Cyber Threat For Guarantee Schemes: ರಾಜ್ಯ ಸರ್ಕಾರ ತನ್ನ ಗ್ಯಾರಂಟಿಗಳನ್ನ ಜಾರಿ ಮಾಡೋದಾಗಿ ಘೋಷಣೆಯೇನೋ ಮಾಡ್ತು. ಆದ್ರೆ ಇದೀಗ ಗ್ಯಾರಂಟಿಗಳಿಗೆ ಆನ್‌ಲೈನ್‌ ಅರ್ಜಿ ಹಾಕೋ ವಿಚಾರ ತಲೆನೋವು ತಂದಿಟ್ಟಿದೆ. ಜನರು ಅರ್ಜಿ ಹಾಕೋದು ಯಾವಾಗ ಅಂತಾ ಕಾದು ಕುಳಿತಿದ್ರೆ, ಅತ್ತ ಸರ್ಕಾರದ ಗ್ಯಾರಂಟಿ ಜಾರಿ ಮಾಡಲು ಹೋದ್ರೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ನೂರಾರು ಅವಾಂತರಗಳು ಸೃಷ್ಟಿಯಾಗೋ ಸಾಧ್ಯತೆಗಳು ಎದ್ದುಕಾಣ್ತಿದೆ. ಪದೇ ಪದೇ ಅರ್ಜಿ ಸಲ್ಲಿಸೋ ದಿನಾಂಕ ಮುಂದೂಡ್ತಿರೋದರಿಂದ ಹಿಂದೆ ಇರೋ ಕಾರಣಗಳೇನು ಅನ್ನೋದರ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ... 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರ ಚುನಾವಣೆ ವೇಳೆ ಘೋಷಣೆ ಮಾಡಿದ್ದಂತೆ ಗ್ಯಾರಂಟಿಗಳನ್ನ ಜಾರಿ ಮಾಡಲು ಸಜ್ಜಾಗಿದೆ. ಈಗಾಗಲೇ ಸರ್ಕಾರದ ಮೊದಲ ಗ್ಯಾರಂಟಿಯಾದ ಶಕ್ತಿಯೋಜನೆ ಜಾರಿಯಾಗಿದ್ದು, ಮಹಿಳೆಯರಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಆದ್ರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಮಾತ್ರ ಪದೇ ಪದೇ ಮುಂದೂಡ್ತಿರೋದು ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಸರ್ಕಾರ ಆನ್‌ಲೈನ್‌ ಅರ್ಜಿ ಸ್ವೀಕಾರಕ್ಕೆ ಟೆಕ್ನಿಕಲ್‌ ಆಗಿ ತಯಾರಾಗಿಲ್ವಾ ಅನ್ನೋ ಸಂಶಯವನ್ನ ಕೂಡ ಹುಟ್ಟುಹಾಕ್ತಿದೆ.


ಇದನ್ನೂ ಓದಿ- ಶಕ್ತಿ ಯೋಜನೆ ಪರಿಣಾಮ: ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ, ಹಲವೆಡೆ ಪ್ರತಿಭಟನೆ


ಗೃಹಲಕ್ಷ್ಮೀ ಯೋಜನೆಗೆ ಆನ್‌ಲೈನ್‌ ಅರ್ಜಿ ಶುರುವಾಗುತ್ತೆ ಎಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಭೆ ಬಳಿಕ ಇನ್ನೂ ಮೂರ್ನಾಲ್ಕು ದಿನ ತಡವಾಗಬಹುದು ಎಂದಿರೋದು ಸರ್ಕಾರ ಗ್ಯಾರಂಟಿಗಳ ಜಾರಿಗೆ ತಾಂತ್ರಿಕವಾಗಿ ತಯಾರಾಗಿಲ್ವಾ ಅನ್ನೋ ಅನುಮಾನ ಮೂಡಿಸ್ತಿದೆ. ಇನ್ನು ಆನ್‌ಲೈನ್‌ ಅರ್ಜಿ ಸ್ವೀಕರಿಸಬೇಕಿದ್ದ ಸೇವಾಸಿಂಧು ಪೋರ್ಟಲ್‌ ಕಾರ್ಯಾರಂಭಕ್ಕೆ ಗ್ರೀನ್‌ಸಿಗ್ನಲ್‌ ಸಿಗದಿರೋದು ಜನರನ್ನ ಕಂಗಾಲಾಗಿಸಿದೆ.
ಇತ್ತ ಸರ್ಕಾರ ಏಕಾಏಕಿ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿದ್ರೆ ಹಲವು ಸಮಸ್ಯೆಗಳು ಎದುರಾಗೋ ಸಾಧ್ಯತೆ ಕೂಡ ಹೆಚ್ಚಿದೆ. 


ಇದನ್ನೂ ಓದಿ- Gruha Jyoti ಯೋಜನೆ ಬಗ್ಗೆ ನಿಮಗೂ ಈ ಗೊಂದಲಗಳಿವೆಯೇ? ಇಲ್ಲಿದೆ ಬೆಸ್ಕಾಂ ಸ್ಪಷ್ಟನೆ


ಗ್ಯಾರಂಟಿ ಯೋಜನೆಗಳಿಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಏನೆಲ್ಲಾ ತೊಂದರೆಗಳು ಎದುರಾಗಬಹುದು?
>> ಅರ್ಜಿ ಸ್ವೀಕಾರದ ವೇಳೆ ಸರ್ವರ್‌ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. 
>> ಜೊತೆಗೆ ಸೈಬರ್‌ ಅಪರಾಧಗಳು ಕೂಡ ಹೆಚ್ಚಾಗೋ ಸಾಧ್ಯತೆ ಇದೆ ಅಂತಾ ಸೈಬರ್‌ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 
>> ಸರ್ಕಾರ ಸೂಚಿಸಿರೋ ಸರ್ವರ್‌ ಹೋಲುವಂತೆಯೇ ನಕಲಿ ವೆಬ್‌ ಮೂಲಕ ಸೈಬರ್‌ ವಂಚಕರು ಸಾರ್ವಜನಿಕರ ಡೇಟಾ ಕದಿಯುವ ಸಾಧ್ಯತೆಗಳು ಕೂಡ ಇದೆ ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. 


ಇನ್ನು ಸರ್ಕಾರ ಸದ್ಯ ಆನ್‌ಲೈನ್‌ ಅರ್ಜಿ ಸ್ವೀಕಾರಕ್ಕೆ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ ಅನ್ನೋದನ್ನ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಅತ್ತ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸೋ ದಿನಾಂಕವನ್ನ ಕೂಡ ಪದೇ ಪದೇ ಮುಂದೂಡ್ತಿರೋದು ಸರ್ಕಾರ ಇನ್ನೂ ತಾಂತ್ರಿಕವಾಗಿ ಸಜ್ಜಾಗಿಲ್ವಾ ಅನ್ನೋ ಸಂಶಯ ಮೂಡಿಸ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.