ಬೆಂಗಳೂರು : ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಇಂದಿರಾ ಕ್ಲಿನಿಕ್ ಇಂದು ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಲೋಕಾರ್ಪಣೆಗೊಂಡಿತು. 


COMMERCIAL BREAK
SCROLL TO CONTINUE READING

ಗೃಹ ಸಚಿವ ವಿ.ರಾಮಲಿಂಗಾರೆಡ್ಡಿ ಇಂದಿರಾ ಟ್ರಾನ್ಸಿಟ್ ಕ್ಲಿನಿಕ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಸೇರಿದಂತೆ ಇತರ ಅಧಿಕಾರಿಗಳು ಭಾಗಿಯಾಗಿದ್ದರು. 


ಮೆಜೆಸ್ಟಿಕ್ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಇಂದಿರಾ ಟ್ರಾನ್ಸಿಟ್ ಕ್ಲಿನಿಕ್ ಆರಂಭವಾಗಿದ್ದು,  ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಈ ಕ್ಲಿನಿಕ್ ತೆರೆಯಲಾಗಿದೆ. ವಾರದ ಏಳು ದಿನವೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕ್ಲಿನಿಕ್ ಕಾರ್ಯನಿವಹಿಸಲಿದ್ದು, ಓರ್ವ ವೈದ್ಯರು, ಓರ್ವ ನರ್ಸ್ ಮತ್ತು ಇಬ್ಬರು ಫಾರ್ಮಾಸಿಸ್ತ್ಗಳು ಇರಲಿದ್ದಾರೆ. ಔಷಧಿ, ಆಕ್ಸಿಜನ್ ಮತ್ತು ವ್ಹೀಲ್ ಛೇರ್ ವ್ಯವಸ್ಥೆಯನ್ನು ಈ ಕ್ಲಿನಿಕ್ ಹೊಂದಿದೆ. 


ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್, ಇಂದಿರಾ ಪಾಸ್ ಗಳೊಂದಿಗೆ ಇಂದು ಇಂದಿರಾ ಕ್ಲಿನಿಕ್ ಕೂಡ ಸೇರ್ಪಡೆಗೊಂಡಿದೆ.