ಬೆಂಗಳೂರು : ಆರ್ಥಿಕ ಸಂಕಷ್ಟ ಮಧ್ಯೆ ತಮ್ಮ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಒಟ್ಟು 2,71,977 ರೂ. ಮೊತ್ತದ ಬಜೆಟ್ ಮಂಡಿಸಿದ್ದಾರೆ. ಪ್ರತಿ ಬಾರಿಯಂತೆ ವಿಪಕ್ಷಗಳು ಮಂಡಿಸಿದ ಆಯವ್ಯಯ ಬಗ್ಗೆ ಟೀಕೆ ಮಾಡಿದ್ದು, ಆಡಳಿತ ಪಕ್ಷ ಅಭಿವೃದ್ಧಿ ಪೂರಕ ಬಜೆಟ್ ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ 14,699 ಕೋಟಿ ರೂ.ನ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಚುನಾವಣೆ ಬಜೆಟ್ ಎಂದು ಕರೆಯಲ್ಪಟ್ಟ ಈ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಕೆಲ ಜನಪ್ರಿಯ ಯೋಜನೆಗಳನ್ನ ನೋಡುವ ಬೆಟ್ಟದಷ್ಟು ನಿರೀಕ್ಷೆಯಲ್ಲಿ ಜನಸಾಮಾನ್ಯರು ಇದ್ದರು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.


ಇದನ್ನೂ ಓದಿ : Karnataka Budget 2022: ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಿದ ಸಿಎಂ


ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಗೆ(Haveri) ಭರಪೂರ ಕೊಡುಗೆ ನೀಡುದ್ದು, ಹಿರೇಕೆರೂರಿನಲ್ಲಿ ಗೋವಿನಜೋಳ ಸಂಶೋಧನಾ ಕೇಂದ್ರ ಸ್ಥಾಪನೆ, ಹಾವೇರಿಯಲ್ಲಿ  ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ, ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು. ಹಾವೇರಿ, ಶಿಗ್ಗಾಂವಿ ಆಸ್ಪತ್ರೆಗಳು ಮೇಲ್ದರ್ಜೆಗೆ, ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಹಾವೇರಿಯಲ್ಲಿ ಸಂಚಾರಿ ಕ್ಲಿನಿಕ್ ಸ್ಥಾಪನೆ, ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ, ರಾಣೇಬೆನ್ನೂರಿನಲ್ಲಿ ಜವಳಿ ಪಾರ್ಕ್ 20 ಸ್ಥಾಪನೆ ಮತ್ತು ಹಾನಗಲ್ ತಾಲ್ಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಈ ಹಿಂದೆಯೇ ತಿಳಿಸಿದ್ದು, ಬಜೆಟ್ ಭಾಷಣದಲ್ಲಿ ಪುನರಾವರ್ತನೆ ಮಾಡಿದ್ದಾರೆ.


ಬಜೆಟ್ 2022-23 ಮುಖ್ಯಾಂಶಗಳು ಏನಿವೇ?


ಗಾತ್ರ- 2,65,720, ಕೋಟಿ ರೂ.


ಒಟ್ಟು ಸ್ವೀಕೃತಿ- 2,61,977 ರೂ.


ರಾಜಸ್ವ ಸ್ವೀಕೃತಿ- 1,89,888 ರೂ.


ಬಂಡವಾಳ ಸ್ವೀಕೃತಿ- 72,089 ರೂ.


ಸಾಲ- 72,000 ರೂ.


ಒಟ್ಟು ವೆಚ್ಚ- 2,65,720 ರೂ.


ರಾಜಸ್ವ ವೆಚ್ಚ- 2,04,587 ರೂ.


ಬಂಡವಾಳ ವೆಚ್ಚ- 46,955 ರೂ.


ಸಾಲ ಮರುಪಾವತಿ- 14,179 ರೂ.


ಆರ್ಥಿಕ ಅಭಿವೃದ್ಧಿ ಗೆ ಉತ್ತೇಜನ 55,657 ರೂ.


ಬೆಂಗಳೂರು ಸಮಗ್ರ ಅಭಿವೃದ್ಧಿ 8,409 ಕೋಟಿ ರೂ.


ಶಿಕ್ಷಣ - 31980 ಕೋಟಿ ರೂ.


ಜಲಸಂಪನ್ಮೂಲ - 20601 ಕೋಟಿ ರೂ.


ಗ್ರಾಮೀಣಾಭಿವೃದ್ಧಿ - 17325 ಕೋಟಿ ರೂ.


ನಗರಾಭಿವೃದ್ಧಿ - 16076 ಕೋಟಿ ರೂ


ಕಂದಾಯ - 14388 ಕೋಟಿ ರೂ.


ಆರೋಗ್ಯ - 13982 ಕೋಟಿ ರೂ


ಇಂಧನ - 12655 ಕೋಟಿ ರೂ


ಒಳಾಡಳಿತ  ಮತ್ತು ಸಾರಿಗೆ - 11272 ಕೋಟಿ ರೂ.


ಲೋಕೋಪಯೋಗಿ - 10447 ಕೋಟಿ ರೂ.


ಸಮಾಜಕಲ್ಯಾಣ - 9389 ಕೋಟಿ ರೂ.


ಕೃಷಿ ಮತ್ತು ತೋಟಗಾರಿಕೆ - 8457 ಕೋಟಿ ರೂ


ಮಹಿಳಾ ಮತ್ತು ಮಕ್ಕಳ ಕಲ್ಯಾಣ - 4712 ಕೋಟಿ ರೂ


ವಸತಿ - 3594 ಕೋಟಿ ರೂ


ಆಹಾರ ಮತ್ತು ನಾಗರಿಕ ಪೂರೈಕೆ - 2988 ಕೋಟಿ ರೂ.


ಇತರೆ - 93676 ಕೋಟಿ ರೂ.


ಇದನ್ನೂ ಓದಿ : Karnataka Budget 2022: ಕೃಷಿ ಕ್ಷೇತ್ರಕ್ಕೆ ಬೊಮ್ಮಾಯಿ ಬಜೆಟ್ 2022ರಲ್ಲಿ ಏನಿದೆ?


ಈ ಬಾರಿನೂ ರಾಜಸ್ವ ಕೊರತೆಯ ಬಜೆಟ್:


ತೆರಿಗೆ ಸಂಗ್ರಹ(Tax Collection) ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇತ್ತ ಬದ್ಧ ವೆಚ್ಚನ್ನೊಳಗೊಂಡ ರಾಜಸ್ವ ವೆಚ್ಚ ಹೆಚ್ಚಳವಾಗಿದೆ. 2,04,587 ಕೋಟಿ ರೂ‌. ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದೆ. ರಾಜಸ್ವ ಸಂಗ್ರಹದ ಅಂದಾಜು 1,89,888 ಕೋಟಿ ರೂ. ಆಗಿದೆ. ಹೀಗಾಗಿ ಈ ಬಾರಿನೂ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ.14,699 ಕೋಟಿ ರೂ.ನ ರಾಜಸ್ವ ಕೊರತೆಯ ಬಜೆಟ್ ಮಂಡಿಸಲಾಗಿದೆ. ಇತ್ತ 61,564 ಕೋಟಿ ರೂ.ನ ವಿತ್ತೀಯ ಕೊರತೆ ಎದುರಾಗಿದೆ. 2022-23ಸಾಲಿನಲ್ಲಿ 2,61,977 ಕೋಟಿ ರೂ. ಒಟ್ಟು ಜಮೆಯ ಅಂದಾಜು ಮಾಡಲಾಗಿದೆ. ಬಂಡವಾಳ ವೆಚ್ಚ 43,572 ಕೋಟಿ ರೂ. ಆಗಿದ್ದು, ಸಾಲ ಮರುಪಾವತಿ ಮೊತ್ತ 14,179 ಕೋಟಿ ರೂ. ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.