ಅರಸೀಕೆರೆ : ನನಗೂ ಹಾಗೂ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ ಆದರೆ ಪಕ್ಷದಲ್ಲಿ ಮುಂದುವರಿಯುವುದು ಅಥವಾ ಬಿಡುವುದನ್ನ ಕ್ಷೇತ್ರದ ನಮ್ಮ ಮುಖಂಡರು ಹಾಗೂ ಅಭಿಮಾನಿಗಳು ನಿರ್ಧರಿಸುತ್ತಾರೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಮ್ಮ ರಾಜಕೀಯ ಮುನ್ನಡೆಯ ನಿಗೂಢತೆಯನ್ನ ಕಾದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡರು, ಸ್ಥಳೀಯ ರಾಜಕೀಯ ಚಿತ್ರಣ ಸೇರಿದಂತೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮುಖಂಡರಾದ ಹೆಚ್. ಡಿ ರೇವಣ್ಣ ಅವರೊಂದಿಗೆ ಚರ್ಚಿಸಿದ್ದರು ಸಹ ಕ್ಷೇತ್ರದಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವುದು ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ : Tumakuru : ತುಮಕೂರಿನಲ್ಲಿ ಕಂಟ್ರಾಕ್ಟರ್ ಆತ್ಮಹತ್ಯೆ : ಸಾವಿನ ಹಿಂದಿದೆ 40% ಕಮಿಷನ್ ಗುಮ್ಮ?


ಈಗಾಗಲೇ ಒಬ್ಬರು ನಾನೇ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಇವರನ್ನ ಪಕ್ಷಕ್ಕೆ ಹೆಸರಿಸಿಕೊಂಡಾಗಲು ನಮ್ಮ ಮುಖಂಡರು ನನ್ನ ಗಮನಕ್ಕೆ ತರಲಿಲ್ಲ ಇದು ವೈಯಕ್ತಿಕವಾಗಿ ನನ್ನನ್ನು ಮತ್ತಷ್ಟು ಗಾಸಿಗೊಳಿಸಿದ ವಿಷಯವಾಗಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡರು.


ಕುಮಾರಸ್ವಾಮಿಯವರು ಹಾಗೂ ರೇವಣ್ಣ ಅವರ ನಡೆ-ನುಡಿಯನ್ನು ಅವಲೋಕಿಸುತ್ತಾ ಬಂದಿದ್ದು ಆದರೂ ಧನುರ್ಮಾಸ ಮುಗಿಯುವವರೆಗೂ ರಾಜಕೀಯವಾಗಿ ಯಾವ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕೀಯವಾಗಿ ಬಲ ನೀಡಿರುವ ನಮ್ಮ ಮುಖಂಡರು ಹಾಗೂ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದು ಸ್ಪಷ್ಟನೆ ನೀಡಿದರು.


ಇದನ್ನೂ ಓದಿ : ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ: ಸಿಸಿಟಿವಿ ನಿಯಂತ್ರಣಕ್ಕೆ ಪ್ರತ್ಯೇಕ ವಾರ್ ರೂಮ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.