ಬಿಜೆಪಿ ಮುಖಂಡ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ: ಸೋಮಣ್ಣಗೆ ಒಳೇಟು!? 

ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನಸ್ವಾಮಿ ( ಆಲೂರು ಮಲ್ಲು) ಕಣಕ್ಕಿಳಿಯುತ್ತಿದ್ದು ಸೋಮಣ್ಣಗೆ 8-12 ಸಾವಿರ ಮತಗಳು ಖೋತಾ ಆಗುವ ನೀರಿಕ್ಷೆ ಇದೆ. 

Written by - Zee Kannada News Desk | Last Updated : Apr 20, 2023, 09:12 AM IST
  • ಇನ್ನು, ಕೊಳ್ಳೇಗಾಲ ಜೆಡಿಎಸ್ ಅಭ್ಯರ್ಥಿ ಪುಟ್ಟಸ್ವಾಮಿ ಕೂಡ ಗಮನ ಸೆಳೆಯುತ್ತಿದ್ದು
  • ಇವರು ಯಾವ ಪಕ್ಷದ ಮತಬುಟ್ಟಿಗೆ ಕೈ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
  • ಒಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಣ್ಣ ಮತ ಬ್ಯಾಂಕ್ ಕಸಿದರೇ ಬಂಡಾಯ ಅಭ್ಯರ್ಥಿಗಳು ಮತಗಳನ್ನೇ ವಿಭಜಿಸಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಬಿಜೆಪಿ ಮುಖಂಡ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ: ಸೋಮಣ್ಣಗೆ ಒಳೇಟು!?  title=

ಚಾಮರಾಜನಗರ: ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನಸ್ವಾಮಿ ( ಆಲೂರು ಮಲ್ಲು) ಕಣಕ್ಕಿಳಿಯುತ್ತಿದ್ದು ಸೋಮಣ್ಣಗೆ 8-12 ಸಾವಿರ ಮತಗಳು ಖೋತಾ ಆಗುವ ನೀರಿಕ್ಷೆ ಇದೆ. 

ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಜೊತೆ ಗುರುತಿಸಿಕೊಂಡಿದ್ದ ಆಲೂರು ಮಲ್ಲು ಕಳೆದ ಬಾರಿ ಚಾಮರಾಜನಗರದ ಬಿಎಸ್ ಪಿ ಅಭ್ಯರ್ಥಿಯಾಗಿ 7 ಸಾವಿರ ಮತ  ಪಡೆದಿದ್ದರು. ಬಳಿಕ, ಮಹೇಶ್ ಹಿಂಬಾಲಿಸಿ ಬಿಜೆಪಿ ಸೇರಿದ್ದ ಮಲ್ಲು ಕಳೆದ 5-6 ತಿಂಗಳುಗಳಿಂದ ವಿಜಯೇಂದ್ರ ಆಪ್ತ ರುದ್ರೇಶ್ ಜೊತೆ ಗುರುತಿಸಿಕೊಂಡಿದ್ದರು.

ಸಚಿವ ಸೋಮಣ್ಣ ವಿರುದ್ಧ ರುದ್ರೇಶ್ ಸಾಲುಸಾಲು ಆರೋಪ ಮಾಡಿದ್ದ ವೇಳೆಯೂ ಮಲ್ಲು ಅವರು ರುದ್ರೇಶ್ ಜೊತೆಯಲ್ಲಿದ್ದರು. ಈಗ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್..! ಯಾರೆಲ್ಲಾ ಇದ್ದಾರೆ ಗೊತ್ತಾ?

ಲಿಂಗಾಯತ ಪ್ರಾಬಲ್ಯದ ಚಾಮರಾಜನಗರ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ವಿಭಜನೆಯಾದಷ್ಟು ಕಾಂಗ್ರೆಸ್ ಗೆ ವರವಾಗಲಿದ್ದು ಆಲೂರು ಮಲ್ಲು ಜೆಡಿಎಸ್ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಮೈನಸ್ ಕಾಂಗ್ರೆಸ್ ಗೆ ಪ್ಲಸ್ ಎಂಬ ಮಾತುಗಳು ಕೇಳಿಬಂದಿವೆ.

ರೈತ ಸಂಘದ ಡಾ.ಗುರುಪ್ರಸಾದ್ ಎಎಪಿ ಅಭ್ಯರ್ಥಿಯಾಗಿದ್ದು ಇವರು ಕೂಡ ಸಾಕಷ್ಟು ಮತಗಳನ್ನು ಕೀಳುವ ಭರವಸೆ ಮೂಡಿಸಿದ್ದು ಗುರುಪ್ರಸಾದ್ ಅವರು ಕೂಡ ಕೈ ಹಾಕುವುದು ಲಿಂಗಾಯತ ಮತಬುಟ್ಟಿಗೆ ಆದ್ದರಿಂದ ಸೋಮಣ್ಣಗೆ ಇವರು ಕೂಡ ಹೊಡೆತ ಕೊಡಬಹುದು.

ಸದ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು ಉಳಿದ ಅಭ್ಯರ್ಥಿಗಳು ಕನ್ನ ಹಾಕುವ ಮತಗಳು ಒಬ್ಬ ಅಭ್ಯರ್ಥಿಯ ಸೋಲು ಅಥವಾ ಗೆಲುವಿಗೆ ಕಾರಣವಾಗಬಲ್ಲದಾಗಿದೆ.

ಕೈಗೆ ಎಸ್ ಡಿಪಿಐ ಹೊಡೆತ: ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಎಸ್ ಡಿಪಿಐ ಸಂಘಟನೆ ಪ್ರಬಲವಾಗಿದ್ದು ಸದ್ಯ ಬಿಎಸ್ ಪಿಗೆ ಬೆಂಬಲ ಘೋಷಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದೆ. ಮುಸ್ಲಿಂ ಮತಗಳು ಕೂಡ ಕಾಂಗ್ರೆಸ್ ಗೆ ನಿರ್ಣಾಯಕವಾಗಿದ್ದು ಎಲ್ಲಾ ಮತಗಳು ಬಿಎಸ್ ಪಿ ಪಾಲಾದರೇ ಜೊತೆಗೆ ಎಸ್ ಸಿ ಬಲಗೈ ಮತಗಳು ಬಿಎಸ್ ಪಿ ಕಿತ್ತರೇ ನೇರ ಪರಿಣಾಮ ಕೈ ಪಾರ್ಟಿಗೆ ಬೀಳಲಿದ್ದು ಸದ್ಯ ಚಾಮರಾಜನಗರ ಕ್ಷೇತ್ರ ಕದನ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಪುಲಿಕೇಶಿನಗರದ ಕೊಳೆ ಪೊರಕೆಯಿಂದ ತೊಳೆಯಲಿದ್ದೇವೆ: ಅಭ್ಯರ್ಥಿ ಸುರೇಶ್ ರಾಥೋಡ್

ಬಿಜೆಪಿಗೆ ಬಂಡಾಯದ ಬಿಸಿ: ಇನ್ನು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ.ಸುನೀಲ್ ಕುಮಾರ್ ನಾಮಪತ್ರ ಸಲ್ಲಿಸಿರುವುದು ಹಾಲಿ ಬಿಜೆಪಿ ಶಾಸಕ ನಿರಂಜನಕುಮಾರ್ ಅವರಿಗೆ ಸಮಸ್ಯೆ ತಂದೊಟ್ಟಬಹುದು‌. ಭದ್ರ ಮತ ಬ್ಯಾಂಕ್ ಗಳ ಮೂಲಕ ನಿರಾಳರಾಗಿದ್ದ ಕೊಳ್ಳೇಗಾಲ ಹಾಲಿ ಬಿಜೆಪಿ ಶಾಸಕ ಮಹೇಶ್ ಅವರಿಗೆ ಹೊಡೆತ ಕೊಡಲು ಕಿನಕಹಳ್ಳಿ ರಾಚಯ್ಯ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಮತ ವಿಭಜನೆಗೆ ಕಾರಣವಾಗಲಿದೆ. 

ಇನ್ನು, ಕೊಳ್ಳೇಗಾಲ ಜೆಡಿಎಸ್ ಅಭ್ಯರ್ಥಿ ಪುಟ್ಟಸ್ವಾಮಿ ಕೂಡ ಗಮನ ಸೆಳೆಯುತ್ತಿದ್ದು ಇವರು ಯಾವ ಪಕ್ಷದ ಮತಬುಟ್ಟಿಗೆ ಕೈ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಒಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮಣ್ಣ ಮತ ಬ್ಯಾಂಕ್ ಕಸಿದರೇ ಬಂಡಾಯ ಅಭ್ಯರ್ಥಿಗಳು ಮತಗಳನ್ನೇ ವಿಭಜಿಸಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News