾರೂ ಹಣ ಕೊಡಬೇಡಿ - ಲಕ್ಷ್ಮೀ ಹೆಬ್ಬಾಳಕರ್ ಮನವಿ
ಪೋಷಕರು ತಮ್ಮ ಮಗುವಿಗೆ ಚಿಕ್ಕ ವಯಸ್ಸಿನಿಂದಲೂ ಹಾಕಿರುವ ಭದ್ರ ಬುನಾದಿಯಿಂದಾಗಿ ಶಾಲೆಯಲ್ಲಿ ಶಿಕ್ಷಣ ಸೇರಿದಂತೆ ಎಲ್ಲದರಲ್ಲೂ ಮುಂದಿರುವ ಬಾಲಕಿ ವರ್ಷಾ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ, ಭಾತರ ರಕ್ಷ ಪ್ರಶಸ್ತಿ ಪುರಸ್ಕೃತರು, ದೇಶದಲ್ಲಿರುವ ರಾಜ್ಯಗಳು, ಜಿಲ್ಲೆಗಳು, ತಾಲೂಕುಗಳು, ರಾಜಧಾನಿಗಳು, ನದಿಗಳು, ಈವರೆಗಿನ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳ ಬಗ್ಗೆ ಕೇಳಿದರೆ ಫಟಾ ಫಟ್ ಅಂತ ಉತ್ತರಿಸುತ್ತಾಳೆ.
ಪಠ್ಯ & ಪತ್ಯೇತರ ಯಾವ ಚಟುವಟಿಕೆ, ಸ್ಪರ್ಧೆ, ಪರೀಕ್ಷೆ ನೀಡಿದರೂ ತಕ್ಷಣ ಉತ್ತರಿಸುತ್ತಾಳೆ. ಇನ್ನು 1 ರಿಂದ 30 ರ ವರೆಗೆ ಮಗ್ಗಿ ಕಲಿತಿದ್ದು, ಗಣಿತದಲ್ಲೂ ಈ ಪುಟ್ಟ ಬಾಲಕಿ ಸೈ ಎನಿಸಿಕೊಳ್ಳುವ ಮೂಲಕ ಈಗ ಎಲ್ಲ ಗಮನ ಸೆಳೆಯುತ್ತಿದ್ದಾಳೆ.
ಈ ಬಾಲಕಿಯ ಈ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. 50 ಗಾದೆ ಮಾತುಗಳು, 15 ಸರ್ವಜ್ಞನ ವಚನಗಳು, 10 ಅಕ್ಕಮಹಾದೇವಿ ವಚನ ಬಾಯಿಪಾಠ ಮಾಡಿಕೊಂಡಿದ್ದಾಳೆ, ಪಂಚಾಗದ ತಿರಿಗಳು, ನಕ್ಷತ್ರಗಳು, ಪಕ್ಷಗಳು, ರಾಜ್ಯದ ಮಹಾನಗರ ಪಾಲಿಕೆಗಳು, ಪುರಾಣದ ಹೆಸರುಗಳು, ಸೌರವ್ಯೂಹದ ಗ್ರಹಗಳು, ವೇದಗಳು, ಉಪನಿಷತ್ತುಗಳು ಸೇರಿದಂತೆ ಯಾವುದೇ ವಿಷಯ ಕುರಿತು ಪ್ರಶ್ನೆ ಕೇಳಿದರೂ ಉತ್ತರಿಸುತ್ತಾಳೆ. ಈಗಾಗಲೇ ಏನೇ ಕೇಳಿದರೂ ಏಕಾಗ್ರತೆಯಿಂದ ಆಲಿಸಿ, ಗ್ರಹಿಸಿಕೊಂಡು ಥಟ್ಟನೆ ಉತ್ತರಿಸುತ್ತಾಳೆ. ಇನ್ನು ಈ ಬಾಲಕಿ ಸಾಮಾನ್ಯ ಜ್ಞಾನದ ಜೊತೆಗೆ ಶಾಲೆಯ ಇತರ ಪಾಠಗಳಲ್ಲೂ ಫಸ್ಟ್. ಈ ಕಾರಣ ಬಾಲಕಿ ಜಾಣ್ಮೆಗೆ ಶಿಕ್ಷಕರೆ ಸೋತು ಹೋಗಿದ್ದಾರೆ. ಇಂತಹ ವಿದ್ಯಾರ್ಥಿನಿ ನಮ್ಮ ಶಾಲೆಯಲ್ಲಿ ಓದುತ್ತಿಸುವದು ಖುಷಿ ಇದೆ. ಇನ್ನು ನನ್ನ ತರಗತಿಯಲ್ಲಿ ಓದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾರೆ ತರಗತಿ ಶಿಕ್ಷಕರು.
ಇದನ್ನೂ ಓದಿ- ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್ಎಫ್ಎಸ್ ಕಂಪನಿ ಪ್ರಸ್ತಾವನೆ : ಎಂ.ಬಿ. ಪಾಟೀಲ್
ಇನ್ನೂ ಈ ಬಾಲಕಿಗೆ ಅವಳಿಗೆ ಪಠ್ಯ & ಪತ್ಯೇತರ ಯಾವ ಚಟುವಟಿಕೆ, ಸ್ಪರ್ಧೆ, ಪರೀಕ್ಷೆ ನೀಡಿದರೂ ತಕ್ಷಣ ಉತ್ತರಿಸುತ್ತಾಳೆ. ಈ ಬಾಲಕಿಯ ಸಾಮಾನ್ಯ ಜ್ಞಾನ ಮತ್ತು ಅಪಾರ ನೆನಪಿನ ಶಕ್ತಿಯಿಂದ, ತರಗತಿಗಳಲ್ಲಿ ಎಲ್ಲದರಲ್ಲೂ ಈ ಬಾಲಕಿ ಪ್ರಥಮಳಾಗಿದ್ದಾಳೆ ಅಂತಾ ಶಿಕ್ಷಕರು ಖುಷಿ ವ್ಯಕ್ತಪಡಿಸಿದ್ರೆ. ಇತ್ತ ಹೆತ್ತ ತಾಯಿ ಮಗಳ ಓದಿನ ಕುರಿತು ಮಾಹಿತಿ ನೀಡಿದ್ದು, ಒಮ್ಮೆ ಓದಿಕೊಂಡರೆ ಸಾಕು, ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಎಲ್ಲವನ್ನೂ ಮಗಳು ವರ್ಷಾ ನೆನಪಿನಲ್ಲಿಟ್ಟುಕೊಳ್ಳುವಳು. ಈ ಹಿನ್ನಲೆ ಅವಳಿಗೆ ಉನ್ನತ ಶಿಕ್ಷಣ ಕೊಡಿಸಿ, ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಅದ್ಹೇನೆ ಇರಲಿ. ನಾಲಿಗೆ ತುದಿಯಲ್ಲಿ ಥಟ್ ಅಂತಾ ಪ್ರತಿ ಪ್ರಶ್ನೆಗೆ ಉತ್ತರಿಸೋ ಬಾಲಕಿ ಕಂಡು ಎಲ್ಲರೂ ಮೂಕ ವಿಸ್ಮಿತರಾಗಿದ್ದಾರೆ. ಈ ಪುಟ್ಟ ಪ್ರತಿಭೆ ಮುಂದೊಂದು ದಿನ ನಮ್ಮ ದೇಶಕ್ಕೆ, ಉತ್ತಮ ಕೂಡುಗೆ ನೀಡಲಿ ಎಂಬುದು ನಮ್ಮ ಆಸೆಯವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.