ವಿಜಯಪುರ: ರಾಜ್ಯದಲ್ಲಿ ಒಂದಲ್ಲ ಒಂದರಂತೆ ಸಾಲು ಸಾಲು ಧರ್ಮಯುದ್ಧಗಳು ನಡೆಯುತ್ತಿವೆ. ಕೆಲವು ವಿವಾದಾತ್ಮಕ ಪೋಸ್ಟ್‌, ಹೇಳಿಕೆಗಳಿಂದ ಹಿಂಸಾಚಾರ, ಗಲಭೆಗಳು ಹೆಚ್ಚಾಗುತ್ತಿವೆ. ಇವೆಲ್ಲದರ ನಡುವೆ ಇಂದು ವಿಶ್ವ ವಿಖ್ಯಾತ ವಿಜಯಪುರದ ಗೋಲಗುಮ್ಮಟದ ಬಳಿ ಜೈ ಶ್ರೀರಾಮ ಘೋಷಣೆ ಮೊಳಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಬಿಬಿಎಂಪಿ ನೂತನ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ


ಆರ್‌ಆರ್‌ಪಿ ಎಂಬ ಹಿಂದೂ ಸಂಘಟನೆ ಕಾರ್ಯಕರ್ತರು ಇಂದು ವಿಜಯಪುರದ ಗೋಲಗುಮ್ಮಟಕ್ಕೆ ಭೇಟಿ ನೀಡಿದ್ದ ವೇಳೆ ʼಕಟ್ಟಿದೆವು ಕಟ್ಟಿದೆವು, ರಾಮ ಮಂದಿರ ಕಟ್ಟಿದೆವು. ಜೈ ಶ್ರೀರಾಮ ಜೈ ಶ್ರೀರಾಮ" ಎಂದು ಘೋಷಣೆ ಕೂಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ. 


ಐತಿಹಾಸಿಕ ಗೋಲಗುಮ್ಮಟ ಮೊಹಮ್ಮದ್ ಆದಿಲ್ ಶಾ ಅವರ ಸಮಾಧಿಯಾಗಿದೆ. ಆರ್‌ಆರ್‌ಪಿ  ಹಿಂದೂ ಸಂಘಟನೆ ಕಾರ್ಯಕರ್ತರ ಘೋಷಣೆಯನ್ನು ಕೆಲ ಹಿಂದೂ ಸಂಘಟನೆಗಳು ಪ್ರಚೋದನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿವೆ. 


"ಮೊಹಮ್ಮದ್‌ ಆದಿಲ್ ಷಾ ಬಿಜಾಪುರ(ವಿಜಯಪುರ)ದಲ್ಲಿ ಕಟ್ಟಿಸಿದ ಗೋಲ್ ಗುಂಬಜ್‌ನಲ್ಲಿ ನಮ್ಮ ಹಿಂದೂ ಸಿಂಹಣಿಯರಿಂದ ಜೈ ಶ್ರೀರಾಮ್ ಘೋಷಣೆ ಮೊಳಗಿದೆ. ಗಂಡಾಗಿ ಹುಟ್ಟಿ ತನ್ನ ಮಾತೃ ಧರ್ಮದ ಪರ ಸ್ವಲ್ಪವೂ ಕಾಳಜಿ ತೋರದವರ ನಡುವೆ. ದುರ್ಗೆಯರಂತೆ ಧರ್ಮದ ರಕ್ಷಣೆಗೆ ನಿಂತಿರುವ ನಮ್ಮ ಎಲ್ಲಾ ಸಹೋದರಿಯರಿಗೆ ಅನಂತ ಅನಂತ ಧನ್ಯವಾದಗಳು" ಎಂದು ಕೆಲವರು ವಿಡಿಯೋ ವೈರಲ್ ಮಾಡುತ್ತಿದ್ದಾರೆ.


ಇದನ್ನು ಓದಿ: ಬಿಜೆಪಿಗರೇ ನಿಮಗೆ ಸಮಗ್ರ ತನಿಖೆ ನಡೆಸುವ ಯೋಗ್ಯತೆ ಇಲ್ಲವೇ?-ಪ್ರಿಯಾಂಕ್ ಖರ್ಗೆ


ಗೋಲಗುಮ್ಮಟದಲ್ಲಿ ಮೊಳಗಿದ ಜೈ ಶ್ರೀರಾಮ್‌ ಘೋಷಣೆ ಮುಂದಿನ ದಿನಗಳಲ್ಲಿ ಯಾವ ಆಯಾಮ ಪಡೆಯುತ್ತೆ ಎಂಬುವುದು ಕಾದು ನೋಡಬೇಕಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.