RCBಗೆ "ಜಿಂಗಲ ಜೈ" ಅಂದ್ರು ಧ್ರುವ ಸರ್ಜಾ.! ತಂಡವನ್ನು ಹುರಿದುಂಬಿಸಲು ಹಾಡು ಬರೆದರು ಯೋಗರಾಜ್ ಭಟ

ಇಂದು  "ಐ ಪಿ ಎಲ್" ಆರಂಭ ಮೊದಲ ಪಂದ್ಯ ಆರ್ ಸಿ ಬಿ ಯಿಂದ ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಆರ್ ಸಿ ಬಿ ತಂಡವನ್ನು ಹುರಿದುಂಬಿಸುವ ಉದ್ದೇಶ ಹೊಂದಿದ್ದಾರೆ.

Written by - YASHODHA POOJARI | Edited by - Zee Kannada News Desk | Last Updated : Mar 22, 2024, 09:24 PM IST
  • ಆರ್ ಸಿ ಬಿ ತಂಡವನ್ನು ಹುರಿದುಂಬಿಸುವ "ಜಿಂಗಲ ಜೈ" ಎಂಬ ಹಾಡನ್ನು ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ.
  • ನಿರ್ದೇಶಕ ಎ.ಪಿ.ಅರ್ಜುನ್, ಡ್ಯಾನಿಶ್ ಸೇಠ್, ಮಣಿಕಂಠನ್ ಮುಂತಾದವರು ಈ ಹಾಡಿಗೆ ಸಹಕಾರ ನೀಡಿದ್ದಾರೆ.
  • ಇದು ಧ್ರುವ ಸರ್ಜಾ ಅವರು ಹಾಡಿರುವ ಮೊದಲ ಹಾಡು ಇದಾಗಿದೆ
RCBಗೆ "ಜಿಂಗಲ ಜೈ" ಅಂದ್ರು ಧ್ರುವ ಸರ್ಜಾ.! ತಂಡವನ್ನು ಹುರಿದುಂಬಿಸಲು ಹಾಡು ಬರೆದರು ಯೋಗರಾಜ್ ಭಟ  title=

Yogaraj Bhat : ಇತ್ತೀಚೆಗಷ್ಟೇ ನಡೆದ WPL ನಲ್ಲಿ ಆರ್ ಸಿ ಬಿ ಮಹಿಳಾ‌ ತಂಡದವರು ಕಪ್ ಗೆದ್ದಿದ್ದಾರೆ. ಈ ಬಾರಿಯ "ಐ ಪಿ ಎಲ್" ನಲ್ಲೂ ನಮ್ಮ ಆರ್ ಸಿ ಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ.

ಆರ್ ಸಿ ಬಿ ತಂಡವನ್ನು ಹುರಿದುಂಬಿಸುವ "ಜಿಂಗಲ ಜೈ" ಎಂಬ ಹಾಡನ್ನು ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ. "ಜಿಂಗಲ ಜೈ" ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಡಿದ್ದಾರೆ.

ಇದನ್ನು ಓದಿ : RCB Vs CSK : ಉದ್ಘಾಟನಾ ಸಮಾರಂಭದಲ್ಲಿ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್, ಪ್ರೇಕ್ಷಕರನ್ನು ಬೆರಗುಗೊಳಿಸಿದ ಪವರ್ ಫುಲ್ ಪ್ರದರ್ಶನ

ಇದು ಧ್ರುವ ಸರ್ಜಾ ಅವರು ಹಾಡಿರುವ ಮೊದಲ ಹಾಡು ಕೂಡ. ಧ್ರುವ ಸರ್ಜಾ ಅವರೊಟ್ಟಿಗೆ ಗಾಯನಕ್ಕೆ ಯೋಗರಾಜ್ ಭಟ್, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಹಾಗೂ ಚೇತನ್ ಸೋಸ್ಕಾ ಅವರು ಜೊತೆಯಾಗಿದ್ದಾರೆ‌. ಚೇತನ್ ಸೋಸ್ಕಾ ಅವರೆ ಸಂಗೀತ ನೀಡಿದ್ದಾರೆ. ರೇಣುಕಾ ಯೋಗರಾಜ್ ಭಟ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ‌. 

ನಿರ್ದೇಶಕ ಎ.ಪಿ.ಅರ್ಜುನ್,  ಡ್ಯಾನಿಶ್ ಸೇಠ್, ಮಣಿಕಂಠನ್ ಮುಂತಾದವರು ಈ ಹಾಡಿಗೆ ಸಹಕಾರ ನೀಡಿದ್ದಾರೆ. ಅಭಿರಾಜ್, ಶಿವ್ ಪಾಟೀಲ್ , ರಾಕೇಶ್ ರಾಮ್ ಅವರ ಛಾಯಾಗ್ರಹಣ, ಸಚಿನ್ ಕೆ ರಾಮು ಸಂಕಲನ, ಗುಡ್ಡು ರಾಜ್ ನೃತ್ಯ ನಿರ್ದೇಶನ ಹಾಗೂ ಗಡ್ಡ ವಿಜಿ ಅವರ ಕಲಾ ನಿರ್ದೇಶನವಿರುವ "ಜಿಂಗಲ ಜೈ" ಹಾಡು ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿದೆ. 

ಇದನ್ನು ಓದಿ : IPL 2024: CSK ಅಭಿಮಾನಿಗಳಿಗೆ ಬಿಗ್‌ ಶಾಕ್.. ಧೋನಿ ಕ್ಯಾಪ್ಟನ್ಸಿ ಅಂತ್ಯ.. ಈ ಯುವ ಆಟಗಾರನೇ ನಾಯಕ!!    

ಧ್ರುವ ಸರ್ಜಾ, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ, ಕನ್ನಡದ ಮಕ್ಕಳು ಹಾಗೂ ಆರ್ ಸಿ ಬಿ ಅಭಿಮಾನಿಗಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News