ರಾಯಚೂರು : ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯ ಅಕ್ರಮ ಸಾಗಾಟ
(illegal transportation of milk) ಪ್ರಕರಣ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.  ಟ್ರಕ್ ನಲ್ಲಿ 253 ಮೂಟೆ ಹಾಲಿನ ಪೌಡರ್ ಅನ್ನು ಸಾಗಿಸಲಾಗುತ್ತಿತು.  ಕಂಟ್ರೋಲ್ ರೂಂಗೆ  ಬಂದಿರುವ ದೂರಿನ ಆಧಾರದ ಮೇಲೆ ರಾಯಚೂರು ಪಶ್ಚಿಮ ಠಾಣಾ ಪೊಲೀಸರು (Raichur Police) ಕಾರ್ಯಾಚರಣೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಸರ್ಕಾರಿ ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿಯನ್ನು (Milk Powder) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎಂದು 112 ಕಂಟ್ರೋಲ್ ರೂಂಗೆ ಎಮರ್ಜೆನ್ಸಿ ಕರೆ ಬಂದಿತ್ತು. ಈ ಕರೆಯ ಆಧಾರದ ಮೇಲೆ ರಾಯಚೂರು ಪಶ್ಚಿಮ ಠಾಣಾ ಪೊಲೀಸರು  ಕಾರ್ಯಾಚರಣೆ ನಡೆಸಿದ್ದಾರೆ. ರಾಯಚೂರಿನ ಯರಮರಸ್ ನ ನಂದಿನಿ ಕೇಂದ್ರದಿಂದ (Nandini Center) ಈ ಲೋಡ್ ಬಂದಿತ್ತು ಎನ್ನಲಾಗಿದೆ. 


ಇದನ್ನೂ ಓದಿ ಜೋರಾಗಿ ಹಾಡು ಹಾಕಿದ್ದಕ್ಕೆ ಟ್ರ್ಯಾಕ್ಟರ್ ಚಾಲಕನಿಗೆ ಹಿಗ್ಗಾಮುಗ್ಗಾ ಏಟು..!


ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ (Government school)ತಲುಪಬೇಕಿದ್ದ ಹಾಲಿನ ಪುಡಿಯನ್ನು ಸಾಗಿಸುತ್ತಿದ್ದ ಟ್ರಕ್ , ಶಾಲೆಗಳಿಗೆ ಹಾಲಿನ ಪುಡಿ ಡೆಲಿವರಿ ಮಾಡದೇ ರಾಯಚೂರು (Raichur) ನಗರದಲ್ಲೇ ಓಡಾಡುತ್ತಿತ್ತು. ಇದನ್ನೂ ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅಧಿಕಾರಿಗಳು ಹಾಲಿನಪುಡಿ ಮೂಟೆಗಳ ಸಮೇತ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಟ್ರಕ್ ಚಾಲಕನನ್ನು ಪಶ್ಚಿಮ ಠಾಣಾ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. 


ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಮತಾಂತರ ಕಾಯ್ದೆ ರದ್ದು: ಸಿದ್ದರಾಮಯ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.