ಬೆಂಗಳೂರು: ಐಎಂಎ ವಂಚನೆ ಪರಾಕಾರಣಕ್ಕೆ ಸಂಭದಿಸಿದಂತೆ ಇತ್ತೀಚಿಗೆ ಹಿರಿಯ ಮುಸ್ಲಿಂ ಪ್ರಭಾವಿ ನಾಯಕ ರೋಷನ್ ಬೇಗ ಅವರನ್ನ ಸಿಬಿಐ ಅರೆಸ್ಟ್ ಮಾಡಲಾಗಿತ್ತು. ಈಗ ಮತ್ತೊಬ್ಬ ಮುಸ್ಲಿಂ ಮತ್ತು ಕಾಂಗ್ರೆಸ್ ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಇಡಿ ಬಂಧನ ಸಾಧ್ಯತೆ.


COMMERCIAL BREAK
SCROLL TO CONTINUE READING

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೈನ್ಸ್ ವಿಶ್ವವಿದ್ಯಾಲಯದ ಉಚ್ಛಾಟಿತ ಚಾನ್ಸಲರ್ ಮಧುಕರ್ ಅಂಗೂರ್ ವಿಚಾರಣೆ ವೇಳೆ ಮಾಜಿ ಸಚಿವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (Fema Act) ಉಲ್ಲಂಘನೆ ಹಿನ್ನೆಲೆಯಲ್ಲಿ ಮಧುಕರ್ ವಿರುದ್ಧ ಇಡಿ ತನಿಖೆ ನಡೆಸುತ್ತಿದ್ದು, ಸಮನ್ಸ್ ಜಾರಿ ಮಾಡಿದೆ. ಈ ನಡುವೆ ತನಿಖೆಯ ವೇಳೆ ಮಧುಕರ್ 107 ಕೋಟಿ ಅಕ್ರಮ ಹಣ ವರ್ಗಾಣೆಗೆ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರ ಕೈವಾಡವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.


ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ 'ಬಿಗ್ ಶಾಕ್'..!


ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ 50 ಕೋಟಿ ರೂ. ಸಂದಾಯ ಮಾಡಿರುವುದಾಗಿ ಮಧುಕರ್ ಹೇಳಿದ್ದಾರೆ ಎನ್ನಲಾಗಿದೆ. ಮಧುಕರ್ ಹಾಗೂ ಆತನ ನಾಲ್ಕನೇ ಪತ್ನಿ ಪ್ರಿಯಾಂಕಾ ವಿರುದ್ಧ 107 ಕೋಟಿ ವಂಚನೆ ಆರೋಪ ಕೇಳಿಬಂದಿತ್ತು. ಬೆಂಗಳೂರಿನಲ್ಲಿ ಕಂಪನಿ ತೆರೆದು ಅದರ ಮೂಲಕ ಚಿಕಾಗೋದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ. ಅಲೈನ್ಸ್ ವಿವಿ ಹೆಸರಲ್ಲಿ, ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಹಣ ಸೇರಿದಂತೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.


'ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿಯವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ?'