ನವದೆಹಲಿ: ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವ(75th Independence Day)ದ ಸಂಭ್ರಮ ಮನೆಮಾಡಿದೆ. ಬ್ರಿಟಿಷರ ದಬ್ಬಾಳಿಕೆಯಿಂದ ನಲುಗಿಹೋಗಿದ್ದ ಭಾರತ ಅನೇಕರ ಮಹನೀಯರ ಹೋರಾಟದ ಫಲವಾಗಿ ಆಗಸ್ಟ್ 15ರ ಮಧ್ಯರಾತ್ರಿ ಸ್ವಾತಂತ್ರ್ಯಗೊಂಡಿತು. ಭಾರತದ ಸ್ವಾತಂತ್ರ್ಯಕ್ಕೆ ಅನೇಕ ಹೋರಾಟಗಾರರ ತ್ಯಾಗ-ಬಲಿದಾನ ಮಾಡಬೇಕಾಯಿತು. ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಸಂಭ್ರಮ ನಡೆಯುತ್ತಿದೆ. ಜನರಲ್ಲಿ ದೇಶಕಭಕ್ತಿಯನ್ನು ಮೂಡಿಸುವ ಅನೇಕ ಹಾಡುಗಳು ಬಂದಿದೆ. ಈ ಪೈಕಿ ಟಾಪ್ 5 ಕನ್ನಡದ ಹಾಡು(Kannada Patriotic Song)ಗಳು ಇಲ್ಲಿವೆ ನೋಡಿ…


COMMERCIAL BREAK
SCROLL TO CONTINUE READING

1) ವೀರಪ್ಪ ನಾಯಕ ಸಿನಿಮಾದ ‘ಭಾರತಾಂಬೆ ನಿನ್ನ ಜನ್ಮ ದಿನ’


ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ದೇಶ ಪ್ರೇಮಿಯ ಕಥೆಯನ್ನು ‘ವೀರಪ್ಪ ನಾಯ್ಕ(Veerappa Nayaka)’ ಚಿತ್ರದಲ್ಲಿ ನೋಡಬಹುದು. ಮಹಾತ್ಮ ಗಾಂಧೀಜಿ ತತ್ವವನ್ನು ಪಾಲಿಸುತ್ತಿದ್ದ ವೀರಪ್ಪ ನಾಯ್ಕನ ಕಥೆಯನ್ನು ಖ್ಯಾತ ನಿರ್ದೇಶಕ ಎಸ್.ನಾರಾಯಣ್ ತೆರೆಯ ಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಮೂಡಿಬಂದಿದ್ದ ಈ ಸಿನಿಮಾದ ‘ಭಾರತಾಂಬೆ ನಿನ್ನ ಜನ್ಮ ದಿನ’ ಗೀತೆ ಕೇಳಿದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯೋತ್ಸವದ ರೋಮಾಂಚನವನ್ನುಂಟು ಮಾಡುತ್ತದೆ.


 2) ಅಮೃತ ಘಳಿಗೆ ಸಿನಿಮಾದ ‘ಹಿಂದುಸ್ಥಾನವೂ ಎಂದು ಮರೆಯದ’


ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ 1984ರಲ್ಲಿ ಮೂಡಿಬಂದಿದ್ದ ‘ಅಮೃತ ಘಳಿಗೆ’ ಚಿತ್ರ ಕನ್ನಡ ಚಿತ್ರರಂಗದಲ್ಲಿಯೇ ಅದ್ಭುತ ಸಿನಿಮಾ. ಈ ಸಿನಿಮಾದ ‘ಹಿಂದುಸ್ಥಾನವೂ ಎಂದು ಮರೆಯದ(Hindustanavu Endu Mareyada)ಭಾರತ ರತ್ನವೂ ನೀನಾಗು’ ಗೀತೆಗೆ ವಿಜಯ್ ಭಾಸ್ಕರ್ ಅದ್ಬುತ ಸಂಗೀತ ನೀಡಿದ್ದರು. ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ದೇಶ ಭಕ್ತಿಯನ್ನು ತುಂಬುವ ಈ ಹಾಡು ಕೇಳಿದಾಗ ಪ್ರತಿಯೊಬ್ಬರಿಗೂ ದೇಶಭಕ್ತಿ ಉಕ್ಕಿ ಹರಿಯುತ್ತದೆ.


3) ಸೈನಿಕ ಚಿತ್ರದ ‘ಜೈ ಹಿಂದ್ ಜೈ ಹಿಂದ್’


ನಟ, ರಾಜಕಾರಣಿ ಸಿ.ಪಿ.ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ್ ಅಭಿನಯದ ಸೈನಿಕ ಸಿನಿಮಾದ ‘ಜೈ ಹಿಂದ್ ಜೈ ಹಿಂದ್’ ಹಾಡು ಕೇಳಿದ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಬಡಿದೇಳಿಸುತ್ತದೆ. ದಿವಂಗತ ಎಸ್.ಪಿಬಾಲಸುಬ್ರಹ್ಮಣ್ಯಂ(SP Balasubrahmanyam) ಕಂಠಸಿರಿಯಲ್ಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿತ್ತು.  


4) ವಂದೇ ಮಾತರಂ ಸಿನಿಮಾದ ‘ಹಿಂದೂಸ್ಥಾನ ಗೊತ್ತೇನೋ’


ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ವಂದೇ ಮಾತರಂ(Vande Mataram) ಸಿನಿಮಾದ ‘ಹಿಂದೂಸ್ಥಾನ ಗೊತ್ತೇನೋ’ ಹಾಡು, ಆಲಿಸುವ ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿದೆ.


 5) ಹಗಲುವೇಷ ಸಿನಿಮಾದ ‘ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ’


ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಹಗಲು ವೇಷ’(Hagalu Vesha) ಸಿನಿಮಾದ ‘ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ’ ಹಾಡು ಅದ್ಭುತವಾಗಿದೆ. ಈ ಹಾಡು ಕೇಳಿದರೆ ಮೈರೋಮಾಂಚನವಾಗುತ್ತದೆ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿ ಉಕ್ಕಿ ಹರಿಯುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.