ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆಯೇ ಭಾರತವು ಭಾನುವಾರ ತನ್ನ 75ನೇ ಸ್ವಾತಂತ್ರ್ಯ ದಿನ(75th Independence Day)ವನ್ನು ಆಚರಿಸಲಿದೆ. ಬ್ರಿಟಿಷರ ಆಳ್ವಿಕೆಯಿಂದ ಭಾರತ ಮುಕ್ತಿ ಪಡೆಯಲು ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಗೌರವಿಸಲು ಪ್ರತಿವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ಮಹತ್ವದ ದಿನದಂದು ದೇಶಾದ್ಯಂತ ಧ್ವಜಾರೋಹಣ, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಈಗಾಗಲೇ ದೇಶದಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆದರೆ ನಿಮಗಿದು ತಿಳಿದಿದೆಯೇ, ಇತರ ರಾಜ್ಯಗಳಂತೆ ಗೋವಾ(Goa) ಆಗಸ್ಟ್ 15(August 15th)ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ. ಏಕೆಂದರೆ ಭಾರತವು 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದಾಗ ಗೋವಾ ಇನ್ನೂ 450 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಆಳಿದ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಪೋರ್ಚುಗೀಸರು ಭಾರತದ ಮೊದಲ ವಸಾಹತುಗಾರರಾಗಿದ್ದರು ಮತ್ತು ಅವರೇ ಕೊನೆಯದಾಗಿ ನಮ್ಮ ದೇಶವನ್ನು ಬಿಟ್ಟುಹೋದವರು.
ಇದನ್ನೂ ಓದಿ: Aadhar Card ಕಳೆದುಹೋಗಿದೆಯೇ? PVC ಆಧಾರ್ ಪಡೆಯಲು ಈ ಹಂತ-ಹಂತಗಳನ್ನ ಅನುಸರಿಸಿ!
1510ರಲ್ಲಿ ಪೋರ್ಚುಗೀಸ(Portuguese)ರು ಗೋವಾವನ್ನು ಆಕ್ರಮಿಸಿದ್ದರು. ನಂತರ ರಾಜ್ಯವು ಅನೇಕ ಬದಲಾವಣೆಗಳಿಗೆ ಒಳಗಾಯಿತು. ಇಲ್ಲಿನ ಜನರು ಪೋರ್ಚುಗೀಸರ ಹಿಂಸೆಗೆ ತುತ್ತಾಗಿದ್ದರು. ಆದರೆ 1946ರಲ್ಲಿ ಗೋವಾ ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆಯ ಅಂತ್ಯದ ಆರಂಭವನ್ನು ಕಾಣಲಾರಂಭಿಸಿತು. ಜೂನ್ 1946ರಲ್ಲಿ ರಾಮ್ ಮನೋಹರ್ ಲೋಹಿಯಾ(Ram Manohar Lohia)ಗೋವಾಕ್ಕೆ ಭೇಟಿ ನೀಡಿದ್ದರು. ರಾಜ್ಯದ ಮತ್ತು ಜನರ ಕಷ್ಟಗಳನ್ನು ತಿಳಿದುಕೊಂಡ ನಂತರ ಅವರು ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿ ಶೀಘ್ರವೇ ಗೋವಾದಲ್ಲಿ ಯುವ ನಾಯಕರು ಮತ್ತು ಹೋರಾಟಗಾರರನ್ನು ಸೆಳೆದು ಪ್ರಾಮುಖ್ಯತೆ ಗಳಿಸಿತು. ಪ್ರಭಾಕರ್ ವಿಠ್ಠಲ್ ಸಿನಾರಿ ಮತ್ತು ಅವರ ಆಪ್ತರು ಸೇರಿಕೊಂಡು ಆಜಾದ್ ಗೋಮಂತಕ್ ದಳವನ್ನು (AGD) ರೂಪಿಸಿದರು. ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಲು ಈ ಕ್ರಾಂತಿಕಾರಿ ಸಂಘಟನೆ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ (ಆರ್‌ಎಸ್‌ಎಸ್) ಕೈಜೋಡಿಸಿತು.
ಸ್ವಲ್ಪ ಸಮಯದ ಬಳಿಕ ಎಜಿಡಿ ಸಂಘಟನೆ ಇತರ ರಾಜ್ಯಗಳ ರಾಷ್ಟ್ರೀಯವಾದಿಗಳ ಬೆಂಬಲದೊಂದಿಗೆ ಯುನೈಟೆಡ್ ಫ್ರಂಟ್ ಆಫ್ ಲಿಬರೇಶನ್ ಎಂಬ ದೊಡ್ಡ ಒಕ್ಕೂಟವಾಯಿತು. ಇದು ಪೋರ್ಚುಗೀಸರ ಮೇಲೆ ಅನೇಕ ದಾಳಿಗಳನ್ನು ನಡೆಸಿತು. ಮೊದಲು ನರೋಲಿ, ದಾದ್ರಾ ಮತ್ತು ನಗರ್ ಹವೇಲಿಯನ್ನು ಪೋರ್ಚುಗೀಸ್ ವಸಾಹತುಗಳಿಂದ ಮುಕ್ತಗೊಳಿಸಲು ಬಳಿಕ ಗೋವಾದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟ ನಡೆಸಿತು.
ಇದನ್ನೂ ಓದಿ: Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ?
ಪೋರ್ಚುಗೀಸರ ವಿರುದ್ಧದ ಸ್ವಾತಂತ್ರ್ಯ ಹೋರಾಟ(Freedom Fight)ವು 1946 ರಲ್ಲಿ ಆರಂಭವಾಗಿ 1961 ರಲ್ಲಿ ಕೊನೆಗೊಂಡಿತು. ಡಿಸೆಂಬರ್ 19 ರಂದು ಪೋರ್ಚುಗೀಸ್ ಆಡಳಿತದಿಂದ ಗೋವಾ ಸ್ವತಂತ್ರವಾಯಿತು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್ 19ರಂದು ಗೋವಾ ವಿಮೋಚನೆ ದಿನವನ್ನು ಆಚರಿಸಲಾಗುತ್ತದೆ. ಗೋವಾ ವಿಮೋಚನೆಯು ಇತಿಹಾಸದಲ್ಲಿಯೇ ಅತೀ ಮುಖ್ಯವಾದ ಘಟನೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ