ಕಬಿನಿ ಹಿನ್ನೀರಿನ ಆಕರ್ಷಣೆ, ಶಕ್ತಿಮಾನ್ ʼಭೋಗೇಶ್ವರʼ ಇನ್ನಿಲ್ಲ!
ಭೋಗೇಶ್ವರ ತನ್ನ ನೀಳ ದಂತದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಸುಮಾರು 4 ಅಡಿಗೂ ಉದ್ದದ ಸುಂದರವಾದ ದಂತ ಹೊಂದಿದ್ದ ಈ ಆನೆಗೆ ಅಂದಾಜು 60 ವರ್ಷ ವಯಸ್ಸಾಗಿದ್ದು, ವಯೋಸಹಜವಾಗಿ ಮೃತಪಟ್ಟಿದೆ ಎನ್ನಲಾಗಿದೆ.
ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿಗಳಿಸಿದ್ದ 'ಭೋಗೇಶ್ವರ' ಹೆಸರಿನ ಆನೆ ಮೃತಪಟ್ಟಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಅಬ್ಬರ: ಒಂದೇ ದಿನದಲ್ಲಿ ಶೇ.3 ಪಟ್ಟು ಹೆಚ್ಚಳವಾಯ್ತು ಪ್ರಕರಣ!
ಭೋಗೇಶ್ವರ ತನ್ನ ನೀಳ ದಂತದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಸುಮಾರು 4 ಅಡಿಗೂ ಉದ್ದದ ಸುಂದರವಾದ ದಂತ ಹೊಂದಿದ್ದ ಈ ಆನೆಗೆ ಅಂದಾಜು 60 ವರ್ಷ ವಯಸ್ಸಾಗಿದ್ದು, ವಯೋಸಹಜವಾಗಿ ಮೃತಪಟ್ಟಿದೆ ಎನ್ನಲಾಗಿದೆ.
ಕಬಿನಿ ಶಕ್ತಿಮಾನ್ ಭೋಗೇಶ್ವರನನ್ನು ಕಬಿನಿಯ ಹಿರಿಯಣ್ಣ ಎಂದೂ ಕರೆಯಲಾಗುತ್ತಿತ್ತು. ನೀಳ ದಂತ ಹೊಂದಿದ್ದ ಭೋಗೇಶ್ವರ ತನ್ನ ಸುಂದರ ನಡಿಗೆಯಿಂದಲೇ ಪ್ರಾಣಿ ಪ್ರಿಯರ ಮನಗೆದ್ದಿದ್ದ. ಇದೀಗ ಶಕ್ತಿಮಾನ್‌ನ ಸಾವಿನಿಂದ ಪ್ರವಾಸಿಗರಲ್ಲಿ, ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.
ಭೋಗೇಶ್ವರ ಆನೆಯ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫ್ಯಾನ್ಸ್ ಇದ್ದಾರೆ. ಈ ಆನೆಯ ದಂತವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. ಭೋಗೇಶ್ವರ ತನ್ನ ದಂತಗಳಿಂದಲೇ ಜನ ಮನ ಗೆದ್ದಿದ್ದಾನೆ. ಇದೀಗ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ಕಾಡಿನಗಲಕ್ಕೂ ಓಡಾಡುತ್ತಿದ್ದ ಭೋಗೇಶ್ವರ ಇಲ್ಲದೆ, ಕಬಿನಿಯಲ್ಲಿ ನೀರವ ಮೌನ ಮನೆ ಮಾಡಿದೆ.
ಇದನ್ನೂ ಓದಿ: Paytm ಬಳಕೆದಾರರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್‌ಗೆ ಹೆಚ್ಚುವರಿ ಶುಲ್ಕ ವಸೂಲಿ!
ಇದೀಗ ಭೋಗೇಶ್ವರ ಆನೆಯ ಸಾವಿಗೆ ಎಲ್ಲೆಡೆಯಿಂದ ಸಂತಾಪ ವ್ಯಕ್ತವಾಗುತ್ತಿದೆ. ಈ ಆನೆ ಅಪರೂಪ ಎಂಬಂತೆ ದರ್ಶನ ನೀಡುತ್ತಿತ್ತು. ಇದೀಗ ಬಾರದ ಲೋಕಕ್ಕೆ ಶಕ್ತಿಮಾನ್ ಪ್ರಯಾಣ ಬೆಳೆಸಿದ್ದಾನೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಅಂತ್ಯಕ್ರಿಯೆ ನಡೆಸಿದ ಬಳಿಕ ಭೋಗೇಶ್ವರನ ನೆನಪು ಉಳಿಯುವಂತಹ ಕಾರ್ಯ ಮಾಡಲು ಮುಂದಾಗಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.