ಬೆಂಗಳೂರು :  ರಾಜ್ಯ ರೈತರಿಗೆ ಕೃಷಿ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು ರೈತರು ಯಾವುದೇ ಅಡೆತಡೆ ಇಲ್ಲದೆ ಕೃಷಿ ಇಲಾಖೆಯಿಂದ ಲಭ್ಯವಿರುವ ಸೌಲಭ್ಯವನ್ನು ಪಡೆಯಲು ಕೆ-ಕಿಸಾನ್ (K-Kisan) ತಂತ್ರಾಂಶ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿರುವುದಾಗಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಕೃಷಿ ಇಲಾಖೆಯ ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಸೌಲಭ್ಯ ಪಡೆಯಲು ಪದೇ ಪದೇ ದಾಖಲೆ ನೀಡುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ ಕೆ-ಕಿಸಾನ್ (K-Kisan) ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. 


ಏನಿದು ಕೆ-ಕಿಸಾನ್?
ಕರ್ನಾಟಕ ಕೃಷಿ ಮಾಹಿತಿ ಮತ್ತು ಅಂತರ್ಜಾಲ ತಾಣ ಯೋಜನೆ ಈ ಕೆ-ಕಿಸಾನ್ (K-Kisan) ತಂತ್ರಾಂಶದಲ್ಲಿ ರೈತರ ವಿವರ, ಅವರ ಕುಟುಂಬದ ವಿವರ, ಭೂಮಿ, ಮಣ್ಣಿನ ಗುಣಮಟ್ಟ, ಬೆಳೆ ಮಾಹಿತಿ, ಆಧಾರ್ ಮಾಹಿತಿ, ಬ್ಯಾಂಕ್ ಖಾತೆ ವಿವರ ಮುಂತಾದ ಮಾಹಿತಿಗಳನ್ನು ಕಲೆ ಹಾಕಿ ಅದನ್ನು ಅಪ್ ಲೋಡ್ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ರೈತರಿಗೆ ಯುನೀಕ್ ಐಡಿ ಕಾರ್ಡ್ ಅನ್ನು ನೀಡಲಾಗುತ್ತದೆ. ರೈತರು ಕೃಷಿ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್ ಅತ್ಯಗತ್ಯವಾಗಿದೆ.


ಇದನ್ನೂ ಓದಿ - PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ


ಒಂದೊಮ್ಮೆ ಕೆ-ಕಿಸಾನ್ ತಂತ್ರಾಂಶದಡಿಯಲ್ಲಿ ರೈತರು (Farmers) ನೋಂದಣಿ ಮಾಡಿಕೊಳ್ಳದೇ ಇದ್ದರೆ ಅಂತಹ ರೈತರಿಗೆ ಸರ್ಕಾರದಿಂದ ದೊರೆಯುವ ಯಾವುದೇ ಸಹಾಯಧನವಾಗಲಿ, ಇತರೆ ಸೌಲಭ್ಯಗಳಾಗಲೀ ದೊರೆಯುವುದಿಲ್ಲ. 


ಈ ಸೌಲಭ್ಯಗಳನ್ನು ಪಡೆಯಲು ಕೆ-ಕಿಸಾನ್ ನಲ್ಲಿ ನೋಂದಣಿ ಕಡ್ಡಾಯ:
ರೈತರು ಸರ್ಕಾರದ ವತಿಯಿಂದ ದೊರೆಯುವ ಬಿತ್ತನೆ ಬೀಜಗಳು, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳು, ಆಧುನಿಕ ಕೃಷಿ ಉಪಕರಣಗಳು ಸೇರಿದಂತೆ ಕೃಷಿ ಇಲಾಖೆ ವತಿಯಿಂದ ಲಭ್ಯವಿರುವ ಇತರ ಸೌಲಭ್ಯಗಳನ್ನು ಪಡೆಯಲು  ಕೆ-ಕಿಸಾನ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.


ಇದನ್ನೂ ಓದಿ - PM-Kisan: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು


ಕೆ-ಕಿಸಾನ್ ನೋಂದಣಿ ಮಾಡುವುದು ಹೇಗೆ?
ಕೆ-ಕಿಸಾನ್ನಲ್ಲಿ ತಮ್ಮ ಹೆಸರು ನೋಂದಣಿಗಾಗಿ ರೈತರು ತಮ್ಮ ಜಮೀನಿನ ಆರ್ ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೊತೆಗೆ ಖಾತೆದಾರನ ಫೋಟೋ ಹೊಂದಿರಬೇಕು. ಇವುಗಳನ್ನು ರೈತಸಂಪರ್ಕ ಕೇಂದ್ರಕ್ಕೆ ನೀಡಿ ಕೆ-ಕಿಸಾನ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದು.


ಇದಲ್ಲದೆ ರೈತರು ಕೃಷಿ ಇಲಾಖೆಯ ವೆಬ್ ಸೈಟ್ https://kkisan.karnataka.gov.in/Home aspx ಗೆ ಭೇಟಿ ನೀಡುವ ಮೂಲಕ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.