ಐಐಟಿ ಧಾರವಾಡದಲ್ಲಿ 1 ಯಂಗ್ ಪ್ರೊಫೆಶನಲ್- II (IT) ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 23, 2024ರಂದು ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಆಯ್ಕೆಯಾದವರಿಗೆ ಧಾರವಾಡದಲ್ಲಿ ಹುದ್ದೆ ನೀಡಲಾಗುತ್ತದೆ.


ಇದನ್ನು ಓದಿ : RCBಗೆ "ಜಿಂಗಲ ಜೈ" ಅಂದ್ರು ಧ್ರುವ ಸರ್ಜಾ.! ತಂಡವನ್ನು ಹುರಿದುಂಬಿಸಲು ಹಾಡು ಬರೆದರು ಯೋಗರಾಜ್ ಭಟ 


ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಧಾರವಾಡ ಸಂಸ್ಥೆಯಲ್ಲಿ ಯಂಗ್ ಪ್ರೊಫೆಶನಲ್- II (IT) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದವರು ಅರ್ಹತೆ ಹೊಂದಿರುತ್ತಾರೆ. ಇನ್ನು ಆಯ್ಕೆಯಾದವರಿಗೆ ಮಾಸಿಕ ವೇತನ ₹35,000 ನೀಡಲಾಗುತ್ತದೆ.


ವಿದ್ಯಾರ್ಹತೆ :
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಕಂಪ್ಯೂಟರ್ ಅಪ್ಲಿಕೇಶನ್/ಇನ್ಫರ್ಮೇಶನ್ ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್​/ಆರ್ಟಿಫಿಸಿಯಲ್ ಇಂಟೆಲಿಜೆನ್ಸ್​/ಆಪರೇಟಿಂಗ್ ಸಿಸ್ಟಮ್ಸ್​/ಸಾಫ್ಟ್‌​ವೇರ್ ಇಂಜಿನಿಯರಿಂಗ್/ಕಂಪ್ಯೂಟರ್ ಗ್ರಾಫಿಕ್ಸ್‌​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ 


ವಯೋಮಿತಿ :
ಅರ್ಜಿ ಸಲ್ಲಿರುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 36 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಆಸಕ್ತ ಅಭ್ಯರ್ಥಿಗಳು ವೆಬ್-ಸೈಟ್, ಪೋರ್ಟಲ್ ಡೆವಲಪ್​ಮೆಂಟ್​ ಮತ್ತು ನಿರ್ವಹಣೆ, MySQLನಲ್ಲಿ ಅನುಭವಿಯಾಗಿರಬೇಕು. ಅಭ್ಯರ್ಥಿಗಳು Java/C++/PHP/Python ಆಧಾರಿತ ಅಪ್ಲಿಕೇಶನ್ ಡೆವಲಪ್​ಮೆಂಟ್‌​​ನಲ್ಲಿ ಅನುಭವ ಹೊಂದಿರಬೇಕಾಗುತ್ತದೆ.


ಇದನ್ನು ಓದಿ : RCB Vs CSK :  ಉದ್ಘಾಟನಾ ಸಮಾರಂಭದಲ್ಲಿ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್, ಪ್ರೇಕ್ಷಕರನ್ನು ಬೆರಗುಗೊಳಿಸಿದ ಪವರ್ ಫುಲ್ ಪ್ರದರ್ಶನ


ಶುಲ್ಕ:
 ಅಭ್ಯರ್ಥಿಗಳು ಅರ್ಜಿ ಅಲ್ಲಿಕೆಗೆ ಯಾವುದೇ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. 


ಇನ್ನು ಅರ್ಜಿ ಸಲ್ಲಿಸಿದವರಿಗೆ ಆನ್​​ಲೈನ್ ಟೆಸ್ಟ್​ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕೆಂದು ನೋಟಿಫಿಕೇಶನ್‌​ನಲ್ಲಿ ತಿಳಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.