ಬೆಂಗಳೂರು: Karnataka Diwali Guidelines - ಕರೋನಾ ಸಾಂಕ್ರಾಮಿಕದ (Corona Pandemic) ಮಧ್ಯೆ, ಕರ್ನಾಟಕ ಸರ್ಕಾರ ಶನಿವಾರ ದೀಪಾವಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ ಮತ್ತು ಜನರು ದೈಹಿಕ ಅಂತರ ಸೇರಿದಂತೆ ಇತರ ಕರೋನಾ ಸಂಬಂಧಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದೆ. ದೀಪಾವಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯ ಸರ್ಕಾರ ಅನುಮತಿ ಪಡೆದ ಮಾರಾಟಗಾರರು ಮಾತ್ರ ನವೆಂಬರ್ 1 ಮತ್ತು ನವೆಂಬರ್ 10 ರ ನಡುವೆ ವಸತಿ ಪ್ರದೇಶಗಳ ಹೊರಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದೆ. ಅಂಗಡಿಗಳ ನಡುವೆ 6 ಮೀಟರ್ ಅಂತರ ಕಡ್ಡಾಯ ಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ 23.10.2018ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದ್ದರಿಂದ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅಧಿಕಾರಿಗಳಿಂದ ಅನುಮತಿ ಪಡೆದ ವಿತರಕರು 1-11-2021 ರಿಂದ 10-11-2021 ರವರೆಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿಸಲಾಗಿದೆ. ಅಂಗಡಿಯಲ್ಲಿ ಅನುಮತಿ ಪತ್ರದ ಅಗತ್ಯವಿದೆ.


ಕರೋನಾಗೆ ಸಂಬಂಧಿಸಿದಂತೆ, ನೈರ್ಮಲ್ಯೀಕರಣ, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಮತ್ತು 6 ಅಡಿ ಅಂತರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮಾರ್ಗ ಸೂಚಿಗಳಲ್ಲಿ ಹೇಳಲಾಗಿದೆ. ಅಂಗಡಿಯಲ್ಲಿ ಜನದಟ್ಟಣೆಗೆ ಅವಕಾಶ ನೀಡಬಾರದು. ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು, ಜಿಲ್ಲಾಡಳಿತ, ನಿಗಮಗಳು ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.


ಇದನ್ನೂ ಓದಿ-Diwali 2021 Remedies: ಕುಂಕುಮ-ಸಾಸಿವೆ ಎಣ್ಣೆಯ ಈ ಸುಲಭ ಪರಿಹಾರವನ್ನು ಅನುಸರಿಸಿ ದೇವಿ ಲಕ್ಷಿ ಕೃಪೆಗೆ ಪಾತ್ರರಾಗಿ


ಸುಪ್ರಿಂ ಕೋರ್ಟ್ ಕಳೆದ ಶುಕ್ರವಾರ ನೀಡಿದ ತನ್ನ ಆದೇಶದಲ್ಲಿ ಪಟಾಕಿಯ ಮೇಲೆ ಸಂಪೂರ್ಣ ನಿಷೇಧವಿಲ್ಲ, ಆರೋಗ್ಯಕ್ಕೆ ಹಾನಿಕರ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಮೇಲೆ ಪರಿಣಾಮ ಬೀರುವ ಪಟಾಕಿಗಳನ್ನು ಮಾತ್ರ ನಿಷೇಧಿಸಲಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇತರರ ಆರೋಗ್ಯವನ್ನು ಪಣಕ್ಕಿಟ್ಟು ಹಬ್ಬ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇತರರ ಬದುಕಿನೊಂದಿಗೆ ಆಟವಾಡಲು ಬಿಡುವಂತಿಲ್ಲ. ಸುಪ್ರೀಂನ ಈ ಆದೇಶದ ಬಳಿಕ  ದೀಪಾವಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.


ಇದನ್ನೂ ಓದಿ-Vastu Tips For Diwali: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ದೀಪಾವಳಿಗೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ


ದೀಪಾವಳಿಯಂದು (Diwali 2021) ಕಡಿಮೆ ಮಾಲಿನ್ಯ ನಿಯಮಗಳ ಅಡಿ ಹಸಿರು ಪಟಾಕಿ ಅಥವಾ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಮತ್ತು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ (Supreme Court) ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಆದೇಶಗಳನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅಂದರೆ ದೀಪಾವಳಿಯ ಸಂಜೆ 8 ರಿಂದ ರಾತ್ರಿ 10 ರವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬಹುದು. ಇದಲ್ಲದೆ, ಕ್ರಿಸ್ಮಸ್ ಮತ್ತು ಹೊಸ ವರ್ಷದಂದು 11.55 ರಿಂದ 12.30 ರವರೆಗೆ ಪಟಾಕಿಗಳನ್ನು ಸಿಡಿಸಬಹುದು. ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯವು ಆದೇಶಿಸಿದೆ, ಹೋಶ್ ಪ್ರಕರಣವನ್ನು ನವೆಂಬರ್ 30 ರಂದು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ-Diwali 2021: ದೀಪಾವಳಿಯಂದು ಲಕ್ಷ್ಮಿಯೊಂದಿಗೆ ಈ ದೇವರನ್ನು ಪೂಜಿಸಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ