ಬೆಂಗಳೂರು : 2016ರಲ್ಲಿ ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್  ಹುದ್ದೆಗಾಗಿ  150 ಪೋಸ್ಟ್‌ಗಳಿಗೆ    ಕಾಲ್ ಫಾರ್ ಮಾಡಲಾಗಿತ್ತು.ಸಾರಿಗೆ ಇಲಾಖೆಯ ಹುದ್ದೆಗಳಿಗಾಗಿ    ಕೆಪಿಎಸ್‌ಸಿ   ಪರೀಕ್ಷೆ ನಡೆಸಿತ್ತು.   ಪರೀಕ್ಷೆಯ ನಂತರ ದಾಖಲೆಗಳನ್ನು  ಪರಿಶೀ ಲಿಸಲಾಗಿತ್ತು. 2016ರಲ್ಲಿ ನಡೆದ ಪರೀಕ್ಷೆಗೆ 2019ರಲ್ಲಿ ಸಂಭನೀಯ ಪಟ್ಟಿ ಬಿಡುಗಡೆ ಮಾಡಿತ್ತು.  ಈ ವೇಳೆ  ಹುದ್ದೆಗೆ ಒಂದಿಷ್ಟು ಷರತ್ತು ನೀಡಿದ್ದರು .ಯಾವುದಾದ್ರೂ ಸರ್ವೀಸ್ ಸ್ಟೇಷನ್ ಅಥವಾ ಗ್ಯಾರೇಜ್‌ನಲ್ಲಿ ಕೆಲಸ ಮಾಡಿರಬೇಕು,ಕನಿಷ್ಟ 1 ವರ್ಷವಾದ್ರೂ ಸೇವಾನುಭವ ಪಡೆದಿರಬೇಕು ಎಂಬ  ನಿಯಮ ಅನ್ವಯಿಸಲಾಗಿತ್ತು.


COMMERCIAL BREAK
SCROLL TO CONTINUE READING

ಆದರೆ ನಕಲಿ  ಅಭ್ಯರ್ಥಿಗಳು   ಸೇವಾನುಭವ ಇರೋದಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ದರು.ನಕಲಿ ಸ್ಯಾಲರಿ ಸರ್ಟಿಫಿಕೇಟ್, ನಕಲಿ ಹಾಜರಾತಿ, ನಕಲಿ ಗ್ಯಾರೇಜ್ ಸರ್ಟಿಫಿಕೇಟ್ ,ಅದೇ ಸುಳ್ಳು ದಾಖಲೆಗಳನ್ನು ನೀಡಿ ಸಾರಿಗೆ ಇಲಾಖೆಯನ್ನು ದಿಕ್ಕು ತಪ್ಪಿಸಲಾಗಿತ್ತು.ಕೆಲ ಅಭ್ಯರ್ಥಿಗಳು ಕೇವಲ LMVಯಲ್ಲಿ ಮಾತ್ರ ಪರಿಣಿತ ಹೊಂದಿದ್ದರು.ಆದ್ರೆ ದಾಖಲೆಯಲ್ಲಿ HGV & HPV ಯಲ್ಲೂ ಪರಿಣಿತರೆಂದು ಸುಳ್ಳು ದಾಖಲೆ ಸೃಷ್ಠಿ ಮಾಡಿದ್ದನ್ನು ಮನಗಂಡು ನೊಂದ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.  


ಇದನ್ನೂ ಓದಿ: ಕೋಟೆನಾಡಿಗೆ ಅದ್ಧೂರಿ ಎಂಟ್ರಿ ಕೊಟ್ಟ ಜನಾರ್ದನ್ ರೆಡ್ಡಿ..!


ಕೋರ್ಟ್ ಆದೇಶನದ ನಂತರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ
2021ರಲ್ಲಿ ಕೆಪಿಎಸ್‌ಸಿಯಿಂದ 141 ಜನರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಗಿತ್ತು.ಆ ಪಟ್ಟಿಯಲ್ಲೂ ಸುಳ್ಳು ದಾಖಲೆ ನೀಡಿದ್ದವರ ಹೆಸರುಗಳು  ಮುಂದುವರೆದಿತ್ತು .ನೊಂದ ಅಭ್ಯರ್ಥಿಗಳು ಮತ್ತೆ   ಕೋರ್ಟ್‌ ಮುಂದೆ ಹಲವು ಬೇಡಿಕೆ ಇಟ್ಟಿದ್ದಾರೆ. 


ಇದನ್ನೂ ಓದಿ:26 ಸಾವಿರ ಕೋಟಿ ರೈತರ ಸಾಲವನ್ನ ಮನ್ನಾ ಮಾಡಿದ ಕೀರ್ತಿ ಕುಮಾರಣ್ಣನಿಗೆ....


-ನಕಲಿ ದಾಖಲೆ ನೀಡಿರೋರಿಗೆ ಯಾವುದೇ ಕಾರಣಕ್ಕೂ ಕೆಲಸ ಸಿಗಬಾರದು
-ಈ ಪಟ್ಟಿಯನ್ನೂ ಹಿಂಪಡೆಯಬೇಕು, ಇಲ್ಲವಾದ್ರೆ ಪರಿಶೀಲನೆ ಸರಿಯಾಗಿ ಮಾಡಬೇಕು


-ನಕಲಿ ಪ್ರಮಾಣ ಪತ್ರ ಹಾಗು ಪರಿಶೀಲನೆ ಮಾಡಿಬೇಕಿರೋ ಸಿಬ್ಬಂದಿ ವಿರುದ್ಧ  ಕ್ರಮ ಕೈಗೊಳ್ಳಬೇಕು. 


ನೇಮಕಾತಿಯಲ್ಲಿ  ಬರೊಬ್ಬರಿ 20  ಆಕ್ರಮ ಪ್ರಕರಣಗಳನ್ನು  ಬಿಚ್ಚಿಟ್ಟಿದ್ದಾರೆ. ಒಂದೊಂದು ಪೋಸ್ಟ್ ಗೂ ಒಂದೊಂದು ಕೋಟಿ ರೂಪಾಯಿ  ಡೀಲ್  ನಡೆಸಲಾಗಿತ್ತು ಸಾರಿಗೆ ಇಲಾಖೆಯ ಅಧಿಕಾರಿಗಳೂ ಇದಕ್ಕೆ ಸಾಥ್ ನೀಡ್ದಿದ್ದರು ಎಂಬ  ಆರೋಪ  ಕೇಳಿಬರುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.