ಧಾರವಾಡ: ಇಡೀ ದೇಶವೇ 75ನೇ ವರ್ಷದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಸಂಭ್ರಮದಲ್ಲಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರದ ಧ್ವಜಾರೋಹಣದ ವೇಳೆ ಮಹಾ ಎಡವಟ್ಟಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣದ ವೇಳೆ ಎಡವಟ್ಟು ಆಗಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ.


COMMERCIAL BREAK
SCROLL TO CONTINUE READING

ಮೊದಲಿಗೆ ಮುಕ್ಕಲ್ಲ ಸರ್ಕಾರಿ ಅನುದಾನಿತ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿದೆ. ಶಾಲಾ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಿಂಗರೆಡ್ಡಿಯವರು ಉಲ್ಟಾ ಧ್ವಜಾರೋಹಣ ಮಾಡಿದ್ದಾರೆ. ಮೊದಲಿಗೆ ಉಲ್ಟಾ ಹಾರಿದ ಧ್ವಜವನ್ನು ಬಳಿಕ ಕೇಳಗಿಳಿಸಿ ಮತ್ತೆ ಸರಿಯಾಗಿ ಧ್ವಜಾರೋಹಣ ಮಾಡಲಾಗಿದೆ.


ಇದನ್ನೂ ಓದಿ: Breaking News: ಸ್ವಾತಂತ್ರ್ಯ ದಿನಾಚರಣೆಯಂದೇ ಬಿಜೆಪಿಯ 2 ಗುಂಪಿನ ಕಾರ್ಯಕರ್ತರ ನಡುವೆ ಮಾರಾಮಾರಿ?!


ಬಳಿಕ ನೆಹರು ಯುವಕ ಮಂಡಳದ ಮುಂದೆ ಧ್ವಜಾರೋಹಣ ವೇಳೆ ರಾಷ್ಟ್ರಧ್ವಜ ಕಳಚಿ ಬಿದ್ದಿದೆ. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿಯವರು ಧ್ವಜಾರೋಹಣ ಮಾಡುವ ವೇಳೆ ಈ ಘಟನೆ ನಡೆದಿದೆ. ರಾಷ್ಟ್ರಧ್ವಜಕ್ಕೆ ಅಪಮಾನವಾಗಿರುವುದಕ್ಕೆ ಗ್ರಾಮದ ಪ್ರಜ್ಞಾವಂತ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಎಡವಟ್ಟಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


ಧ್ವಜಾರೋಹಣದ ವೇಳೆ ಎಡವಟ್ಟು


ಇನ್ನು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿಯೂ ಇದೇ ರೀತಿ ಎಡವಟ್ಟಾಗಿದೆ. ಧ್ವಜಾರೋಹಣದ ವೇಳೆ ಕಂಬದಲ್ಲಿ ಧ್ವಜ ಹಾರಿಲ್ಲ. ಮೇಲಿಂದ ಮೇಲೆ ಹಗ್ಗ  ಜಗ್ಗಿದರೂ ಧ‍್ವಜ ಹಾರಿಲ್ಲ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟಿಲ್ ಧ್ವಜವನ್ನು ಕೆಳಗಡೆ ತಂದು ತೊಡಕು ತಪ್ಪಿಸಿ ಕಳಗಡೆಯಿಂದ ಮೇಲೆ ಹಾರಿಸಿದ್ದಾರೆ.


ಇದನ್ನೂ ಓದಿ: “ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಹೀಗಿರಲಿದೆ”… ಕೆಂಪುಕೋಟೆಯಲ್ಲಿ ಪ್ರಧಾನಿ ಮಾತು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.