ಬೆಂಗಳೂರು: ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 07 ಸಂಖ್ಯೆಯ ಪ್ರೋಸೆಸ್ ಜಾರಿಕಾರ(ಪ್ರೋಸೆಸ್ ಸರ್ವರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಅರ್ಜಿಗಳನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ವೆಬ್‍ಸೈಟ್  https://districts.ecourts.gov.in/shivamogga... ಅಥವಾ http://karnatakajudiciary.kar.nic.in/districtrecruitment.asp ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ನವೆಂಬರ್ 23 ರಿಂದ ಡಿಸೆಂಬರ್ 30 ರೊಳಗೆ ಸಲ್ಲಿಸಬಹುದು.


ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಕನಿಷ್ಟ 18 ವರ್ಷ ಮತ್ತು ಸಾಮಾನ್ಯ ವರ್ಗಕ್ಕೆ ಗರಿಷ್ಟ 35 ವರ್ಷ, 2ಎ, 2ಬಿ, 3ಎ, 3ಬಿ ಗೆ 38 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 01 ಕ್ಕೆ 40 ವರ್ಷಗಳ ವಯೋಮಿತಿ(ವಿಧವೆ ಮತ್ತು ಅಂಗವಿಕಲರಿಗೆ 10 ವರ್ಷ ಸಡಿಲಿಕೆ ಹಾಗೂ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು) ಇದೆ.


ಇದನ್ನೂ ಓದಿ: ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು- ಸಿದ್ಧರಾಮಯ್ಯ 


ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಯ ಅರ್ಜಿ ಶುಲ್ಕ ರೂ.200 ಆಗಿದ್ದು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.100 ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ನಿಗದಿತ ಶುಲ್ಕವನ್ನು ನ್ಯಾಯಾಲಯ  ಮೇಲೆ ನೀಡಲಾದ ವೆಬ್‍ಸೈಟ್ ಲಿಂಕ್‍ಗಳ ಮುಖಾಂತರ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಆನ್‍ಲೈನ್ ಪೇಮೆಂಟ್ ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.


ಇದನ್ನೂ ಓದಿ: RSS Chief: '75 ವರ್ಷಗಳು ನಾವು ಸರಿಯಾದ ದಾರಿಯನ್ನು ಅನುಸರಿಸಿಲ್ಲ, ಹೀಗಾಗಿ ಅಭಿವೃದ್ಧಿ ನಿಂತುಹೋಗಿದೆ'


ಅಭ್ಯರ್ಥಿಯ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ(ಲಿಪಿ ಮತ್ತು ಇತರೆ ಹುದ್ದೆಗಳ)(ನೇಮಕಾತಿ) ನಿಯಮ 1982 ಮತ್ತು (ತಿದ್ದುಪಡಿ) ನಿಯಮ 2007 ರ ಪ್ರಕಾರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವೆಬ್‍ಸೈಟ್‍ನ್ನು ವೀಕ್ಷಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮುಸ್ತಫ ಹುಸೇನ್ ಎಸ್.ಎ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.