Karnataka Budget 2022: ಕೃಷಿ ಕ್ಷೇತ್ರಕ್ಕೆ ಬೊಮ್ಮಾಯಿ ಬಜೆಟ್ 2022ರಲ್ಲಿ ಏನಿದೆ?

Karnataka Budget 2022: ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಇಂದು ವರ್ಷ 2022-23 ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದಾರೆ. 

Written by - Nitin Tabib | Last Updated : Mar 4, 2022, 02:21 PM IST
  • CM ಬೊಮ್ಮಾಯಿ ಅವರಿಂದ ಚೊಚ್ಚಲ ಬಜೆಟ್ ಮಂಡನೆ
  • ರಾಜ್ಯದ ಕೃಷಿ ಕ್ಷೇತ್ರಕ್ಕೆ ಬೊಮ್ಮಾಯಿ ಕೊಟ್ಟಿದ್ದೇನು?
  • ವಿವರಣೆಗಳಿಗಾಗಿ ಸುದ್ದಿ ಓದಿ
Karnataka Budget 2022: ಕೃಷಿ ಕ್ಷೇತ್ರಕ್ಕೆ ಬೊಮ್ಮಾಯಿ ಬಜೆಟ್ 2022ರಲ್ಲಿ ಏನಿದೆ? title=
Karnataka Budget 2022 (File Photo)

Karnataka Budget 2022: ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಇಂದು ವರ್ಷ 2022-23 ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ಅವರ ವಿಧಾನ ಸಭೆಯಲ್ಲಿ  ಅವರ ಬಜೆಟ್ (Budget 2022) ಮಂಡನೆ ಆರಂಭಗೊಂಡಿದೆ. ಸೊನ್ನಲಗೆಯ ಸಿದ್ಧರಾಮ ಬರೆದಿರುವ "ಕೃಷಿಯ ಮಾಡಿ ಉಣ್ಣದೆ, ಹಸಿವು ಹರಿವು ಪರಿ ಇನ್ನೆಂತೊ" ಮೂಲಕ ಕೃಷಿ (Agriculture Sector) ಬಜೆಟ್ (Karnataka Budget) ಮಂಡನೆ ಆರಂಭಿಸಿದ ಮುಖ್ಯಮಂತ್ರಿಗಳು (CM Bommai Budget), 

>> ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಇಂಧನದ ಭಾರ ಕಡಿಮೆ ಮಾಡಲು ಮೊಟ್ಟಮೊದಲ ಬಾರಿಗೆ ರೈತರಿಗೆ ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಟ 5 ಎಕರೆಗೆ DBT ಮೂಲಕ ನೇರವಾಗಿ ಸಹಾಯಧನ ವರ್ಗಾವಣೆ ಮಾಡುವುದಾಗಿ ಹೇಳಿದ್ದಾರೆ/

>> ಇದಲ್ಲದೆ ಹೊಸ ರೈತ ಶಕ್ತಿ ಯೋಜನೆಗಾಗಿ ಒಟ್ಟು 500 ಕೋಟಿ. ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. 

>> ಕೇಂದ್ರದ ಪಿಎಂ ಕಿಸಾನ್ ಯೋಜನೆಯಡಿ ರಾಜ್ಯಸರ್ಕಾರ ಹೆಚ್ಚುವರಿಯಾಗಿ ನೀಡುತ್ತಿರುವ ಅನುದಾನ ಮುಂದುವರೆಸಲಾಗುವುದು

>>ಕೃಷಿ ಯಂತ್ರಧಾರೆ ಕೇಂದ್ರಗಳನ್ನೂ ರಾಜ್ಯದ ಎಲ್ಲಾ ಹೋಬಳಿಗಳಿವೆ ವಿಸ್ತರಣೆ

>>ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ  'ಸೆಕಂಡರಿ ಕೃಷಿ ನಿರ್ದೇಶನಾಲಯ' ಸ್ಥಾಪಿಸಲಾಗಿದ್ದು, ಇದರಿಂದ ಪ್ರಾಥಮಿಕ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಸೃಷ್ಟಿ.

>> KAPPEC ಮೂಲಕ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಾಮಾನ್ಯ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಿ, ಕೊಯ್ಲಿನೋತ್ತರ ನಿರ್ವಹಣೆ ಕೈಗೊಂಡು ಉತ್ಪನ್ನಗಳ ಮಾರಾಟ ಮತ್ತು ರಫ್ತಿಗೆ 50 ಕೋಟಿ ರೂ. ಯೋಜನೆ.

>>ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕುಗಳನ್ನು ಹಂತ-ಹಂತವಾಗಿ ಸ್ಥಾಪಿಸಲಾಗುವುದು.

>>ರಾಜ್ಯದ 57 ತಾಲ್ಲೂಕುಗಳಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಕೃಷಿ ಸಿನ್ಚಾಯಿ ಯೋಜನೆ-ಜಲಾನಯನ ಅಭಿವೃದ್ದಿ 2.0 ಜಾರಿಗೊಳಿಸಲಾಗುವುದು.

>>DMF ಮತ್ತು KKRDB ಅನುದಾನಗಳನ್ನು ಸಂಯೋಜಿಸಿ ಬಳ್ಳಾರಿಯ ಹಗರಿಯಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಗುವುದು.

>> ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿಯೂ ಕೂಡ ಕೃಷಿ ಕಾಲೇಜು ಸ್ಥಾಪಿಸಲಾಗುವುದು.

>> ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ವಿಶಿಷ್ಟವಾದ ತೊಗರಿಬೆಲೆಯನ್ನು "ಭೀಮಾ ಪಲ್ಸ್' ಬ್ರಾಂಡ್ ಅಡಿ ಮಾರಾಟ.

>> ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ ಸ್ಥಾಪನೆ.

>>ಧಾರವಾಡ ಕೃಷಿ ವಿವಿಯಲ್ಲಿ 'ಡಾ. ಎಸ್. ವಿ. ಪಾಟೀಲ್ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಸ್ಥಾಪನೆ.

>> ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ನೀಡಲಾಗುವುದು.

>> ಬೆಂಗಳೂರಿನಲ್ಲಿ ಲಾಲಬಾಗ್-ಕಬ್ಬನ್ ಪಾರ್ಕ್ ಮಾದರಿಯಲ್ಲಿ ವಿವಿಧೋದ್ದೇಶ 'ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿಗೊಳಿಸಲಾಗುವುದು

>> ತೋಟಗರಿಗೆ ಬೆಳೆಗಳಿಗೆ ಹನಿ ನಿರಾವರಿ ಅಳವಡಿಕೆಗೆ ಪ.ಜಾ-ಪ.ಪಂ ಫಲಾನುಭವಿಗಳಿಗೆ ಶೇ.90 ಹಾಗೂ ಇತರೆ ವರ್ಗದ ರೈತರಿಗೆ ಶೇ.75 ರಷ್ಟು ಸಹಾಯ ಧನ.

>>ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸೌಲಭ್ಯವನ್ನು PPP ಆಧಾರದ ಮೇಲೆ ನಿರ್ಮಿಸಲಾಗುವುದು.

>> 'ರಾಷ್ಟ್ರೀಯ ಖಾದ್ಯ ತೈಲಗಳು - ತಾಳೆ ಎಣ್ಣೆ' ಅಭಿಯಾನವನ್ನು ಮುಂದಿನ 5 ವರ್ಷಗಳಲ್ಲಿ 25000 ಹೆಕ್ಟೇರ್ ಗೆ ಹೆಚ್ಚುಸುವ ಗುರಿ, 35 ಕೋಟಿ ರೂ. ಅನುದಾನ ಒದಗಿಸಲಾಗುವುದು.

>> ತೋಟಗಾರಿಕೆಯಲ್ಲಿ ಹೊಸ ತಂತ್ರಜ್ಞಾನ-ಯಂತ್ರೋಪಕರಣ ಅಳವಡಿಕೆಗೆ 25 ಕೋಟಿ ರೂ ಅನುದಾನ.

>> ಮೆಣಸು ಮತ್ತು ಇತರೆ ಸಾಂಬಾರ ಪಧಾರ್ಥಗಳ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ. 

>> ಹಾನಗಲ್ ಮಾವು ಸಂರಕ್ಷಣಾ ಘಟಕಕ್ಕೆ ಉತ್ತೇಜನ

>> ಕೊಡಗು-ಜಾಂಬೋಟಿ ಜೇನುತುಪ್ಪಗಳಿಗೆ ಬ್ರಾಂಡಿಂಗ್ ಒದಗಿಸಿ ಜಾಗತಿಕ ಮಟ್ಟಕ್ಕೆ ಏರಿಸಲು 5 ಕೋಟಿ ರೂ. ಒದಗಿಸಲಾಗುವುದು

>> ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ಪ್ರೋತ್ಸಾಹ ಧನ ಘೋಷಣೆ.

>>ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ e-Weighment ಹಾಗೂ e-Payment ಅನುಷ್ಥಾನ

>>ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ರೇಷ್ಮೆಗೆ ಸಂಬಂಧಿಸಿದ ಸುಸಜ್ಜಿತ ತರಬೇತಿ ಕೇಂದ್ರ ಸ್ಥಾಪನೆ.

>> ನೂತನವಾಗಿ 100 ಪಶುಚಿಕಿತ್ಸಾಲಯಗಳನ್ನು ಆರಂಭಿಸಲಾಗುವುದು. ಶೀಘ್ರದಲ್ಲಿಯೇ ಖಾಲಿ ಇರುವ 400 ಪಶುವೈದ್ಯಾಧಿಕಾರಿಗಳ ಭರ್ತಿಗೆ ಕ್ರಮ.

>> ರಾಷ್ಯದಲ್ಲಿ ಇದೆ ಮೊದಲ ಬಾರಿಗೆ  'ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್' ಸ್ಥಾಪನೆ.

>> ಗೋ ಸಂಪತ್ತು ರಕ್ಷಣೆ ಮತ್ತು ಗೋ ಹತ್ಯಾ ನಿಷೇಧ ಅಧಿನಿಯಮದ ಪರಿಣಾಮ ಕಾರಿ ಅನುಷ್ಠಾನಕ್ಕಾಗಿ ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100 ಕ್ಕೆ  ಹೆಚ್ಚಿಸಲಾಗುವುದು. ಇದಕ್ಕಾಗಿ 50 ಕೋಟಿ ರೂ.ಗಳ ಅನುದಾನ.

>>ಶೀಘ್ರದಲ್ಲಿ ಸರ್ಕಾರದ ವತಿಯಿಂದ ಮೊಟ್ಟಮೊದಲ ಬಾರಿಗೆ 'ಪುಣ್ಯಕೋಟಿ" ದತ್ತು ಯೋಜನೆ ಆರಂಭ.

>> ಕರಾವಳಿ ತೀರದಲ್ಲಿ ಮೀನುಗಾರಿಕೆ ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ 'ಮತ್ಯ್ಸ ಸಿರಿ' ಯೋಜನೆ ರೂಪಿಸಲಾಗುವುದು.

>>ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿಗೊಳಿಸಲಾಗುವುದು.

ಇದನ್ನೂ ಓದಿ-Karnataka Crime : ಗುಂಡ್ಲುಪೇಟೆಯಲ್ಲಿ‌‌‌ ಕಲ್ಲು ಕ್ವಾರಿ ಕುಸಿತ ; ಲಾರಿಗಳೆಲ್ಲಾ ಪಲ್ಟಿ, 6 ಜನ ಸಿಲುಕಿರುವ ಶಂಕೆ

>> ಸಹಕಾರಿ ಸಂಸ್ಥೆಗಳ ಮೂಲಕ ಬಡ್ಡಿ ಸಹಾಯ ಧನ ಯೋಜನೆಯ ಅಡಿ ಒಟ್ಟು 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ.ಗಳ ಕೃಷಿ ಸಾಲ ಒದಗಿಸುವ ಗುರಿ.

ಇದನ್ನೂ ಓದಿ-Karnataka Budget 2022 : ಸಿಎಂ ಬೊಮ್ಮಾಯಿ‌ ಚೊಚ್ಚಲ ಬಜೆಟ್ ನ ಒಟ್ಟು ಮೌಲ್ಯ ಎಷ್ಟು ಸಾವಿರ ಕೋಟಿ?

>> ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2022-23ನೇ ಸಾಲಿನಲ್ಲಿ ಒಟ್ಟು 33,700 ಕೋಟಿ ರೂ. ಅನುದಾನ.

ಇದನ್ನೂ ಓದಿ-Karnataka Crime : ಸಕ್ಕರೆನಾಡು ಮಂಡ್ಯದಲ್ಲಿ ಯುವಕನ ಬರ್ಬರ ಹತ್ಯೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News