ಬೆಂಗಳೂರು: ರಾಜ್ಯದಾದ್ಯಂತ ತಾಪಮಾನ ಗರಿಷ್ಟಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಬಿಸಿ ಗಾಳಿಯ ಹೊಡೆತಕ್ಕೆ ಪೌರಕಾರ್ಮಿಕರು ತತ್ತರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ ಪ್ರತಿನಿತ್ಯ ಅರ್ಧದಿನ ರಜೆ ನೀಡಬೇಕೆಂದು ಎಐಸಿಸಿಟಿಯು ಕಾರ್ಮಿಕ ಸಂಘಟನೆ  ಪತ್ರ ಬರೆದಿದೆ.


COMMERCIAL BREAK
SCROLL TO CONTINUE READING

ದಿನವಿಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಬೇಸಿಗೆಯ ಬೇಗೆ ತಟ್ಟುತ್ತಿದೆ.ಈ ಹಿನ್ನೆಲೆಯಲ್ಲಿ ಬೆಳಗ್ಗೆ 9-10 ಗಂಟೆಯಿಂದಲೇ ವಾತಾವರಣದಲ್ಲಿನ ತಾಪಮಾನ ಹೆಚ್ಚಾಗಿರುವ ಕಾರಣ ಕೆಲಸ ಮಾಡೋದೇ ಕ್ಲಿಷ್ಟಕರವಾಗುತ್ತಿದೆ, ಆದ್ದರಿಂದ ಬಿಸಿಗಾಳಿ ಕ್ರಿಯಾ ಯೋಜನೆ-2022 ನ್ನು ಸಮರ್ಪಕವಾಗಿ ಜಾರಿಗೋಳಿಸಬೇಕೆಂದು ಆಲ್​ ಇಂಡಿಯಾ ಸೆಂಟ್ರಲ್​ ಕೌನ್ಸಿಲ್ ಆಫ್​ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಆಗ್ರಹ ಮಾಡಿದೆ. 


ಇದನ್ನೂ ಓದಿ: 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್..! ಯಾರೆಲ್ಲಾ ಇದ್ದಾರೆ ಗೊತ್ತಾ?


ಈ ಕುರಿತು ಸರಕಾರಕ್ಕೆ ಪತ್ರವನ್ನು ಬರೆದಿರುವ AICCTU
• ಅರ್ಧ ದಿನ ರಜೆ ನೀಡಬೇಕು
• ಪೌರಕಾರ್ಮಿಕರಿಗೆ ಆಗಾಗ್ಗೆ ಕೆಲಸದಿಂದ ವಿರಾಮವನ್ನು ನೀಡಬೇಕು. 
• ಕುಡಿಯುವ ನೀರನ್ನು ಒದಗಿಸಬೇಕು. 
• ಓಆರ್‌ಎಸ್, ಮಜ್ಜಿಗೆಯನ್ನು ಪ್ರತಿನಿತ್ಯ ನೀಡಬೇಕು.


ಹಾಗೆಯೇ ರಾಜ್ಯ ವಿಪತ್ತು ನಿರ್ವಹಣೆ ಸಂಸ್ಥೆಯು ಪ್ರಕಟಿಸಿದ 'ರಾಜ್ಯ  ಕ್ರಿಯಾ ಯೋಜನೆ-2022 ಅನ್ನು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದು ಮನವಿ ಮಾಡಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.