Karaga Festival: ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ.. ಯುಗ ಯುಗಗಳ ಚರಿತ್ರೆಯ.. ಭಾವೈಕ್ಯತೆಯ ಪ್ರತೀಕವಾದ ಕರಗ ಉತ್ಸವ ಕೊನೆಗೂ ಮಲ್ಲಿಗೆಯ ಕಂಪು ಅರಳಿಸಿ ಇಂದು ಅದ್ದೂರಿಯಾಗಿ ತೆರೆ ಬಿದಿದ್ದೆ. ಕರಗ ಕಂಡು ಭಕ್ತರ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು.


COMMERCIAL BREAK
SCROLL TO CONTINUE READING

ಹೌದು... ಹೂವಿನ ಅಲಂಕಾರ.. ರಾತ್ರಿಯಿಡೀ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು... ಗೋವಿಂದ ಗೋವಿಂದ ಎಂದು ಭಕ್ತಿಯಲ್ಲಿ ಮುಳುಗಿದ್ದ ಭಕ್ತರ ದಂಡು.  ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಸಂಪನ್ನಗೊಂಡಿದೆ. ಚೈತ್ರ ಪೂರ್ಣಿಮೆಯ ಈ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಅರ್ಚಕ ಜ್ಞಾನೇಂದ್ರ ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ, ಅಲ್ಲಿ ಸೇರಿದ್ದ ಸಹಸ್ರಾರು ಜನರ ಗೋವಿಂದ ಗೋವಿಂದ ಉದ್ಘೋಷ ಮುಗಿಲು ಮುಟ್ಟಿತು. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗ ಮೆರವಣಿಗೆ ಪೇಟೆ ಬೀದಿಗಳಲ್ಲಿ ಸಾಗಿ, ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ, ಭಾವೈಕ್ಯತೆಯ ಸಂದೇಶ ಸಾರಿ, ಬೆಳಗಿನ ಜಾವ 5 ಗಂಟೆ ಒಳಗೆ ಮರಳಿ ದೇಗುಲ ಸೇರಿದೆ.


ಇದನ್ನೂ ಓದಿ: ಅಫಜಲಪುರ ಹಾಗೂ ಆಳಂದದಲ್ಲಿ ಕಾಂಗ್ರೆಸ್‌ ಸಮಾವೇಶ


ಕರಗದ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಭಕ್ತಿ ಸಂಭ್ರಮ ಮೇಳೈಸಿತ್ತು. ಇಡೀ ದಿನ ಭಕ್ತರಲ್ಲಿ ಸಡಗರ ಮನೆ ಮಾಡಿತ್ತು.ಅಸಂಖ್ಯಾತ ಭಕ್ತಸಮೂಹ ಕರಗದ ವೈಭವ ವನ್ನು ಕಣ್ತುಂಬಿಕೊಂಡಿತು. ಇಂದು ಬೆಳಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಭಜನೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು.ದೇವಾಲಯದ ಆವರಣ ಮಲ್ಲಿಗೆ, ಕರ್ಪೂರದ ಪರಿಮಳದೊಂದಿಗೆ ಘಮಘಮಿ ಸುತ್ತಿತ್ತು. ಗರ್ಭಗುಡಿಯಎಲ್ಲಿ ದ್ರೌಪದಿದೇವಿ ಮಲ್ಲಿಗೆ ಹೂವಿನಿಂದ ಅಲಂಕಾರ, ಪೂಜೆ ಮಾಡಲಾಗಿದೆ.


ಇನ್ನು ಕಳೆದ ವರ್ಷ ದ್ರೌಪದಿದೇವಿಯ ಕರಗ ಹೊತ್ತು 9:30 ದೇವಸ್ಥಾನ ಬಂದು ತಲುಪಿತ್ತು ಆದರೆ ಈ ಬಾರಿ ಮುಂಜಾನೆ 5.30 ಗೆ ಧರ್ಮರಾಯ ದೇವಸ್ಥಾನಗಳ ತಲುಪಿದೆ.. ಸಂಗತಿ ಏನಪ್ಪಾ ಅಂದ್ರೆ ಕರಗ ದೇವಿಯ ದರ್ಶನ  ನೂರಾರು ಜನರಿಗೆ ಈ ಬಾರಿ ದೊರೆತಿಲ್ಲ ಹಾಗಾಗಿ ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಪರ ನಾಗೇಂದ್ರ ಮತ ಪ್ರಚಾರ


ಒಟ್ನಲ್ಲಿ ಬೆಂಗಳೂರು ಕರಗ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿರೋ ಸಾಂಪ್ರದಾಯಿಕ ಸಂಭ್ರಮ. ಅದು ಒಂದಲ್ಲ, ಎರಡಲ್ಲ, ಬರೊಬ್ಬರಿ 8 ಶತಮಾನಗಳ ವೈಭವದ ಸಡಗರ. ಈ ಬಾರಿ ಕೂಡ ಆ ವೈಭವದ ಸಂಭ್ರಮ ಅದ್ಧೂರಿಯಾಗಿ ನೆರವೇರಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಕರಗ ಕಣ್ತುಂಬಿಕೊಳ್ಳುವ ಮೂಲಕ ಪುನೀತರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.