Nikhil Kumaraswamy : `ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಜನ್ಮ ಕೊಟ್ಟ ಜಿಲ್ಲೆ ಮಂಡ್ಯ`
ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಜನ್ಮ ಕೊಟ್ಟ ಜಿಲ್ಲೆ ಮಂಡ್ಯ, ನೀವು ಯಾವುದೇ ಕಾರ್ಯಕ್ರಮಕ್ಕೆ ಕರೆದರು ಬರೋದು ನನ್ನ ಧರ್ಮ. ಈ ಭಾಗದಲ್ಲಿ ಅನ್ನದಾನಿ 24 ತಾಸು ಜನಗಳ ನಡುವೆ ಕೆಲಸ ಮಾಡ್ತಿದ್ದಾರೆ.
ಮಂಡ್ಯ : ಮಂಡ್ಯ ಜಿಲ್ಲೆ ನಮ್ಮ ಜಿಲ್ಲೆ. ಮಂಡ್ಯ ಜನ ನಮ್ಮ ಜನ. ನಿಮ್ಮನ್ನೆಲ್ಲ ನಾವು ನೋಡೋದೇ ಪುಣ್ಯ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಮಳವಳ್ಳಿ ತಾಲೂಕಿನ ವಡ್ಡರಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಜನ್ಮ ಕೊಟ್ಟ ಜಿಲ್ಲೆ ಮಂಡ್ಯ, ನೀವು ಯಾವುದೇ ಕಾರ್ಯಕ್ರಮಕ್ಕೆ ಕರೆದರು ಬರೋದು ನನ್ನ ಧರ್ಮ. ಈ ಭಾಗದಲ್ಲಿ ಅನ್ನದಾನಿ 24 ತಾಸು ಜನಗಳ ನಡುವೆ ಕೆಲಸ ಮಾಡ್ತಿದ್ದಾರೆ. ಈ ಭಾಗದ ನಮ್ಮ ಪಕ್ಷದ ಶಾಸಕರೆಲ್ಲರೂ ಜನಪರವಾದವರು. ನೀರಾವರಿ ಯೋಜನೆ ಪೂರ್ಣಗೊಳಿಸಲು ಜನತಾ ಜಲಧಾರೆ ಕಾರ್ಯಕ್ರಮ. ಐತಿಹಾಸಿಕ ಕಾರ್ಯಕ್ರಮ ಮಾಡಿದೆವು ಎಂದರು.
ಇದನ್ನೂ ಓದಿ : MP Sumalta Ambarish : ಸದ್ಯದಲ್ಲೇ ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಅಂಬರೀಶ್?
ಇನ್ನು ಮುಂದುವರೆದು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಕಾಂಗ್ರೆಸ್, ಬಿಜೆಪಿ ಹಂಗಿನಲ್ಲಿ ಕೆಲಸ ಮಾಡಿದೆ. ಮುಂದೆ ಪೂರ್ಣ ಪ್ರಮಾಣದ ಅಧಿಕಾರ ಕೊಡಿ.ಕುಮಾರಣ್ಣರ ಪೂರ್ಣಪ್ರಮಾಣದ ಪರಿಕಲ್ಪನೆ ಸಾಕಾರಗೊಳಿಸಿ. ಮಿಷನ್ 123ರಂತೆ ಗೆಲುವಿಗೆ ಶ್ರಮಿಸಿ. ಕುಮಾರಣ್ಣ ಜಿಲ್ಲೆಗೆ ಎಂಟೂವರೆ ಸಾವಿರ ಕೋಟಿ ಅನುದಾನ ಕೊಟ್ಟರು. ಬಿಜೆಪಿ ಸರ್ಕಾರ ಬಂದ್ಮೇಲೆ ಆ ಅನುದಾನವನ್ನ ಎಲ್ಲಿಗೆ ಕೊಂಡೊಯ್ಯದರು ಗೊತ್ತಿಲ್ಲ. ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ನಾನು ಕುಗ್ಗಿಲ್ಲ.ಉತ್ಸಾಹದಿಂದ ಪಕ್ಷವನ್ನ ಅಧಿಕಾರಕ್ಕೆ ತರಲು ಶ್ರಮಿಸ್ತೀನಿ. ಮಂಡ್ಯ ಜಿಲ್ಲೆಯಲ್ಲಿ ಮತ್ತೆ 7ಕ್ಕೆ 7 ಶಾಸಕರನ್ನ ಗೆಲ್ಲಿಸಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ : CC Patil : ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಿಸಿ ಪಾಟೀಲ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.