Paytm ಬಳಕೆದಾರರಿಗೆ ಬಿಗ್ ಶಾಕ್: ಮೊಬೈಲ್‌ ರೀಚಾರ್ಜ್‌ಗೆ ಹೆಚ್ಚುವರಿ ಶುಲ್ಕ ವಸೂಲಿ!

ಪೇಟಿಎಂ App ಮೂಲಕ ಮೊಬೈಲ್ ರೀಚಾರ್ಜ್ ಮಾಡಿಸಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆಂದು 2019ರಲ್ಲಿ ಕಂಪನಿ ಘೋಷಣೆ ಮಾಡಿತ್ತು.

Written by - Puttaraj K Alur | Last Updated : Jun 12, 2022, 11:54 AM IST
  • ಫೋನ್ ಪೇ ಬಳಿಕ ಮೊಬೈಲ್ ರೀಚಾರ್ಜ್‍ಗೆ ಪೇಟಿಎಂನಿಂದ ಹೆಚ್ಚುವರಿ ಶುಲ್ಕ ವಸೂಲಿ
  • ಸರ್ಚಾರ್ಜ್ ರೂಪದಲ್ಲಿ ಗ್ರಾಹಕರಿಂದ 1 ರೂ.ನಿಂದ 6 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ
  • ಪೇಟಿಎಂ ಹೆಚ್ಚುವರಿ ಶುಲ್ಕ ವಿಧಿಸುವ ನೀತಿಗೆ ಲಕ್ಷಾಂತರ ಗ್ರಾಹಕರಿಂದ ಆಕ್ರೋಶ
Paytm ಬಳಕೆದಾರರಿಗೆ ಬಿಗ್ ಶಾಕ್: ಮೊಬೈಲ್‌ ರೀಚಾರ್ಜ್‌ಗೆ ಹೆಚ್ಚುವರಿ ಶುಲ್ಕ ವಸೂಲಿ!     title=
ಪೇಟಿಎಂನಿಂದ ಹೆಚ್ಚುವರಿ ಶುಲ್ಕ ವಸೂಲಿ!

ನವದೆಹಲಿ: ಭಾರತದ ನಂ.1 ಪೇಮೆಂಟ್ ಅಪ್ಲಿಕೇಶನ್ ಪೇಟಿಎಂ ತನ್ನ ಗ್ರಾಹಕರಿಗೆ ಹೆಚ್ಚುವರಿ ಶುಲ್ಕದ ಶಾಕ್‌ ಕೊಟ್ಟಿದೆ. ಫೋನ್ ಪೇ ಬಳಿಕ ಇದೀಗ ಪೇಟಿಎಂ ಸಹ ಮೊಬೈಲ್ ರಿಚಾರ್ಜ್‍ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ. Paytm ಮೊಬೈಲ್ ರೀಚಾರ್ಜ್‌ಗಳಿಗೆ ಸಣ್ಣ ಶುಲ್ಕ ವಿಧಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಸರ್ಚಾರ್ಜ್ ರೂಪದಲ್ಲಿ ಪೇಟಿಎಂ ಗ್ರಾಹಕರಿಂದ 1 ರೂ.ನಿಂದ 6 ರೂ.ವರೆಗೆ ಶುಲ್ಕವನ್ನು ಪಡೆಯುತ್ತಿದೆ. ವ್ಯಾಲೆಟ್ ಬ್ಯಾಲೆನ್ಸ್, UPI ಅಥವಾ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದ ಮೊಬೈಲ್ ರೀಚಾರ್ಜ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ರಿಚಾರ್ಜ್ ಎಷ್ಟು ಮೊತ್ತದಲ್ಲಿದೆ ಎಂಬುದರ ಮೇಲೆ ಈ ಶುಲ್ಕ ಅನ್ವಯವಾಗುತ್ತದೆ. ಕಳೆದ ಮಾರ್ಚ್ ಆರಂಭದಲ್ಲಿಯೇ ಈ ಶುಲ್ಕ ವಿಧಿಸುವ ಪ್ರಕ್ರಿಯೆ ಜಾರಿಗೆ ಬಂದಿದೆಯಾದರೂ ಹೆಚ್ಚಿನ ಗ್ರಾಹಕರಿಗೆ ತಿಳಿದಿರಲಿಲ್ಲ. ಆರಂಭದಲ್ಲಿ ಕೆಲವೇ ಗ್ರಾಹಕರಿಗೆ ಶುಲ್ಕ ವಿಧಿಸಿರುವುದು ಕಂಡುಬಂದಿತ್ತು. ದಿನಕಳೆದಂತೆ ಎಲ್ಲಾ ಗ್ರಾಹಕರಿಗೆ ಈ ಶುಲ್ಕದ ಬಿಸಿ ತಟ್ಟಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ಶೀಘ್ರವೇ ಸಿಗಲಿದೆ ದೃಢೀಕೃತ ಸೀಟು

ಪೇಟಿಎಂ App ಮೂಲಕ ಮೊಬೈಲ್ ರೀಚಾರ್ಜ್ ಮಾಡಿಸಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆಂದು 2019ರಲ್ಲಿ ಕಂಪನಿ ಘೋಷಣೆ ಮಾಡಿತ್ತು. ಆದರೆ, ಇದೀಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಶುಲ್ಕ ವಿಧಿಸುತ್ತಿದೆ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಆದಾಯ ಗಳಿಸುವ ಪ್ರಯತ್ನದಲ್ಲಿ Paytmನಲ್ಲಿನ ತಂತ್ರಗಳು ಬದಲಾಗುತ್ತಿರುವಂತೆ ತೋರುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‍ಗಳು ಕಿಡಿಕಾರಿದ್ದಾರೆ. ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಪೇಟಿಎಂ ಕಂಪನಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಗ್ರಾಹಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

Paytmನ ಪ್ರತಿಸ್ಪರ್ಧಿ PhonePe ಕಳೆದ ವರ್ಷ ಅಕ್ಟೋಬರ್‌ನಲ್ಲಿ 50 ರೂ.ಗಿಂತ ಹೆಚ್ಚಿನ ಮೊಬೈಲ್ ರೀಚಾರ್ಜ್‌ಗಳ ಮೇಲೆ ‘ಪ್ರೊಸೆಸಿಂಗ್ ಶುಲ್ಕ’ದ ಹೆಸರಿನಲ್ಲಿ ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು. ಕಂಪನಿಯು ‘ಸಣ್ಣ-ಪ್ರಮಾಣ ಶುಲ್ಕ’ವೆಂದು ಹೇಳಿದರೂ ಇದು ಲಕ್ಷಾಂತರ ಬಳಕೆದಾರರ ಮೇಲೆ ವಿಧಿಸಿರುವ ಹೆಚ್ಚುವರಿ ಹೊರೆಯಾಗಿದೆ. ಬಳಕೆದಾರರು ಹೆಚ್ಚುವರಿ ಅನುಕೂಲಕ್ಕಾಗಿ ಅಥವಾ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕೇ ಅಥವಾ ಪಾವತಿಸಬಾರದು ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ಯಾವುದೇ ಪ್ಲಾಟ್‌ಫಾರ್ಮ್ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Post Office Scheme: ಈ ಸೂಪರ್ ಹಿಟ್ ಯೋಜನೆಯಲ್ಲಿ 50 ಸಾವಿರ ಠೇವಣಿ ಇರಿಸಿ, 3300 ಪಿಂಚಣಿ ಪಡೆಯಿರಿ

ಏತನ್ಮಧ್ಯೆ ಹೆಚ್ಚುವರಿ ಶುಲ್ಕದ ಹೊರೆ ತಪ್ಪಿಸಿಕೊಳ್ಳಲು ಗ್ರಾಹಕರು Google Pay ಮತ್ತು Amazon Pay ನಂತಹ ಇತರ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ. ಭಾರತದಲ್ಲಿನ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಸಹ  ತಮ್ಮದೇಯಾದ ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ಇಲ್ಲಿಯು ಸಹ ಯುಪಿಐ ಮತ್ತು ಇತರ ಪಾವತಿ ವಿಧಾನಗಳ ಮೂಲಕ ರೀಚಾರ್ಜ್ ಮಾಡಬಹುದಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News