PM-Kisan: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು

ಪಿಎಂ-ಕಿಸಾನ್‌ನ 7 ನೇ ಕಂತು 2020 ರ ಡಿಸೆಂಬರ್ 25 ರಂದು ಬಿಡುಗಡೆಯಾಯಿತು. ಈ ಸಮಯದಲ್ಲಿ 9 ಕೋಟಿ ರೈತರ ಖಾತೆಗಳಿಗೆ 18,000 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.

Written by - Yashaswini V | Last Updated : Mar 3, 2021, 08:40 PM IST
  • ಪಿಎಂ-ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾರಂಭಿಸಿದರು
  • ಈ ಯೋಜನೆಯಡಿ ರೈತರಿಗೆ ಪ್ರತಿವರ್ಷ 6,000 ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ
  • ಈ ಯೋಜನೆಯ ಲಾಭ ಪಡೆಯಲು 2019 ರ ಡಿಸೆಂಬರ್ 1 ರಿಂದ ಆಧಾರ್ (Aadhaar) ಸಂಖ್ಯೆ ಸಹ ಅಗತ್ಯವಾಗಿದೆ
PM-Kisan: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು  title=
PM Kisan Samman Nidhi Yojana

ನವದೆಹಲಿ : PM-Kisan Samman Nidhi: ನೀವು ಕೃಷಿಕರಾಗಿದ್ದರೆ ಮತ್ತು ನೀವು ಪಿಎಂ-ಕಿಸಾನ್ ಸಮ್ಮನ್ ನಿಧಿ ಯೋಜನೆ (PM-Kisan Samman Nidhi Yojana)ಯಲ್ಲಿ ನೋಂದಾಯಿಸಿಕೊಂಡಿದ್ದರೆ ಈ ಸುದ್ದಿ ನಿಮಗಾಗಿ ಆಗಿದೆ. ಶೀಘ್ರದಲ್ಲೇ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು ರೈತರ ಬ್ಯಾಂಕ್ ಖಾತೆ ಸೇರಲಿದೆ. ಈ ಬಾರಿ ಕೇಂದ್ರ ಸರ್ಕಾರ ಹೋಳಿ ಹಬ್ಬದ ವೇಳೆ ಪಿಎಂ ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತನ್ನು ರೈತರಿಗಾಗಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಹಿಂದಿನ ಕಂತು ಎಂದರೆ 7 ನೇ ಕಂತಿನ ಡಿಸೆಂಬರ್ 25, 2020 ರಂದು ಬಿಡುಗಡೆಯಾಯಿತು. ಈ ಸಮಯದಲ್ಲಿ 9 ಕೋಟಿ ರೈತರ ಖಾತೆಗಳಿಗೆ 18,000 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಈ ಮೊದಲು 2 ಹೆಕ್ಟೇರ್ ವರೆಗೆ ಕೃಷಿ ಭೂಮಿ ಹೊಂದಿರುವ ರೈತರಿಗಾಗಿ (Farmers) ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ನಂತರ ಇದನ್ನು ದೇಶದ ಎಲ್ಲಾ ರೈತರಿಗೂ ವಿಸ್ತರಿಸಲಾಯಿತು.

ಪ್ರಸ್ತುತ, ಈ ಯೋಜನೆಯಡಿ 11.66 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ. ಮತ್ತೊಂದೆಡೆ ತಪ್ಪಾದ ಮಾಹಿತಿ ನೀಡಿರುವ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಸಮಯದಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಯಲ್ಲಿ ಯೋಜನೆಯ ಲಾಭ ಪಡೆಯುವ ರೈತರ ಸಂಖ್ಯೆ 9 ಕೋಟಿ 97 ಲಕ್ಷಕ್ಕೆ ಹತ್ತಿರದಲ್ಲಿದೆ. ಹಾಗಾಗಿ ಡಿಸೆಂಬರ್‌ನಲ್ಲಿ 9.64 ಕೋಟಿ ರೈತರ ಖಾತೆಗೆ ಮಾತ್ರ ಹಣವನ್ನು ವರ್ಗಾಯಿಸಲಾಯಿತು. 

ಇದನ್ನೂ ಓದಿ - PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ

ಈ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ :
ಈ ಯೋಜನೆಯ ಲಾಭ ಪಡೆಯಲು 2019 ರ ಡಿಸೆಂಬರ್ 1 ರಿಂದ ಆಧಾರ್ (Aadhaar) ಸಂಖ್ಯೆ ಸಹ ಅಗತ್ಯವಾಗಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಬಹಳ ಮುಖ್ಯ. ಆಗ ಮಾತ್ರ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಇಂತಹ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ :
- ಸಾಂವಿಧಾನಿಕ ಹುದ್ದೆಯಲ್ಲಿರುವ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ.
- ಯಾವುದೇ ಹಾಲಿ/ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಕೌನ್ಸಿಲರ್‌ಗಳು, ಶಾಸಕರು, ಸಂಸದರು ಯೋಜನೆಯ ಲಾಭವನ್ನು ಪಡೆಯುವುದಿಲ್ಲ.
- ರಾಜ್ಯದ ಅಥವಾ ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಲ್ಲಿ ಯಾವುದೇ ಹುದ್ದೆಯಲ್ಲಿರುವ  ರೈತನನ್ನು ಅದರಿಂದ ಹೊರಗಿಡಲಾಗಿದೆ.
- ಪಿಂಚಣಿ ಪಡೆಯುವ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.
- ಆದಾಯ ತೆರಿಗೆ ಪಾವತಿಸುವ ಜನರನ್ನು ಪಿಎಂ-ಕಿಸಾನ್ ಯೋಜನೆಯಿಂದ ಹೊರಗಿಡಲಾಗಿದೆ.

ಪಿಎಂ-ಕಿಸಾನ್ ಸಹಾಯವಾಣಿ :
ನೀವು PM-Kisan ನ ಕಂತು ಸ್ವೀಕರಿಸದಿದ್ದರೆ, ನೀವು 011-24300606 ಗೆ ಸಹಾಯವಾಣಿ  (PM-Kisan Helpline) ಸಂಖ್ಯೆಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದು.

ಇದನ್ನೂ ಓದಿ - PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ

ಪಿಎಂ-ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಾರಂಭಿಸಿದರು. ಈ ಯೋಜನೆಯಡಿ ರೈತರಿಗೆ ಪ್ರತಿವರ್ಷ 6,000 ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಪಿಎಂ ಕಿಸಾನ್ ಸಮ್ಮನ್ (ಪಿಎಂ-ಕಿಸಾನ್ ನೋಂದಣಿ) ನಲ್ಲಿ ನೋಂದಾಯಿಸುವುದು ಹೇಗೆ ?
ಪಿಎಂ ಕಿಸಾನ್  ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ. ಇಲ್ಲಿ, ಬಲಭಾಗದಲ್ಲಿರುವ ರೈತ ಕಾರ್ನರ್‌ನ ಹೊಸ ರೈತ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಇದರ ನಂತರ ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು ಮತ್ತು ನಿಮ್ಮ ರಾಜ್ಯವನ್ನು ಆರಿಸಬೇಕು. ಒಂದು ಫಾರ್ಮ್ ನಿಮ್ಮ ಮುಂದೆ ಕಾಣಿಸುತ್ತದೆ, ಇದರಲ್ಲಿ ನೀವು ನಿಮ್ಮ ಸಂಪೂರ್ಣ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕ್ ಖಾತೆಯ ವಿವರಗಳು ಮತ್ತು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಇದರ ನಂತರ ನೀವು ಫಾರ್ಮ್ ಅನ್ನು ಸಲ್ಲಿಸುವ ಮೂಲಕ ನೋಂದಾಯಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News