ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಸಮರ್ಪಣೆ!
ಕುಂದಾನಗರಿಯ ಕಿಲ್ಲಾ ಕೆರೆ ದಂಡೆಯಲ್ಲಿ ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭ ಸಮರ್ಪಣೆ ಮಾಡಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಸಮರ್ಪಣೆ ಮಾಡಲಾಯಿತು.
ಬೆಳಗಾವಿ: ಕುಂದಾನಗರಿಯ ಕಿಲ್ಲಾ ಕೆರೆ ದಂಡೆಯಲ್ಲಿ ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭ ಸಮರ್ಪಣೆ ಮಾಡಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಸಮರ್ಪಣೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಲಿಫ್ಟಿಂಗ್ ಮಷೀನ್ ಬಟನ್ ಒತ್ತುವ ಮೂಲಕ 110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶಕ್ಕೆ ಸಮರ್ಪಣೆ ಮಾಡಿದರು.
ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಜಿಯಾ ಉಲ್ಲಾ, ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ್, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಮತ್ತಿತರ ಅಧಿಕಾರಿಗಳು ಮತ್ತು ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು.
110ಮೀಟರ್ ಎತ್ತರದ ಧ್ವಜ ಸ್ಥಂಬದಲ್ಲಿ, 9,600 ಚದರ ಅಡಿ ವಿಸ್ತೀರ್ಣ ಹೊಂದಿರುವ, 500 ಕೆ.ಜಿ.ತೂಗುವ ಈ ರಾಷ್ಟ್ರಧ್ವಜವನ್ನು 1,62,50,000 ಲಕ್ಷದಲ್ಲಿ ನಿರ್ಮಾಣವಾಗಿದೆ.