Gruha Jyoti Yojane: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯು ಜನರಿಗೆ ಪ್ರತಿ ತಿಂಗಳು ಉಚಿತ ವಿದ್ಯುತ್ ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದರೆ, ಗೃಹಜ್ಯೋತಿ ಯೋಜನೆ ಇದರ ಷರತ್ತುಗಳಿಂದಾಗಿ ಬಹಳಷ್ಟು ಗೊಂದಲಗಳಿಗೆ ಗುರಿಯಾಗಿದೆ. ಸಾರ್ವಜನಿಕರಲ್ಲಿ ಈ ಗೊಂದಲಗಳನ್ನು ಹೋಗಲಾಡಿಸಾಲು ಬೆಸ್ಕಾಂ ಸ್ಪಷ್ಟೀಕರಣವನ್ನೂ ನೀಡಿದೆ.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ನಿಮಗೂ ಈ ಗೊಂದಲಗಳಿದ್ದರೆ ಇಲ್ಲಿದೆ ಸ್ಪಷ್ಟನೆ:
ಪ್ರಶ್ನೆ 1:
ಗೃಹಜ್ಯೋತಿ ಯೋಜನೆಯ ಪ್ರಯೋಜನ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಲಭ್ಯವಾಗಲಿದೆಯೇ?
ಉತ್ತರ:
ಹೌದು, ನೀವು ಬಾಡಿಗೆದಾರರಾಗಿದ್ದರೂ ಸಹ ನೀವು ಈ ಯೋಜನೆಯ ಪ್ರಯೋಜನವನ್ನು ಪಡೆಯ್ಬಹುದು. ಇದಕ್ಕಾಗಿ ನೀವು ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಿಂಕ್ ಮಾಡಿ ನೋಂದಾಯಿಸಬೇಕು.
ಇದನ್ನೂ ಓದಿ- ಜೂನ್ 15 ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ
ಪ್ರಶ್ನೆ 2: ಗೃಹ ಬಳಕೆದಾರರು/ಫಲಾನುಭವಿಗಳು ಯಾವುದಾದರೂ ಮಾಹೆಗಳಲ್ಲಿ ಮಾತ್ರ 200 ಯೂನಿಟ್ ಮಿತಿ ದಾಟಿದರೂ ಸದರಿ ಯೋಜನೆಯಲ್ಲಿ ಮುಂದುವರಿಯುವವರೆ...?
ಉತ್ತರ:
200 ಯೂನಿಟ್ ಗಳ ಬಳಕೆಯ ಮಿತಿಯನ್ನು ಯಾವುದಾದರೂ ಮಾಹೆಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಿ, ಯೋಜನೆಯಲ್ಲಿ ಮುಂದುವರಿಯಬಹುದು.
ಪ್ರಶ್ನೆ 3:
ಗೃಹಜ್ಯೋತಿ ಯೋಜನೆ ಬಗ್ಗೆ ಸರ್ಕಾರದ ಆದೇಶದ ಬಳಿಕ ಗೃಹಬಳಕೆಗಾಗಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆದಾರರಿಗೆ ಈ ಯೋಜನೆಯು ಆನ್ವಯಿಸುವುದೇ?
ಉತ್ತರ:
ಗೃಹ ಬಳಕೆಗಾಗಿ ಹೊಸ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇರುವುದಿಲ್ಲ. ಹಾಗಾಗಿ, ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆ ಮಾಸಿಕ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗುವುದು.
ಪ್ರಶ್ನೆ 4:
2022-23 ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಬಳಕೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಗೃಹಬಳಕೆದಾರರ ಸರಾಸರಿ ಮನೆಗಳ ಅವಧಿಯ ಸರಾಸರಿ ವಿಧಾನ ಹೇಗೆ..? (Shifted Houses)
ಉತ್ತರ:
ಗುಹ ಬಳಕೆ ಇತಿಹಾಸ ಇಲ್ಲದೇ ಇರುವುದರಿಂದ ರಾಜ್ಯದ ಗೃಹಬಳಕೆದಾರರ ಸರಾಸರಿ ಬಳಕೆಯು (53 ಯೂನಿಟ್ ಗಳನ್ನೇ ನಿರ್ಧರಿಸಿ) ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗುವುದು.
ಇದನ್ನೂ ಓದಿ- ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ
ಪ್ರಶ್ನೆ 5:
Multi Stored Apartment ಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೇ..?
ಉತ್ತರ:
ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ