ಬೆಂಗಳೂರು: ಕರ್ನಾಟಕ್ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಪಿಯುಸಿ ಹಾಗೂ ಪದವಿ ಹೊಂದಿರುವ ಅಭ್ಯರ್ಥಿಗಳಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಅಧಿಕೃತ ಪ್ರಕರಣೆ ಹೊರಡಿಸಿರುವ ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ 3646 ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 30 ಕೊನೆಯ ದಿನವಾಗಿದೆ.


ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) 94, ಸಹಾಯಕ ಇಂಜಿನಿಯರ್(ವಿದ್ಯುತ್) 505, ಸಹಾಯಕ ಇಂಜಿನಿಯರ್(ಸಿವಿಲ್) 28, ಕಿರಿಯ ಇಂಜಿನಿಯರ್(ವಿದ್ಯುತ್) 570, ಕಿರಿಯ ಇಂಜಿನಿಯರ್(ಸಿವಿಲ್) 28, ಕಿರಿಯ ಆಪ್ತ ಸಹಾಯಕ 63, ಕಿರಿಯ ಸಹಾಯಕ 360, ಚಾಲಕ್ ದರ್ಜೆ- II 126, ಕಿರಿಯ ಸ್ಟೇಷನ್ ಪರಿಚಾರಕ 103, ಕಿರಿಯ ಪವರ್ ಮ್ಯಾನ್(ಕಿರಿಯ ಮಾರ್ಗದಾಳು) 1769 ಹುದ್ದೆಗಳು ಸೇರಿದಂತೆ ಒಟ್ಟು 3646 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 


ಆಸಕ್ತ ಅಭ್ಯರ್ಥಿಗಳು ನಿಗಮದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ. ಹೆಚ್ಹಿನ ಮಾಹಿತಿಗೆ www.kptcl.com, www.bescom.org, www.hescom.co.in, www.cescmysore.org, www.mescom.in, www.gescom.in ವೆಬ್ಸೈಟ್'ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.