ಬೆಂಗಳೂರು: ಮನೆ ಬಾಗಿಲಿಗೆ ಹಾಲು ಮೊಸರು ಪೂರೈಕೆಗೆ ಅಮೂಲ್‌ ಮುಂದಾಗಿರುವ ಬೆನ್ನಲ್ಲೇ ಈಗ ಅಮೂಲ್ ವಿರುದ್ಧ ಕನ್ನಡಿಗರ ಕಿಡಿಕಾರಿದ್ದು, ಅಷ್ಟೇ ಅಲ್ಲದೆ ನಂದಿನಿ ಉಳಿಸಿ ಎನ್ನುವ ಅಭಿಯಾನಕ್ಕೆ ಮುಂದಾಗಿದ್ದಾರೆ.ಸೇವ್‌ ನಂದಿನಿ ಕೆಎಂಎಫ್‌'ಹ್ಯಾಷ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡಿಗರು ಅಭಿಯಾನವನ್ನು ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತ್ಚರಿತವಾಗಿ ನ್ಯಾಯ ಕೊಡಿಸುವುದರಲ್ಲಿ ದೇಶದಲ್ಲಿ ರಾಜ್ಯದ ಪೊಲೀಸರು No.1


ಅಮುಲ್‌ನೊಂದಿಗೆ ಕೆಎಂಎಫ್‌ ವಿಲೀನ ವಿವಾದ ಬೆನ್ನಲ್ಲೇನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ಶುರುವಾಗಿದೆ.ಐಸ್‌ಕ್ರೀಮ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಅಮುಲ್ ಈಗ ಹಾಲು ಮತ್ತು ಮೊಸರನ್ನೂ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮನೆಗಳಿಗೆ ತಲುಪಿಸಲು ಮುಂದಾಗಿದ್ದಾರೆ.ಈ ಹಿನ್ನಲೆ ಅಮೂಲ್‌ ಬಗ್ಗೆ ಟ್ವಿಟರ್‌ನಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Karnataka Police: ತ್ಚರಿತವಾಗಿ ನ್ಯಾಯ ಕೊಡಿಸುವುದರಲ್ಲಿ ದೇಶದಲ್ಲಿ ರಾಜ್ಯದ ಪೊಲೀಸರು No.1


ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರಾಂಡ್‌ ಬಳಸುವುದಿಲ್ಲ,ಈಗ ನಂದಿನಿ ಜಾಗವನ್ನು ಅಮುಲ್‌ ಆಕ್ರಮಿಸಲು ಬರುತ್ತಿದೆ.ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು.ನಂದಿನಿಯನ್ನಷ್ಟೇ ಬಳಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಟ್ವಿಟ್ಟರ್ ಅಭಿಯಾನದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.